“ಬೆಳಗಾವಿ: ನಿಯಮ ಉಲ್ಲಂಘಿಸಿ ವಾಹನಗಳ ಮೇಲೆ ಸಂಘ ಸಂಸ್ಥೆ , ಚಿಹ್ನೆ ಹಾಗೂ ಲಾಂಛನವನ್ನು ಅಳವಡಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಅವರು ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಹನಗಳ ನೋಂದಣಿ ನಾಮಫಲಕಗಳ ಹೊರತು ಯಾವುದನ್ನು ಅಳಡಿಸಬಾರದು, ಈಗಾಗಲೇ ಅಳವಡಿಸಿದರೆ ತೆರವುಗೊಳಿಸಬೇಕು ಉಚ್ಛ ನ್ಯಾಯಾಲಯದ ಆದೇಶವನ್ನು ಸಾರಿಗೆ ಇಲಾಖೆಯಿಂದ ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಇಲ್ಲವಾದರೆ ವಾಹನವನ್ನು ಸಾರಿಗೆ ಸಿಬ್ಬಂದಿ ಮುಟ್ಟುಗೋಲು ಮಾಡಿಕೊಳ್ಳುತ್ತದೆ ಎಂದರು.
ಸವಾರರಾದ ಸಂಘ, ಸಂಸ್ಥೆಗಳು, ಬಿಬಿಎಂಪಿ, ಬಿಡಿಎ, ಕೆಎಚ್‍ಪಿ, ಕೆಎಚ್‍ಎಫ್‍ಸಿ, ಎಂಎಸ್‍ಐಎಲ್, ಕೆಪಿಟಿಸಿಎಲ್, ಬೆಸ್ಕಾಂ ಸೇರಿದಂತೆ ಯಾರಾದ್ರೂ ನೋಂದಣಿ ಫಲಕದ ಜೊತೆಗೆ ನಾಮಫಲಕವನ್ನು ಹಾಕಿದ್ದರೆ ತಕ್ಷಣವೇ ತೆರವು ಮಾಡಬೇಕು.
ಈಗಾಗಲೇ ಈ ವಿಷಯ ಕುರಿತು ತನಿಖಾ ತಂಡ ಸೂಚನೆ ನೀಡಲಾಗಿದೆ. ತೆರವುಗೊಳಿಸಲು ಸಜ್ಜಾಗಿದ್ದಾರೆ. ಜಿಲ್ಲಾಧಿಕಾರಿಗಳಕಚೇರಿ ಆವರಣದಲ್ಲಿ ಅನಧಿಕೃತವಾಗಿ ನಾಮಫಲಕ ಅಳವಡಿಸಿದ ದ 4 ವಾಹನಗಳ ಬೋರ್ಡ ನ್ನು ತೆರವುಗೊಳಿಸಲಾಗಿದೆ. ಹಾಗೂ ಸುವರ್ಣಸೌಧ ಬಳಿಯೂ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಾರೆ. “