ಮೂಡಲಗಿ – ದೇಶಾದ್ಯಂತ ಕರೋನ ಅಟ್ಟಹಾಸ ಮುಂದುವರೆದಿದೆ ಮೂಡಲಗಿ ನಗರದಲ್ಲಿ ಸಂಪೂರ್ಣ ಬಂದ್ ಮಾಡಿ ಸೆಕ್ಷನ್ 144 ಜಾರಿ ಮಾಡಲಾಗಿದೆ . ಪೊಲೀಸ ಇಲಾಖೆ ಮತ್ತು ತಂಡದಿಂದ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದೆ. ಆರಕ್ಷಕರ ಕಾರ್ಯ ನಿಜವಾಗಲೂ ಶ್ಲಾಘನೀಯ. ಆದರೆ ನಗರದಲ್ಲಿರುವ ಸುಮಾರು 80 ರಷ್ಟು. ಮತ್ತು ೨೦೦೦ ಸಾವಿರಕ್ಕಿಂತ ಹೆಚ್ಚು ಜನ ಕಾರ್ಯನಿರ್ವಹಸುತಿದ್ದರೆ, ಖಾಸಗಿ ಬ್ಯಾಂಕಗಳು ಮತ್ತು ಸೊಸೈಟಿಗಳು ಅರೆ ಸರಕಾರಿಯತರ ಬ್ಯಾಂಕಗಳು
ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಸರಕಾರದ ಆದೇಶ ಕೇವಲ ರಾಷ್ಟಿಕೃತ ಬ್ಯಾಂಕಗಳು ಮಾತ್ರ ಸೇವೆ ಸಲ್ಲಿಸಬೇಕು ಆದರೆ ಮೂಡಲಗಿ ನಗರದಲ್ಲಿ ಹಾಗೆ ನಡಿಯುತ್ತಿಲ್ಲ.
ಹಾಗಾದರೆ ಹೊಟ್ಟೆಪಾಡಿಗಾಗಿ ದಿನಗೂಲಿ ಮಾಡಿ ಬದುಕುತ್ತಿರುವವರು ಕೂಡ ಇದಕ್ಕೆ ಬೆಂಬಲ ನೀಡಿದರು ಇವರು ಏಕೆ ನೀಡಲಿಲ್ಲ ? ಇವರ ಸಂಪಾದನೆ ದಿನಗೂಲಿ ಮಾಡುವನ ಕಿಂತ ಕಡಿಮೇನಾ ? ಸ್ಥಳೀಯ ಸಂಘ ಸಂಸ್ಥೆಗಳು ವರ್ಷದ ಅಂತ್ಯ ಅಂತ ಹೇಳಿ ಜನರು ತಮ್ಮ ತಮ್ಮ ವ್ಯವಹಾರಕ್ಕೆ ಕಿಕ್ಕಿರಿದು ಸರದಿ ಸಾಲಿನಲ್ಲಿ ನಿಂತ್ತಿರುವುದು ಸರ್ವೇ ಸಾಮಾನ್ಯವಾಗಿದೆ ಇದರಿಂದ ಸೋಂಕು ಹರಡುವದು. ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ನಡೆದು ಕೊಳ್ಳುತ್ತಿವೆ.
ಇದು ಜಿಲ್ಲಾಡಳಿತ ಗಮನಕ್ಕೆ ಬಂದಿಲ್ಲ್ವವೋ ? ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ವಹಿಸಿ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು.