ಬೆಳಗಾವಿ: ಜಿಲ್ಲೆಯಲ್ಲಿದಿನಾಂಕ 27/03/2022ರಂದು ಬೆಳಗಾವಿಯ ಸಾಹಿತ್ಯ ಭವನದಲ್ಲಿ ನಾಡಿನ ಸಮಾಚಾರ ದಿನಪತ್ರಿಕೆಯ 7ನೇ ವಾರ್ಷಿಕೋತ್ಸವದ ನಿಮಿತ್ಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೋಕಾಕದ ಸಾಹಿತಿಗಳಾದ ಶ್ರೀಮತಿ ವಿದ್ಯಾ ರೆಡ್ಡಿ ಅವರ ಸಾಹಿತ್ಯ ಸೇವೆಗಾಗಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬಸವರಾಜ ಸುಣಗಾರ, ಸಂತೋಷ್ ಬಿದರಗಡ್ಡೆ, ಶ್ರೀ ಅರಿಹಂತ ಬಿರಾದಾರ್, ರಾಷ್ಟ್ರಕೂಟ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಬಸವರಾಜ ಗಾರ್ಗಿ, ಕರ್ನಾಟಕ ಜಾನಪದ …
Read More »ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗ ನಿರ್ಮಾಣಗೊಂಡ ಹೆಚ್ಚುವರಿ ಕೊಠಡಿ ಉದ್ಘಾಟನೆ ಮಾಡಿದ : ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ ಗ್ರಾಮೀಣ : ಬೆಳವಟ್ಟಿ ಗ್ರಾಮದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಿ, ಮಾತನಾಡಿದ ಬೆಳಗಾವಿ ಗ್ರಾಮೀಣ ಭಾಗ ಶಾಸಕರು ಲಕ್ಷ್ಮೀ ಹೆಬ್ಬಾಳಕರ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯನ್ನು ಕಾಣುತ್ತಿದ್ದು, ರಾಜ್ಯದಲ್ಲಿಯೇ ಮಾದರಿ ಕ್ಷೇತ್ರದತ್ತ ಹೆಜ್ಜೆಗಳನ್ನು ಇಡುತ್ತಿದೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಸದಾಕಾಲವೂ ನನ್ನ ಮೇಲಿರಲಿ ಎಂದು ಹೃದಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಎಸ್ ಡಿ …
Read More »ದಶಕಗಳಿಂದ ಒಂದೇ ಕಛೇರಿಯಲ್ಲಿ ಬೇರು ಬಿಟ್ಟ ಅಧಿಕಾರಿ ವರ್ಗಾವಣೆ ಯಾವಾಗ..?
ಬೆಳಗಾವಿ: ಸರಕಾರ ಆಡಳಿತ ಸುಧಾರಣೆ ಭ್ರಷ್ಟಾಚಾರ ನಡರಯಬಾರದು ಎಂಬ ಉದ್ದೇಶದಿಂದ ಹಲವಾರು ಕಾಯ್ದೆ ಕಾನೂನು ರೂಪಿಸಿದೆ ಹಾಗೆಯೆ ಒಬ್ಬ ಅಧಿಕಾರಿ ಒಂದೇ ಕಛೇರಿಯಲ್ಲಿ ಒಂದು ಹುದ್ದೆಯಲ್ಲಿ ಜಾಸ್ತಿ ಸಮಯ ಇದ್ದರೆ ಅಲ್ಲಿ ಭ್ರಷ್ಟಾಚಾರಕ್ಕೆ ಅನುವು ಮಾಡಿ ಕೊಟ್ಟ ಹಾಗೆ ಆಗತ್ತೆ ಜೊತೆಗೆ ಸ್ಥಳಿಯ ಪ್ರಭಾವಿಗಳ ಜೊತೆ ಬಾಂಧವ್ಯ ಹೋಂದುತ್ತಾರೆ. ಅದರಿಂದ ಆಡಳಿತ ವ್ಯವಸ್ಥೆ ಹದಗೆಡಬಹುದು ಎನ್ನುವ ಉದ್ದೇಶದಿಂದ ಒಬ್ಬ ಅಧಿಕಾರಿ ಒಂದು ಕಛೇರಿಯಲ್ಲಿ ಗರಿಷ್ಠ ಮೂರರಿಂದ ಐದು ವರ್ಷ ಮಾತ್ರ …
Read More »ನಿಯಮ ಉಲ್ಲಂಘಿಸಿ ವಾಹನಗಳ ಮೇಲೆ ಕಟ್ಟು ನಿಟ್ಟಿನ ಕ್ರಮ
