ಕೊರೊನಾ ವೈರಸ್ ಎಂಬ ಕ್ರೂರಿ ಕಾಯಿಲೆಗೆ ಇಡೀ ಜಗತ್ತೆ ಬೆಚ್ಚಿಬಿದ್ದಿದೆ. ಸರಕಾರಗಳು ಸಾರ್ವಜನಿಕರ ಆರೋಗ್ಯದ ಕಡೆ ಹೆಚ್ಚಿನ ನಿಗಾ ಇಡುತ್ತಿದೆ. ಆದ್ದರಿಂದ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಮೂಲಕ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡುವುದರ ಮೂಲಕ ಸಂಕೇಶ್ವರ ನಗರದಲ್ಲಿ ಪ್ರವೇಶ ನೀಡುತ್ತಿದ್ದಾರೆ.
ರಾಜ್ಯದ ಗಡಿಭಾಗವಾಗಿರುವ ಮಹಾರಾಷ್ಟ್ರದ ಗಡಿಂಗ್ಲಜ್ ದಿಂದ ಬರುವವರನ್ನು ನಿಲ್ಲಿಸಿ ಚೆಕ್ ಪೋಸ್ಟ್ ಮೂಲಕ ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಯವರು ಪ್ರಯಾಣಿಕರನ್ನು ತಡೆದು ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಪರೀಕ್ಷೆ ನಡೆಸಿ ಸಂಪೂರ್ಣ ವಿವರ ಪಡೆಯುತ್ತಿದಾರೆ.
ಇದೇ ರೀತಿ ಲಾಕ್‍ಡೌನ್ ಹಿನ್ನಲೆ ನಗರದಲ್ಲಿ ಎರಡನೇ ದಿನವು ಬಂದ್ ಮುಂದುವರಿದಿದೆ. ಅಂಗಡಿಗಳು, ಬಸ್ ಸಂಚಾರ, ಹೋಟೆಲ್ ಸೇರಿದಂತೆ ಇನ್ನಿತರ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಜನರಿಗೆ ಪೊಲೀಸರು ದಿನವಿಡೀ ಕೊರೊನಾ ಜಾಗೃತಿ ಮೂಡಿಸುತ್ತಿದಾರೆ. ನಗರದ ಬೀದಿ,ಬೀದಿ ವಾಹನದಲ್ಲಿಯೇ ಸುತ್ತುತ್ತ ಸಂಕೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜನಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಹೈ ಅಲರ್ಟ್ ಘೋಷಣೆ ಮಾಡಿದರೂ ಇನ್ನು ಕೆಲ ಜನರು ಓಡಾಡುವದು, ಗುಂಪು ಸೇರುವದು ಮಾತ್ರ ನಿಂತಿಲ್ಲ.ಆದರೆ ಮುಂಜಾಗ್ರತಾ ಕ್ರಮವನ್ನು ಎಲ್ಲರು ಕಡ್ಡಾಯವಾಗಿ ಪಾಲಿಸಬೇಕು ಎಂನುವುದು ಪ್ರಜ್ಞಾವಂತರ ಸಲಹೆಯಾಗಿದೆ.
ವರದಿ: ಸಚೀನ ಕಾಂಬಳೆ