Breaking News
Home / ರಾಜ್ಯ / ಬಿಎಂಟಿಸಿಯಿಂದ ಗುಡ್ ನ್ಯೂಸ್: ಕೇವಲ 450 ರೂ.ಗೆ ಟೂರ್ ಪ್ಯಾಕೇಜ್, ವಿವರ ಇಲ್ಲಿದೆ

ಬಿಎಂಟಿಸಿಯಿಂದ ಗುಡ್ ನ್ಯೂಸ್: ಕೇವಲ 450 ರೂ.ಗೆ ಟೂರ್ ಪ್ಯಾಕೇಜ್, ವಿವರ ಇಲ್ಲಿದೆ

Spread the love

ಬೆಂಗಳೂರು: ಬಿಎಂಟಿಯಿಂದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇವಲ 450 ರೂ. ಟೆಂಪಲ್ ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದಕ್ಕೆ ಬುಕ್ ಮಾಡುವುದು ಹೇಗೆ ಇಲ್ಲಿದೆ ಡೀಟೈಲ್ಸ್.

ವಾರಂತ್ಯದಲ್ಲಿ ಬೆಂಗಳೂರು ಆಸುಪಾಸು ಇರುವ ದೇವಾಲಯಗಳಿಗೆ ಟೂರ್ ಹೋಗಬೇಕು ಎಂದರೆ ಬಿಎಂಟಿಸಿ ಬೆಸ್ಟ್ ಆಫರ್ ಕೊಡುತ್ತಿದೆ.

ಕೇವಲ 450 ರೂ.ಗಳಿಗೆ ಬೆಂಗಳೂರು ಆಸುಪಾಸು ಇರುವ ಸುಮಾರು 8 ದೇವಾಲಯಗಳಿಗೆ ನಿಮ್ಮನ್ನು ಕರೆದೊಯ್ಯಲಿದೆ. ಇದು ವಾರಂತ್ಯ ಶನಿವಾರ ಮತ್ತು ಭಾನುವಾರಕ್ಕೆ ಮಾತ್ರ ಮೀಸಲು.

ಬೆಳಿಗ್ಗೆ 6.30 ಕ್ಕೆ ಹೊರಟು ಸಂಜೆ 6.30 ಕ್ಕೆ ವಾಪಸ್ ಆಗಬಹುದು. ಮೆಜೆಸ್ಟಿಕ್ ನಿಂದ ಎಸಿ ಬಸ್ ನಲ್ಲಿ ಹೊರಟು ಸಂಜೆ 6.30 ಕ್ಕೆ ಮೆಜೆಸ್ಟಿಕ್ ಗೆ ವಾಪಸ್ ಆಗುತ್ತೀರಿ. ವಯಸಸ್ಕರಿಗೆ 450 ರೂ. ಮಕ್ಕಳಿಗೆ 350 ರೂ. ಟಿಕೆಟ್ ದರವಿದೆ. ಮೇ 31 ರಿಂದ ಅಂದರೆ ಈ ವಾರಂತ್ಯದಿಂದಲೇ ಪ್ಯಾಕೇಜ್ ಸೌಲಭ್ಯ ಲಭ್ಯವಿರುತ್ತದೆ.

 

ಯಾವೆಲ್ಲಾ ದೇವಾಲಯಕ್ಕೆ ಭೇಟಿ?

ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಬನಶಂಕರಿ ದೇವಾಲಯ, ರಾಜರಾಜೇಶ್ವರಿ ದೇವಾಲಯ, ಆರ್ಟ್ ಆಫ್ ಲಿವಿಂಗ್ ಸೆಂಟರ್, ಇಸ್ಕಾನ್ ದೇವಾಲಯ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಶ್ರೀದೇವಿ ಕುರಮಾರಿ ಅಮ್ಮ ದೇವಾಲಯ, ಓಂಕಾರ ಹಿಲ್ಸ್ ದೇವಾಲಯಕ್ಕೆ ಭೇಟಿ ನೀಡಬಹುದು.

ಬುಕುಂಗ್ ಮಾಡಲು https://www.ksrtc.in/ ಗೆ ಲಾಗಿನ್ ಆಗಿ ಬುಕ್ ಮಾಡಬಹುದು. ಇಲ್ಲವೇ ಕೆಂಪೇಗೌಡ ಬಸ್ ನಿಲ್ದಾಣದ ಸಹಾಯವಾಣಿ 080-22483777, 7760991170 ಗೆ ಕರೆ ಮಾಡಿ ಬುಕಿಂಗ್ ಮಾಡಬಹುದು.


Spread the love

About Ad9 Haberleri

Check Also

ಮರಿಯಪ್ಪ ಮರಿಯಪ್ಪಗೋಳ ಅವರಿಗೆ ಸಮಾಜ ಸೇವಕ ಪ್ರಶಸ್ತಿ 

Spread the love ಬೆಂಗಳೂರು : ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ) ವತಿಯಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ …

Leave a Reply

Your email address will not be published. Required fields are marked *