Breaking News

ದಶಕಗಳಿಂದ ಒಂದೇ  ಕಛೇರಿಯಲ್ಲಿ ಬೇರು ಬಿಟ್ಟ ಅಧಿಕಾರಿ ವರ್ಗಾವಣೆ ಯಾವಾಗ..?

Spread the love

ಬೆಳಗಾವಿ: ಸರಕಾರ ಆಡಳಿತ ಸುಧಾರಣೆ ಭ್ರಷ್ಟಾಚಾರ ನಡರಯಬಾರದು ಎಂಬ ಉದ್ದೇಶದಿಂದ ಹಲವಾರು ಕಾಯ್ದೆ ಕಾನೂನು ರೂಪಿಸಿದೆ ಹಾಗೆಯೆ ಒಬ್ಬ ಅಧಿಕಾರಿ ಒಂದೇ ಕಛೇರಿಯಲ್ಲಿ ಒಂದು ಹುದ್ದೆಯಲ್ಲಿ ಜಾಸ್ತಿ ಸಮಯ ಇದ್ದರೆ ಅಲ್ಲಿ ಭ್ರಷ್ಟಾಚಾರಕ್ಕೆ ಅನುವು ಮಾಡಿ ಕೊಟ್ಟ ಹಾಗೆ ಆಗತ್ತೆ ಜೊತೆಗೆ ಸ್ಥಳಿಯ ಪ್ರಭಾವಿಗಳ ಜೊತೆ ಬಾಂಧವ್ಯ ಹೋಂದುತ್ತಾರೆ. ಅದರಿಂದ ಆಡಳಿತ ವ್ಯವಸ್ಥೆ ಹದಗೆಡಬಹುದು ಎನ್ನುವ ಉದ್ದೇಶದಿಂದ ಒಬ್ಬ ಅಧಿಕಾರಿ ಒಂದು ಕಛೇರಿಯಲ್ಲಿ ಗರಿಷ್ಠ ಮೂರರಿಂದ ಐದು ವರ್ಷ ಮಾತ್ರ ಕೆಲಸ ನಿರ್ವಹಿಸಬೇಕು ಎಂಬ ಕಾನೂನನ್ನು ಮಾಡಿದೆ ಆದರೆ ಆ ಕಾನೂನು ಈ ಅಧಿಕಾರಿಗೆ ಅನ್ವಯವಾಗುವುದಿಲ್ಲಅನಿಸುತ್ತೆ ಅಧಿಕಾರಿ ಯಾರು ಅಂದ್ರೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಪ್ರಮುಖ ಕಛೇರಿಗಳಲ್ಲಿ ಒಂದಾದ ಪಂಚಾಯತ ರಾಜ್ ಇಲಾಖೆಯ ತಾಲ್ಲೂಕು ಪಂಚಾಯತಿಯಲ್ಲಿ  ದ್ವಿತೀಯ ದರ್ಜೆ ಸಹಾಯಕರಾಗಿ ಪ್ರಭಾರಿಯಾಗಿ  ಕಾರ್ಯನಿರ್ವಹಿಸುತ್ತಿರುವ ಸಲೀಂ ಅಹ್ಮದ ಎಂ ಅಮ್ಮಣಗಿ ಅವರು 20-10-2010 ರಿಂದ ಇಲ್ಲಿಯವರೆಗೆ ಅಂದರೆ ಸುಮಾರು ಹತ್ತು ವರ್ಷಗಳ ಕಾಲ ಒಂದೇ ಕಡೆ ಕಾರ್ಯನಿರ್ವಹಿಸುತ್ತಿದ್ದು ಸರ್ಕಾರದ ಆದೇಶವನ್ನು ಕಾಲ ಕಸವನ್ನಾಗಿ ಮಾಡಿಕೊಂಡು ಮೆರೆಯುತ್ತಿದ್ದಾರೆ ಇದರಿಂದ ಕೆಲಸ ಮಾಡಲು ಗುತ್ತಿಗೆದಾರರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದು ಇದರಿಂದ ತಾಲ್ಲೂಕಿನ ಅಭಿವೃದ್ಧಿ ಕುಂಟಿತಗೊಂಡಿದೆ ಎಂದು ಕೆಲ ಗುತ್ತಿಗೆದಾರರು ದೂರಿದ್ದಾರೆ ಆದ್ದರಿಂದ ಇಂತಹ ಅಧಿಕಾರಿಗಳನ್ನು ವರ್ಗ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಅನುವು ಮಾಡಿಕೊಡಬೇಕೆಂದು ತಾಲ್ಲೂಕಿನ ಪ್ರಜ್ಞಾವಂತರು ಅಭಿಪ್ರಾಯಪಟ್ಟಿದ್ದಾರೆ.

*12%ಕಮೀಷನ್ ಕಹಾನಿ* ಮುಂದಿನ ಭಾಗದಲ್ಲಿ

ವರದಿ ಪ್ರಸನ್ನ 


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …

Leave a Reply

Your email address will not be published. Required fields are marked *