ಬೆಳಗಾವಿ : ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಬೆದರಿಕೆಯ ಕರೆ ಬಂದಿದೆ. ಅಕ್ಟೋಬರ್ 19ರಂದು ಅಂದರೆ ಶನಿವಾರ, ಇ ಮೇಲ್ ಮೂಲಕ ಸಂದೇಶ ರವಾನಿಸಿರುವ ದುಷ್ಕರ್ಮಿಗಳು, ಏರ್‌ಪೋರ್ಟ್ ಅಥಾರಿಟಿಗಳಿಗೆ ಮೇಲ್ ಮಾಡಿ, ಚೆನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದರು.
ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕರಾದ ತ್ಯಾಗರಾಜ್ ಅವರ ಇಮೇಲ್‌ಗೆ ಬೆದರಿಕೆ ಪತ್ರ ಬಂದಿದೆ. ಆದರೆ, ಬೆಳಗಾವಿಗೆ ಚೆನೈನಿಂದ ಯಾವುದೇ ತರಹದ ವಿಮಾನ ಸಂಪರ್ಕ ಇರುವುದಿಲ್ಲ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಲ್ ಎಲ್ಲಿಂದ ಬಂದಿದೆ ಯಾರು ಮಾಡಿದ್ದಾರೆ ಅಂತಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.