Breaking News
Home / Uncategorized / ಡಿಸೆಂಬರ್‌ನಲ್ಲಿ ಬೆಳಗಾವಿಗೆ ಬರಾಕ್‌ ಒಬಾಮಾ?

ಡಿಸೆಂಬರ್‌ನಲ್ಲಿ ಬೆಳಗಾವಿಗೆ ಬರಾಕ್‌ ಒಬಾಮಾ?

Spread the love

ಬೆಂಗಳೂರು : ಬರುವ ಡಿಸೆಂಬರ್‌ 24ಕ್ಕೆ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ ಆಚರಿಸಲಿದೆ. ಇದನ್ನು ಐತಿಹಾಸಿಕ ದಿನವನ್ನಾಗಿ ಆಚರಿಸಲು ಮುಂದಾಗಿರುವ ಕಾಂಗ್ರೆಸ್‌, ಅದೇ ದಿನ ಕುಂದಾನಗರಿಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರೆಲ್ಲರೂ ಆಗಮಿಸಿ ಕಾಂಗ್ರೆಸ್‌ ಸಭೆ ನಡೆಸಲಿದ್ದಾರೆ.
ಈ ಕ್ಷಣಗಳಿಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರೂ ಸಾಕ್ಷಿಯಾಗಲಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಬುಧವಾರ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ “ಗಾಂಧಿ ಭಾರತ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌, 100 ವರ್ಷಗಳ ಹಿಂದೆ ನಡೆದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

1924ರ ಡಿಸೆಂಬರ್‌ 24, 25 ಮತ್ತು 26ರಂದು ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ನಡೆದಿತ್ತು. ಬರುವ ಡಿಸೆಂಬರ್‌ನಲ್ಲಿ ಈ 3 ದಿನಗಳ ಪೈಕಿ ಒಂದು ದಿನ ರಾಷ್ಟ್ರೀಯ ನಾಯಕರು ಬೆಳಗಾವಿಗೆ ಆಗಮಿಸಲಿದ್ದಾರೆ. ಅಲ್ಲಿಯೇ ಕೆಪಿಸಿಸಿ ಸಭೆ ನಡೆಯಲಿದ್ದು, ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರೂ ಇದಕ್ಕೆ ಸಾಕ್ಷಿಯಾಗಲಿದ್ದಾರೆ. ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಿಂದ ಒಂದೊಂದು ಜ್ಯೋತಿ ಬೆಳಗಾವಿಗೆ ಬರಲಿದೆ. ಇದು ಮತ್ತೂಂದು ಐತಿಹಾಸಿಕ ದಿನವಾಗಲಿದೆ ಎಂದವರು ಹೇಳಿದರು.


Spread the love

About Ad9 Haberleri

Check Also

‘ಪ್ರಭಾವಿ ಸ್ವಾಮೀಜಿ ಸೆಕ್ಸ್​ CDಯಲ್ಲಿ ಮಂದಾರ ಪುಷ್ಪವು ನೀನು ಹಾಡೂ ಇದೆ’: ಜಗದೀಶ್ :

Spread the loveಬೆಂಗಳೂರು : ಜಾತಿ ನಿಂದನೆ ಆರೋಪದ ಕೇಸ್​​ನಲ್ಲಿ ಬಂಧಿತರಾಗಿರುವ ವಕೀಲ ಕೆ.ಎನ್​​.ಜಗದೀಶ್​ ಅವರು ಪ್ರಭಾವಿ ಸ್ವಾಮೀಜಿ ಓರ್ವರ …

Leave a Reply

Your email address will not be published. Required fields are marked *