Breaking News
Home / ಗೋಕಾಕ / ಡಕಾಯಿತರ ಗ್ಯಾಂಗ್ ಬಂಧಿಸಿದ ಗೋಕಾಕ್ ಪೊಲೀಸರು

ಡಕಾಯಿತರ ಗ್ಯಾಂಗ್ ಬಂಧಿಸಿದ ಗೋಕಾಕ್ ಪೊಲೀಸರು

Spread the love

 

ಗೋಕಾಕ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಗೋಕಾಕ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಗೋಕಾಕ ಶಹರ, ಅಂಕಲಗಿ, ಗೋಕಾಕ ಗ್ರಾಮೀಣ ಭಾಗಗಳಲ್ಲಿ ದರೋಡೆ, ಸುಲಿಗೆ, ಬೈಕ್ ಹಾಗೂ ಜಾನುವಾರು ಕಳ್ಳತನ ಮಾಡುತ್ತಿದ್ದರು. ಗುರುನಾಥ ವಿರೂಪಾಕ್ಷ ಬಡಿಗೇರ ಎಂಬುವವರು ಆ.14ರಂದು ತಮ್ಮ ಬೈಕ್ ಅಡ್ಡಗಟ್ಟಿ ದರೋಡೆಕೋರರು ಚಿನ್ನದ ಚೈನ್, ಉಂಗುರ ಕದ್ದು ಪರಾರಿಯಾಗಿದ್ದಾಗಿ ಗೋಕಾಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಭೀಮಾಶಂಕರ ಗುಳೇದ ಐಪಿಎಸ್, ಎಸ್.ಪಿ. ಬೆಳಗಾವಿ ಜಿಲ್ಲೆ ರವರು, ಪ್ರಕರಣಗಳ ಪತ್ತೆಗಾಗಿ ಗೋಪಾಲ.ಆರ್.ರಾಠೋಡ
ಸಿ.ಪಿ.ಐ ಗೋಕಾಕ ವೃತ್ತ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಎಂ.ವೇಣುಗೋಪಾಲ ಹೆಚ್ಚುವರಿ ಎಸ್.ಪಿ.ಬೆಳಗಾವಿ ಹಾಗೂ ದೂದಪೀರ್ ಎಚ್ ಮುಲ್ಲಾ ಡಿ.ಎಸ್.ಪಿ. ಗೋಕಾಕ ಉಪವಿಭಾಗರವರ ಮಾರ್ಗದರ್ಶನದಲ್ಲಿ ಸದರಿ ಪ್ರಕರಣಗಳಲ್ಲಿ ತನಿಖೆ ಕೈಕೊಂಡು ದಿನಾಂಕಃ 18-09-2023 ರಂದು “ಬೆನಚಿನಮರಡಿ ಖಿಲಾರಿ ಗ್ಯಾಂಗ್ ಹಾಗೂ ಗೋಕಾಕದ ಎಸ್.ಪಿ (ಶಂಕರ-
ಪರಶುರಾಮ) ಸರ್ಕಾರ ಗ್ಯಾಂಗ್ ಗಳ 09 ಜನ ಆರೋಪಿತರನ್ನು ಬಂದಿಸಿದ್ದು ಸದರಿ ಆರೋಪಿತರು ಗೋಕಾಕ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಗೂ ಸಂಕೇಶ್ವರ, ಯಮಕನಮರಡಿ, ಅಂಕಲಗಿ, ಚಿಕ್ಕೋಡಿ, ಉಪ್ಪಾರಟ್ಟಿ ಮುಂತಾದ ಕಡೆಗಳಲ್ಲಿ ದರೋಡೆ-ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು ಕಳ್ಳತನ, ಹನಿಟ್ರ್ಯಾಪ್ ಗಳಂತಹ ಗುನ್ನೆಗಳನ್ನು ಎಸಗಿದ ಬಗ್ಗೆ ಒಪ್ಪಿಕೊಂಡಿದ್ದು ಸದರಿ
ಆರೋಪಿತರಿಂದ ಸುಮಾರು 7,89,700/- ಮೌಲ್ಯದ ಚಿನ್ನಾಭರಣ, ನಗದು ಹಣ, 09 ಮೊಬೈಲಗಳು,
ಮತ್ತು 07 ಮೋಟಾರ ಸೈಕಲಗಳು, ಹಾಗೂ ಒಂದು ಅಶೋಕ ಲೈಲ್ಯಾಂಡ್ ಟಾಟಾ ಏಸ್ ಗಾಡಿ, ಹಾಗೂ 04 ಜಂಬೆ-ತಲವಾರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗದ್ದಾರೆ.

ಸುಮಾರು 03 ಡಕಾಯಿತಿ-ಸುಲಿಗೆ, 02 ಜಾನುವಾರು ಕಳ್ಳತನ, ಹಾಗೂ ಮೋಟಾರ ಸೈಕಲ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಡಕಾಯಿತಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಶ
ಗೋಪಾಲ ಆರ್. ರಾಠೋಡ ಸಿ.ಪಿ.ಐ ಗೋಕಾಕ ವೃತ್ತ, ಕಿರಣ ಮೋಹಿತೆ ಪಿ.ಎಸ್.ಐ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಎಮ್.ಡಿ.ಘೋರಿ ಪಿ.ಎಸ್.ಐ ಗೋಕಾಕ ಶಹರ ಪೊಲೀಸ ಠಾಣೆ ಹಾಗೂ ಎಚ್.ಡಿ ಯರಝರ್ವಿ ಪಿ.ಎಸ್.ಐ ಅಂಕಲಗಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ
ಬಿ.ವಿ.ನೇರ್ಲಿ, ವಿ.ಆರ್‌.ನಾಯಕ, ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಸ್.ಎಚ್.ಈರಗಾರ,
ಎಮ್.ಬಿ.ಗಿಡಗಿರಿ, ಎಮ್.ಎಮ್.ಹಾಲೋಳ್ಳಿ, ಜಿ.ಎಚ್.ಗುಡ್ಲಿ, ಎಮ್.ಬಿ.ತಳವಾರ, ಕೆ ಆಯ್ ತಿಳಿಗಂಜಿ,
ಸಂತೋಷ ರುದ್ರಮಟ್ಟಿ, ಇವರ ಕಾರ್ಯವನ್ನು ಮಾನ್ಯ ಎಸ್.ಪಿ. ಸಾಹೇಬರು ಮುಕ್ತ ಕಂಠದಿಂದ ಶ್ಲಾಘಣಿಸಿದ್ದಾರೆ. ಹಾಗೆ ಇದೇ ರೀತಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸೂಚಿಸಿರುತ್ತಾರೆ.


Spread the love

About Ad9 Haberleri

Check Also

ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ

Spread the love ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ಮಾಡಿ ಸಂತ್ರಸ್ತರಿಗೆ …

Leave a Reply

Your email address will not be published. Required fields are marked *