“ಬೆಳಗಾವಿ: ನಿಯಮ ಉಲ್ಲಂಘಿಸಿ ವಾಹನಗಳ ಮೇಲೆ ಸಂಘ ಸಂಸ್ಥೆ , ಚಿಹ್ನೆ ಹಾಗೂ ಲಾಂಛನವನ್ನು ಅಳವಡಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಅವರು ಎಚ್ಚರಿಕೆ ನೀಡಿದ್ದಾರೆ. ಸಾರಿಗೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಹನಗಳ ನೋಂದಣಿ ನಾಮಫಲಕಗಳ ಹೊರತು ಯಾವುದನ್ನು ಅಳಡಿಸಬಾರದು, ಈಗಾಗಲೇ ಅಳವಡಿಸಿದರೆ ತೆರವುಗೊಳಿಸಬೇಕು ಉಚ್ಛ ನ್ಯಾಯಾಲಯದ ಆದೇಶವನ್ನು ಸಾರಿಗೆ ಇಲಾಖೆಯಿಂದ ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಇಲ್ಲವಾದರೆ ವಾಹನವನ್ನು ಸಾರಿಗೆ …
Read More »ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಗೋಲ್‌ಮಾಲ್
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಮತ್ತೊಂದು ಗೋಲ್‌ಮಾಲ್ ಪತ್ತೆಯಾಗಿದೆ. ರೈತರಿಗೆ ಬಾಕಿ ಹಣ ಕೊಡದೆ ವಂಚನೆ ಬಳಿಕ ಮತ್ತೊಂದು ಹಗರಣ ಬಯಲಾಗಿದೆ. ಕಾರ್ಖಾನೆ ಕಬ್ಬು ಪೂರೈಸಿದ ರೈತರಿಗಷ್ಟೇ ಅಲ್ಲದೇ ಕಾರ್ಖಾನೆಗೆ ಸಂಬಂಧ ಇಲ್ಲದ ಅಮಾಯಕರಿಗೂ ಮೋಸ ಮಾಡಿದೆ. ಬೆಳಗಾವಿ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ವಿಮಾ, ಆರ್ಥಿಕ ನೆರವು ನಿಡುವುದಾಗಿ ಜನರಿಂದ ದಾಖಲೆ ಸಂಗ್ರಹ ಮಾಡಿತ್ತು. ಎಂ.ಕೆ. ಹುಬ್ಬಳ್ಳಿ …
Read More »ಬೆಳಗಾವಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ : ಡಿಸಿ ಎಂ ಜಿ ಹೀರೆಮಠ
ಬೆಳಗಾವಿ ಜಿಲ್ಲೆಯಲ್ಲಿ ಜನವರಿ 18ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 1-9ನೇ ತರಗತಿ ಶಾಲೆಗಳಿಗೆ ರಜೆ ಘೋಷಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. 10ನೇ ತರಗತಿ ಮೇಲ್ಪಟ್ಟವರಿಗೆ ಎಂದಿನಂತೆ ತರಗತಿ ನಡೆಯಲಿವೆ ಎಂದು ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಚಿಕ್ಕೋಡಿ, ಬೆಳಗಾವಿ ಬಿಇಒಗಳ ಜತೆಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಕುರಿತು ತೀರ್ಮಾನ ಮಾಡಲಾಗಿದೆ. ಕನಿಷ್ಠ ಏಳು ದಿನಗಳ ಕಾಲ …
Read More »ನಿಮ್ಮ ಶಕ್ತಿಯೆ ನನಗೆ ಶಕ್ತಿಯಾಗಲಿ : ಲಖನ್ ಜಾರಕಿಹೋಳಿ
