
ಗೋಕಾಕ : ಮೊಬೈಲನಲ್ಲಿ ತಾವು ಹಾಕುವ ಒಂದು ಸ್ಟೇಟಸ್ಸಿನಿಂದ ಅನ್ಯ ದರ್ಮಕ್ಕಾಗಲಿ ಅಥವಾ ಯಾವುದೆ ವಕ್ತಿಗತ ಜೀವನಕ್ಕೆ ದಕ್ಕೆ ಉಂಟಾದಲ್ಲಿ ಮತ್ತು ಅದರಿಂದ ಸಮಾಜದಲ್ಲಿ ಅಶಾಂತಿ ಕದಡುವದಾಗಲಿ ಮಾಡಿದರೆ ಯಾವುದೆ ಮುಲಾಜಿಲ್ಲದೆ ಅಂತವರ ವಿರುದ್ಧIPC ಕಲಂ 153ಎ, 295,295ಎ,ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೋಕಾಕ ಗ್ರಾಮೀಣ ಪಿ,ಎಸ್,ಐ, ಕಿರಣ ಮೊಹಿತೆ ಯವರು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು,

ಗ್ರಾಮದ ಹಿರಿಯರು ಮುಖಂಡರುಗಳು ತಮ್ಮ ಮಕ್ಕಳ ಜೊತೆಯಲ್ಲಿ ತಮ್ಮ ಸುತ್ತಮುತ್ತಲಿರುವ ಯುವಕರಿಗೆ ಸಾಮಾಜಿಕ
ಜಾಲತಾನಗಳಾದ ವಾಟ್ಯಾಪ್, ಪೇಸಬುಕ್, ಟ್ವಿಟರ್, ಇನ್ಸ್ಟಾ ಗ್ರಾಮ್ಗಳಲ್ಲಿ
ಯಾವುದೇ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗುವಂತಹ ಸಂದೇಶಗಳನ್ನು
ಪೋಸ್ಟಮಾಡುವದಾಗಲಿ ಹಾಗೂ ಸ್ಟೇಟಸ್ ಹಾಕುವದಾಗಲಿ ಮಾಡಬಾರದೆಂದು ತಿಳಿಸಬೇಕೆಂದು ಹೇಳಿದರು, ಒಂದು ವೇಳೆ ಅಂತಹ ಘಟನೆಗಳ ಕಂಡು ಬಂದಲ್ಲಿ
ಅಂತವರ ವಿರುದ್ಧIPC ಕಲಂ 153ಎ, 295,295ಎ,ಹಾಗೂ ಮಾಹಿತಿ
ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಯಾಕೆಂದರೆ ನಾವೆಲ್ಲರೂ ಒಂದೆ ಅನ್ನುವ ಭಾವನೆ ಇರಬೇಕು ಅವಾಗ ಮಾತ್ರ ಎಲ್ಲರೂ ಶಾಂತಿ ನೆಮ್ಮದಿಯಿಂದ ಇರಲು ಸಾದ್ಯ ಎಂದು ಹೇಳಿ ಒಂದು ವೇಳೆ ಅಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳಿಯ ಪೋಲಿಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ಹೇಳಿದರು
ಈ ಸಂದರ್ಭದಲ್ಲಿ ಎ,ಎಸ್,ಐ, ಎಸ್ ಕೆ ಪಾಟೀಲ, ಸಿಬ್ಬಂದಿಗಳಾದ ನಾಗೇಶ ದುರದುಂಡಿ,ಎಚ,ಎಸ್,ಗೌಡಿ ಹಾಗೂ ಇನ್ನೂಳಿದ ಗ್ರಾಮೀಣ ಪೋಲಿಸ್ ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
Ad9 News Latest News In Kannada