ಮೂಡಲಗಿ : ಪಟ್ಟಣದ ಕಲ್ಮೇಶ್ವರ ವೃತ್ತದಿಂದ ಸರ್ಕಾರಿ ಪ್ರಾಥಮಿಕ ಬಾಲಕರ ಶಾಲೆಯವರೆಗೆ ಡಾಂಬರೀಕರಣ ರಸ್ತೆ ಕಾಮಗಾರಿಗೆ ಭೂಮಿ ಪೂಜೆಯನ್ನು ಬುಧವಾರದಂದು ನೆರವೇರಿಸಲಾಯಿತು.
ಪಟ್ಟಣದಲ್ಲಿ 1.62 ಕೂಟಿ ರೂ, ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಗೋಕಾಕ-ಮೂಡಲಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗೌರವಾಧ್ಯಕ್ಷ ಹಾಗೂ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದ ಸರ್ವಾಂಗಿನ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದು, ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ, ಪಟ್ಟಣದ ಮುಖಂಡಾರದ ರವಿಂದ್ರ ಸೋನವಾಲ್ಕರ, ಸಂತೋಷ ಸೋನವಾಲ್ಕರ, ಹಣಮಂತ ಗುಡ್ಲಮನಿ, ಮರಿಯಪ್ಪ ಮರೆಪ್ಪಾಗೊಳ, ಸುಭಾಸ ಸಣ್ಣಕ್ಕಿ, ಹುಸೇನ ಶೇಖ, ಗಫಾರ್ ಡಾಂಗೆ, ಈರಣ್ಣ ಬನ್ನೂರ, ಅನ್ವರ್ ನಧಾಪ್ ಡಾ ಎಸ್.ಎಸ್.ಪಾಟೀಲ, ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
Check Also
ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …