Breaking News
Home / ಮೂಡಲಗಿ / ಕಾಂಗ್ರೇಸ್ ಬಂಡಾಯ ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೇಸ್ ಹಿರಿಯ ಮುಖಂಡರು ಸಾಥ್

ಕಾಂಗ್ರೇಸ್ ಬಂಡಾಯ ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೇಸ್ ಹಿರಿಯ ಮುಖಂಡರು ಸಾಥ್

Spread the love


ಮೂಡಲಗಿ: ಅರಭಾವಿ ಮತಕ್ಷೇತ್ರದ ಕಾಂಗ್ರೇಸ್ ಟಿಕೆಟ್ ವಂಚಿತ ಅಭ್ಯರ್ಥಿಗಳಾದ ಐದು ಜನರಲ್ಲಿ ಭೀಮಪ್ಪ ಗಡಾದ ಅವರು ಕಾಂಗ್ರೇಸ್ ಬಂಡಾಯ ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೇಸ್ ಹಿರಿಯ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳಾಗಿದ್ದ ಭೀಮಪ್ಪ ಹಂದಿಗುಂದ, ರಮೇಶ ಉಟಗಿ ಹಾಗೂ ಅವರ ಕಾರ್ಯಕರ್ತರು ಪಟ್ಟಣದ ಭೀಮಪ್ಪ ಹಂದಿಗುಂದ ಅವರು ತೋಟದ ಮನೆಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಬೆಂಬಲ ವ್ಯಕ್ತಪಸಿ ಭೀಮಪ್ಪ ಗಡಾದ ಅವರ ಪ್ರಚಾರಕ್ಕೆ ಬುಧುವಾರದಂದು ಚಾಲನೆ ನೀಡಲಾಗುವುದು ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಭೀಮಪ್ಪ ಹಂದಿಗುಂದ ಮಾತನಾಡಿ, ಸಾಕಷ್ಟು ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ಪಕ್ಷ ಸಂಘಟನೆ ಮಾಡಿದ್ದು ಆದರೆ 2023ರ ವಿಧಾನಸಭಾ ಚುನಾವಣೆಗೆ ಅರಭಾವಿ ಮತಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿ ನಮ್ಮ ಟಿಕೆಟ್ ನೀಡದೇ ಇರುವುದರಿಂದ ನಮ್ಮ ಕಾರ್ಯಕರ್ತರಿಗೆ ನೋವಾಗಿದೆ. ಈಗಿನ ಕಾಂಗ್ರೇಸ್ ಅಭ್ಯರ್ಥಿ ಅರವಿಂದ ದಳವಾಯಿ ಹಿರಿಯ ಮುಖಂಡ ಜೊತೆಗೆ ಸರಿಯಾದ ಸಪಂರ್ಕ ಇಲ್ಲದೇ ಸ್ಪಂದನೆಯನ್ನು ಕೂಡಾ ನೀಡುತ್ತಿಲ್ಲ ಆದರಿಂದ ನಮ್ಮ ಎಲ್ಲ ಕಾರ್ಯಕರ್ತರು ಭೀಮಪ್ಪ ಗಡಾದ ಅವರಿಗೆ ಬೆಂಬಲ ನೀಡಿ ಅರಭಾವಿ ಮತಕ್ಷೇತ್ರದಲ್ಲಿ ಬದಲಾವಣೆಯನ್ನು ತರಬೇಕೆಂದು ಪಣತೋಟ್ಟಿರುವ ನಾವುಗಳು ಭೀಮಪ್ಪ ಗಡಾದ ಅವರ ಜೊತೆಗೆ ಅವರ ಪ್ರಚಾರಕ್ಕೆ ಹೋಗಿ ಅವರನ್ನು ಗೆಲ್ಲಿಸುವಂತ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಹಿರಿಯ ಕಾಂಗ್ರೇಸ್ ಮುಖಂಡ ರಮೇಶ ಉಟಗಿ ಮತ್ತು ರೈತ ಸಂಘದ ಮುಖಂಡ ಶಿವಪುತ್ರ ಜಕಬಾಳ ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕಾದರೇ ಭೀಮಪ್ಪ ಗಡಾದ ಅವರ ಗೆಲುವು ಅನಿವಾರ್ಯವಾಗಿದೆ. ಕ್ಷೇತ್ರದ ಪ್ರಬುದ್ಧ ಮತದಾರರು ಗಡಾದ ಅವರ ಚಿಹ್ನೆ (ಚಹಾ) ಕಿಟಲಿಗೆ ಮತ ನೀಡಿ ಆರ್ಶೀವದಿಸಬೇಕೆಂದರು

ಕಾಂಗ್ರೇಸ್ ಬಂಡಾಯ ಅಭ್ಯರ್ಥಿ ಭೀಮಪ್ಪ ಗಡಾದ ಮಾತನಾಡಿ, ಕಾಂಗ್ರೇಸ್ ಟಿಕೆಟ್ ಕೈ ತಪ್ಪಿಸಲು ಸಾಕಷ್ಟು ಕಾಣದಕೈಗಳು ಕೆಲಸ ಮಾಡಿವೆ, ಆದರೂ ಸಹ ನಮ್ಮ ಕಾರ್ಯಕರ್ತರು ಹಾಗೂ ಕಾಂಗ್ರೇಸ್ ಹಿರಿಯ ಮುಖಂಡರು ನಮ್ಮ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಬೇಕು ಎಂಬ ಕಾರಣಕ್ಕೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಈಗ ನಮ್ಮ ಎಲ್ಲ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ನನಗೆ ಬೆಂಬಲ ನೀಡಿ ನನ್ನ ಪ್ರಚಾರದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಇದರಿಂದ ಈ ಬಾರಿ ಅರಭಾವಿ ಮತಕ್ಷೇತ್ರದಲ್ಲಿ ಬದಲಾಬಣೆ ಖಂಡಿತ ಎಂದರು.

ಈ ಸಂದರ್ಭದಲ್ಲಿ ಗೋಕಾಕ ಮತಕ್ಷೇತ್ರ ಪಕ್ಷೇತರ ಅಭ್ಯರ್ಥಿ ಜಗದೀಶ ಸಿ.ಕೆ, ಮಲ್ಲಪ್ಪ ಮದಗುಣಕಿ, ಸುರೇಶ ಸಣ್ಣಕ್ಕಿ, ಗುರುನಾಥ ಗಂಗನ್ನವರ, ಹಣಮಂತ ಕಂಕಣವಾಡಿ, ಸಂಗಪ್ಪ ಕಳ್ಳಿಗುದ್ದಿ, ಬಾಲು ಮುಗಳಖೋಡ, ಶಂಕರ ಗಿಡ್ಡಗೌಡರ, ಮಲ್ಲಪ್ಪ ತೇರದಾಳ ಹಾಗೂ ಕಾರ್ಯಕರ್ತರು ಇದ್ದರು.

 


Spread the love

About Ad9 Haberleri

Check Also

ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …

Leave a Reply

Your email address will not be published. Required fields are marked *