
ಬೆಳಗಾವಿ: ಶಬರಿಮಲೆ ಯಾತ್ರೆ ಮಾಡುವ ಶ್ರೀ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಹಾಗೂ ಭಕ್ತರಿಗೆ ಪುನಾ-ಏರ್ನಾಕುಲಂ ಸಂಚರಿಸುವ ರೈಲ್ವೆಯಲ್ಲಿ ಆಸನ ವ್ಯವಸ್ಯತೆ ಕಲ್ಪಿಸಬೇಕೆಂದು ಆಗ್ರಹಿಸಿ ರೈಲ್ವೆ ಜನರಲ್ ಮ್ಯಾನೇಜರ್ ಡಿ.ಅನಿಲ ಕುಮಾರ ಅವರಿಗೆ ಭಾರತೀಯ ಅಯ್ಯಪ್ಪ ಸೇವಾ ಸಂಘ ಬೆಳಗಾವಿ ಜಿಲ್ಲಾ ಘಟಕ ಪದಾಧಿಕಾರಿಗಳು ಬುಧವಾರದಂದು ಮನವಿ ಸಲ್ಲಿಸಿದರು.
ಬೆಳಗಾವಿ ಮತ್ತು ಜಿಲ್ಲೆಯಿಂದ ಶಬರಿಮಲೆ ಯಾತ್ರೆ ಮಾಡುತ್ತಿರುವ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪೂರ್ಣಾ ಎಕ್ಸ್‍ಪ್ರೆಸ್ ರೈಲಿನಲ್ಲಿ ಡಿಸೆಂಬರ್ 24. ಹಾಗೂ 2024ರ ಜನವರಿ 7 ರಂದು ಪ್ರಯಾಣಿಸುತ್ತಿರುವ ಕಾಯುತ್ತಿರುವವರ ಪಟ್ಟಿ ಇರುವುದರಿಂದ ಎಲ್ಲಾ ಟಿಕೆಟಗಳನ್ನು ದೃಢೀಕರಿಸಬೇಕು ಹಾಗೂ ಹೆಚ್ಚುವರಿ ಬೋಗಿಯನ್ನು ಅಳವಡಿಸಬೇಕೆಂದು ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಯ್ಯಪ್ಪ ಸ್ವಾಮಿ ಧರ್ಮ ಪ್ರಚಾರಕರು ಮಾರುತಿ ಕೋಳಿ ಬೆಳಗಾವಿ ಜಿಲ್ಲಾಧ್ಯಕ್ಷ ಆನಂದ ಶೆಟ್ಟಿ, ಬೆಳಗಾವಿ ಜಿಲ್ಲಾಉಪಾಧ್ಯಕ್ಷ ಸುರೇಶ ತಳವಾರ, ಅಡಿವೆಪ್ಪ ಜೋಳದ, ಮಲ್ಲಿಕಾರ್ಜುನ, ಶಿವರಾಜ ನವಲನ್ನವರ ಸೇರಿದಂತೆ ಅನೇಕ ಇದ್ದರು.
Ad9 News Latest News In Kannada