ಬೆಳಗಾವಿ ಜಿಲ್ಲೆಯಲ್ಲಿ ಜನವರಿ 18ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 1-9ನೇ ತರಗತಿ ಶಾಲೆಗಳಿಗೆ ರಜೆ ಘೋಷಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. 10ನೇ ತರಗತಿ ಮೇಲ್ಪಟ್ಟವರಿಗೆ ಎಂದಿನಂತೆ ತರಗತಿ ನಡೆಯಲಿವೆ ಎಂದು ಸೂಚನೆ ನೀಡಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು, ಚಿಕ್ಕೋಡಿ, ಬೆಳಗಾವಿ ಬಿಇಒಗಳ ಜತೆಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಕುರಿತು ತೀರ್ಮಾನ ಮಾಡಲಾಗಿದೆ. ಕನಿಷ್ಠ ಏಳು ದಿನಗಳ ಕಾಲ ರಜೆ ನೀಡಿ ಅಂತಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಸಲಹೆ ಬಂದಿದೆ. ಕಳೆದ ಹತ್ತು ದಿನಗಳಲ್ಲಿ 142 ಮಕ್ಕಳಿಗೆ ಸೋಂಕು ಧೃಡಪಟ್ಟಿದೆ. ಸೋಂಕು ತಡೆಗಟ್ಟಲು ರಜೆ ನೀಡಿ ಅಂತಾ ಸಲಹೆ ಹಿನ್ನೆಲೆ ಜಿಲ್ಲಾಧಿಕಾರಿ ಸರ್ಕಾರದ ಗಮನಕ್ಕೆ ತಂದು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಬೆಂಗಳೂರು ಹೊರತುಪಡಿಸಿ ಶಾಲೆಗಳು ಬಂದ್ ಆದ ಮೊದಲ ಜಿಲ್ಲೆ ಇದಾಗಿದೆ