ಬೆಳಗಾವಿ: ನಿಮ್ಮ ಮೊದಲನೆಯ ಪ್ರಾಶಸ್ಯತೆ ಮತವನ್ನು ನನಗೆ ನೀಡಿ ನಿಮ್ಮ ಗ್ರಾಮದ ಅಬಿವೃದ್ದಿ ಕೆಲಸ ಮಾಡಲು ಅನೂಕೂಲ ಮಾಡಿ ನಿಮ್ಮ ಶಕ್ತಿಯೆ ನನಗೆ ಶಕ್ತಿಯಾಗಲಿ, ಎಂದು ಹಿಂಡಲಗಾದ ಶ್ರೀ ಗಣೇಶ ಮಂಗಲ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಪಕ್ಷೇತರ ಅಬ್ಯರ್ಥಿಯಾದ ಲಖನ್ ಜಾರಕಿಹೋಳಿಯವರು ಮತಯಾಚನೆಯ ಸಭೆಯಲ್ಲಿ ಮಾತನಾಡಿ ಹಿಂಡಲಗಾದಲ್ಲಿನ ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ ಮಾಡಿ. ನಿಮ್ಮ ಅಮೂಲ್ಯವಾದ ಮತವನ್ನು ಸೇಜ ನಂಬರ 5 ರ ಮುಂದೆ ಪ್ರಥಮ ಮತವನ್ನು ನೀಡಿ ಹೆಚ್ಚಿನ …
Read More »ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಚನ್ನರಾಜ ಹಟ್ಟಿಹೊಳಿ ಪೈನಲ್
ಬೆಳಗಾವಿ: ವಿಧಾನ ಪರಿಷತ್ತಿನ ಚುನಾವಣೆಗೆ ಬೆಳಗಾವಿಯಲ್ಲಿ ಅಖಾಡಾ ರೆಡಿಯಾಗಿದ್ದು, ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯನ್ನಾಗಿ ಚನ್ನರಾಜ ಹಟ್ಟಿಹೊಳಿ ಅವರನ್ನು ಆಯ್ಕೆ ಮಾಡಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಧ್ಯಾಹ್ನ ನಡೆದ ಮಹತ್ವದ ಸಭೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರ ಹೆಸರು ಫೈನಲ್ ಆಗಿದೆ. ಬೇರೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕಿಯೆ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿದ್ದು ಪರಿಷತ್ …
Read More »ನ. 19 ರಂದು ಬೆಳಗಾವಿಯಲ್ಲಿ ಅಖಿಲ ಭಾರತ 68ನೇ ರಾಜ್ಯ ಮಟ್ಟದ ಸಹಕಾರ ಸಪ್ತಾಹ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ : ಅಖಿಲ ಭಾರತ 68ನೇ ರಾಜ್ಯ ಮಟ್ಟದ ಸಹಕಾರ ಸಪ್ತಾಹವನ್ನು ಬರುವ 19 ರಂದು ಬೆಳಗಾವಿಯಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಮಂಗಳವಾರದಂದು ನಗರದ ಜಿಲ್ಲಾ ಹಾಲು ಒಕ್ಕೂಟದಲ್ಲಿ ಜರುಗಿದ ಸಹಕಾರ ಸಪ್ತಾಹ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಸಪ್ತಾಹ ಅಂಗವಾಗಿ ನವ್ಹೆಂಬರ 14 ರಿಂದ 21 ರವರೆಗೆ ಪ್ರತಿದಿನ ಸಹಕಾರಿ …
Read More »ಏ.14ರ ವರೆಗೆ ಯಾರೂ ಮನೆಯಿಂದ ಹೊರಗಡೆ ಬರಬೇಡಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ
ಗೋಕಾಕ: ನಿಮ್ಮ ಜೀವ ಉಳಿಸಿಕೊಳ್ಳಲು ಏಪ್ರೀಲ್ 14ರ ವರೆಗೆ ಮನೆಯಿಂದ ಆಚೆ ಬರಬೇಡಿ. ಮನೆಯಲ್ಲಿಯೇ ಉಳಿದುಕೊಂಡು ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮಹಾಮಾರಿ ಕೊರೋನಾ ಸೋಂಕಿನಿಂದ ದೇಶವನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿವೆ. ಅವುಗಳನ್ನು …
Read More »