Breaking News
Home / ಗೋಕಾಕ / ‘ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಿಸುವ ದಸರಾ ಉತ್ಸವ’

‘ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಿಸುವ ದಸರಾ ಉತ್ಸವ’

Spread the love

ಗೋಕಾಕ ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಪೀಠದಲ್ಲಿ ದಸರಾ ಮಹೋತ್ಸವದಲ್ಲಿ ರಾಜಪೋಷಾಕದಲ್ಲಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಮಾತನಾಡಿದರು
ಸಾವಳಗಿ ಜಗದ್ಗುರು ಸನ್ನಿಧಿಯವರ ಅಭಿಮತ
‘ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಿಸುವ ದಸರಾ ಉತ್ಸವ’

ಸಾವಳಗಿ:‘ಸತ್ಯ, ಪ್ರಾಮಾಣ ಕತೆ, ನಂಬಿಕೆ, ವಿಶ್ವಾಸ ಮತ್ತು ಸದ್ಗುಣಗಳನ್ನು ಬೆಳೆಸಿಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಜಗದ್ಗುರು ಶ್ರೀಶಿವಲಿಂಗೇಶ್ವರ ಕುಮಾರೇಂದ್ರÀ್ಸ ಮಹಾಸನ್ನಿಧಿಯವರು ನುಡಿದರು.
ಹಿಂದು ಮುಸ್ಲಿಂ ಸೌಹಾರ್ದತೆಯ ಸುಕ್ಷೇತ್ರ ಸಾವಳಗಿಯ ಸಿದ್ಧ ಸಂಸ್ಥಾನ ಪೀಠದಲ್ಲಿ ದಸರಾ ಮಹೋತ್ಸವ ನಿಮಿತ್ತವಾಗಿ ಏರ್ಪಡಿಸಿದ್ದ ಶ್ರೀದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮ ಮತ್ತು ಸಾಹಿತ್ಯ, ಸಂಸ್ಕøತಿ ಸೌರಭ ಕಾರ್ಯಕ್ರಮವನ್ನು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ದಸರಾ ಉತ್ಸವವು ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವುದಾಗಿದೆ ಎಂದರು.
ನವರಾತ್ರಿಗಳಂದು ದೇವಿ ಪುರಾಣವನ್ನು ಶ್ರವಣ ಮಾಡಿಕೊಂಡು, ಭಕ್ತಿಯನ್ನು ಸಾಕಾರಗೊಳಿಸಿಕೊಳ್ಳುವ ಮನುಷ್ಯನಿಗೆ ಪವಿತ್ರವಾದ ಅವಕಾಶವಾಗಿದೆ ಎಂದರು.
ದಸರೆಯು ನಾಡಿಗೆ, ದೇಶಕ್ಕೆ ಶಕ್ತಿ, ಸಾಮಥ್ರ್ಯವನ್ನು ವೃದ್ಧಿಸಲಿ. ಪ್ರತಿ ಜೀವಿಯು ಕಷ್ಟಕಾರ್ಪಣ್ಯಗಳಿಂದ ಮುಕ್ತರಾಗಿ, ಸಮೃದ್ಧಿ, ಸಂತೋಷದ ಬದುಕನ್ನು ಕಾಣಲಿ ಎಂದರು.
ಘಟಪ್ರಭಾದ ಹಿರಿಯ ವೈದ್ಯ ಡಾ. ವಿಲಾಸ ನಾಯ್ಕವಾಡಿ ದೀಪ ಬೆಳಗಿಸಿ ದಸರಾ ಉತ್ಸವದ ಸಂಸ್ಕøತಿ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾವಳಗಿ ದಸರೆಯು ಕಲೆ, ಸಾಹಿತ್ಯ, ಕೃಷಿ, ಶಿಕ್ಷಣ, ಆಧ್ಯಾತ್ಮಿಕತೆಯ ಸಂಗಮವಾಗಿದೆ ಎಂದರು.
ಕಾರಡಗಿಯ ರೇವಣಸಿದ್ದಯ್ಯ ಹಿರೇಮಠ ಶಾಸ್ತ್ರೀಗಳು ಶ್ರೀ ದೇವಿ ಪುರಾಣ ಗ್ರಂಥವನ್ನು ಪೂಜಿಸಿ ಪುರಾಣವನ್ನು ಪ್ರಾರಂಭಿಸಿದರು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಉತ್ಸವ ಸಂಭ್ರಮ: ವಿಶೇಷ ದೀಪಾಲಂಕರ, ಆವರಣದಲ್ಲಿ ರಂಗೋಲಿಯ ಚಿತ್ತಾರ, ಹಳ್ಳಿ ಸೊಗಡಿನ ಅಲಂಕಾರದೊಂದಿಗೆ ಸಾವಳಗಿ ಮಠವು ಆಕರ್ಷಣ ೀಯವಾಗಿ ಮೈಸೂರು ದಸಾರಾ ನೆನಪಿಸುವಂತೆ ಕಂಗೋಳಿಸುತ್ತಲಿದೆ.

 

 


Spread the love

About Ad9 Haberleri

Check Also

ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ

Spread the love ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ಮಾಡಿ ಸಂತ್ರಸ್ತರಿಗೆ …

Leave a Reply

Your email address will not be published. Required fields are marked *