Breaking News
Home / ಗೋಕಾಕ / ಮಹಿಳಾ ವಚನ ಸಾಹಿತ್ಯವು ಅನುಭಾವದ ಕಣಜ’: ಪ್ರೊ. ರೋಹಿಣ ಜೆ

ಮಹಿಳಾ ವಚನ ಸಾಹಿತ್ಯವು ಅನುಭಾವದ ಕಣಜ’: ಪ್ರೊ. ರೋಹಿಣ ಜೆ

Spread the love

ಗೋಕಾಕ ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಪೀಠದಲ್ಲಿ ದಸರಾ ಮಹೋತ್ಸವದಲ್ಲಿ ಚಿಕ್ಕೋಡಿಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರೊ. ರೋಹಿಣ ಜೆ.
ಪ್ರೊ. ರೋಹಿಣ ಜೆ. ಅಭಿಪ್ರಾಯ
‘ಮಹಿಳಾ ವಚನ ಸಾಹಿತ್ಯವು ಅನುಭಾವದ ಕಣಜ’

ಸಾವಳಗಿ: ’12 ಶತಮಾನದಲ್ಲಿ ಮಹಿಳಾ ವಚನಗಾರ್ತಿಯರು ವೈಚಾರಿಕತೆಯ ನೆಲೆಯಲ್ಲಿ ಅನುಭಾವದ ಪ್ರಭುದ್ದತೆಯ ಮೂಲಕ ವಚನ ಸಾಹಿತ್ಯದ ಶ್ರೇಷ್ಠತೆಯನ್ನು ಹೆಚ್ಚಿಸಿದರು’ ಎಂದು ಚಿಕ್ಕೋಡಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕಿ ಪ್ರೊ. ರೋಹಿಣ ಜೆ. ಹೇಳಿದರು.
ಹಿಂದು ಮುಸ್ಲಿಂ ಸೌಹಾರ್ದತೆಯ ಸುಕ್ಷೇತ್ರ ಸಾವಳಗಿಯ ಸಿದ್ಧ ಸಂಸ್ಥಾನ ಪೀಠದಲ್ಲಿ ದಸರಾ ಮಹೋತ್ಸವ ನಿಮಿತ್ತವಾಗಿ ಏರ್ಪಡಿಸಿದ್ದ ಶ್ರೀದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮ ಮತ್ತು ಸಾಹಿತ್ಯ, ಸಂಸ್ಕøತಿ ಸೌರಭ ಕಾರ್ಯಕ್ರಮದ ಎರಡನೇ ದಿನದಂದು ‘ಮಹಿಳಾ ಸಾಹಿತ್ಯದಲ್ಲಿ ಅನುಭಾವ’ ವಿಷಯ ಕುರಿತು ಉಪನ್ಯಾಸ ನೀಡಿದರು 12ನೇ ಶತಮಾನದಲ್ಲಿ ಮಹಿಳಾ ವಚನ ಸಾಹಿತ್ಯವು ಅನುಭಾವದ ಕಣಜವಾಗಿದೆ ಎಂದರು.
12ನೇ ಶತಮಾನದಲ್ಲಿ ಶರಣರಗಿಂತ ಶರಣೆಯರು ಶ್ರದ್ಧೆ, ಸತ್ಯತೆ, ಪ್ರಾಮಾಣ ಕತೆ ಹಾಗೂ ಭಕ್ತಿಯ ಬದ್ದತೆಗೆ ಹೆಸರಾಗಿರುವುದನ್ನು ಅವರ ವಚನಗಳ ಮೂಲಕ ಅರಿಯಬಹುದಾಗಿದೆ. ಜ್ಞಾನ ಮಾರ್ಗದ ಮೂಲಕÀ ಅನುಭಾವನ್ನು ನೀಡಿದ ಮಹಾ ಶರಣೆಯರು ಎಂದು ಹೇಳಿದರು.
ಮೇರು ವಚನಗಾರ್ತಿ ಅಕ್ಕಮಹಾದೇವಿ, ದುಗ್ಗಳೆ, ಸತ್ಯಕ್ಕ, ಅಕ್ಕಮ್ಮ, ಲಕ್ಕಮ್ಮ, ಲಿಂಗಮ್ಮ, ಆಮುಗರಾಯಮ್ಮ, ಮೋಳಿಗೆ ಮಹಾದೇವಿ, ಅಕ್ಕನಾಗಮ್ಮ, ಮುಕ್ತಾಯಕ್ಕ, ಗೊಗ್ಗವ್ವೆ, ಉರಿಲಿಂಗಪೆದ್ದಿ ಹೀಗೆ 36ಕ್ಕೂ ಹೆಚ್ಚು ಶರಣೆಯರು ತಮ್ಮ ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಸೈದ್ದಾಂತಿಕ ಸಂಸ್ಕøತಿಕೆಯನ್ನು ನೀಡಿರುವ ಹೆಗ್ಗಳಿಕೆ ಅವರದಾಗಿದೆ ಎಂದರು.
ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿ ಅವರು ಮಾತನಾಡಿ ಅನುಭಾವವು ತಮ್ಮನ್ನು ತಾವು ಆತ್ಮಿವಿಮೆರ್ಶೆ ಮಾಡಿಕೊಳ್ಳುವುದಾಗಿದೆ. ತನ್ನ ತಪ್ಪು, ಅಸತ್ಯತೆ, ಅಪ್ರಾಣ ಕತೆಗಳನ್ನೆಲ್ಲವನ್ನು ಬಿಟ್ಟು, ಶುದ್ದ ಮನಸ್ಸಿನಿಂದ ನಡೆದು ತನ್ನ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಕಾರಡಗಿಯ ರೇವಣಸಿದ್ದಯ್ಯ ಹಿರೇಮಠ ಶಾಸ್ತ್ರೀಗಳು ಶ್ರೀ ದೇವಿ ಪುರಾಣವನ್ನು ಹೇಳಿದರು. ಮಲ್ಲಿಕಾರ್ಜುನ ವಕ್ಕುಂದ ಗಾಯನಕ್ಕೆ ವಿಜಯ ದೊಡ್ಡಣ್ಣವರ ತಬಲಾ ಸಾಥ್ ನೀಡಿದರು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.

 


Spread the love

About Ad9 Haberleri

Check Also

ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ

Spread the love ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ಮಾಡಿ ಸಂತ್ರಸ್ತರಿಗೆ …

Leave a Reply

Your email address will not be published. Required fields are marked *