ಗುರ್ಲಾಪೂರ(16): ಕರ್ನಾಟಕ ಸ್ಕೂಲ ಗೇಮ್ ಫೆಡರೆಷನ್ ಅಸೋಸಿಯೆನನ ಕಬಡ್ಡಿ ಲೀಗ್‍ನ ಮೂಡಲಗಿ ತಾಲೂಕಾ ಸಂಯೋಜಕರಾಗಿ ಸ್ಥಳೀಯ ಯುವಕ ಸಿದ್ದು ಗಡ್ಡೇಕರ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಸಮನ್ವಯಾಧಿಕಾರಿ ಡಾ. ಸಿ ಹೊನ್ನಪ್ಪ ಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸನ್ 2019-20 ನೇ ಸಾಲಿನಲ್ಲಿ ಜರುಗುವ ರಾಜ್ಯ ಕಬಡ್ಡಿ ಅಸೋಸಿಯನವತಿಯಿಂದ ಜರುಗುವ ಕ್ರೀಡಾಸಕ್ತಿ ಮತ್ತು ಉತ್ತಮ ಸೇವೆಯನ್ನು ನೀಡಬೇಕು. ಪ್ರತಿಷ್ಠಿತ ಲೀಗ್ ಪಂದ್ಯಾವಳಿಗಳನ್ನು ಆಯೋಜಿಸಿ ಯಶಸ್ವಿಗೋಳಿಸಿ ಮುನ್ನಡೆಸಲು ತಿಳಿಸಿದ್ದಾರೆ. ಕಬಡ್ಡಿ ಲೀಗ್‍ನ ಸಂಪೂರ್ಣ ಜವಾಬ್ದಾರಿ ನೀಡಿದ್ದು, ಅವಶ್ಯಕ ವ್ಯವಸ್ಥೆಗಳನ್ನು ನಿಯಮಾನುಸಾರ ಕ್ರೀಡೆಗಳನ್ನು ಯಶಸ್ವಿಗೊಳಿಸಲು ತಿಳಿಸಿರುತ್ತಾರೆ.
ವರದಿ: ವಾಯ್ ಕೆ ಮೀಶಿ