Breaking News

ಸಮೀಪದ ಇಟ್ನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಮಾರ್ತಾಂಡ ಮಲ್ಲಯ್ಯ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ

Spread the love


ಗುರ್ಲಾಪೂರ(16): ಸಮೀಪದ ಇಟ್ನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಮಾರ್ತಾಂಡ ಮಲ್ಲಯ್ಯ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ನಿಮಿತ್ಯವಾಗಿ ಸಕಲ ಜೀವರಾಶಿಗಳ ಲೋಕ ಕಲ್ಯಾಣಕ್ಕಾಗಿ ಮಾರ್ತಾಂಡ ಮಲ್ಲಯ್ಯ ಆರಾಧಕರಾದ ಶ್ರೀ ಸಿದ್ಧೇಶ್ವರ ಶರಣರ ಸಾನಿಧ್ಯದಲ್ಲಿ ಹೋಮ ಹವನದ ಮಹಾಪೂಜೆ ನೇರವೆರಸಲಾಯಿತು. ದಿನವಿಡಿ ಭಜನೆ ಚೌಡಕಿ ಪದ ಇನ್ನೂ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೋಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧೇಶ್ವರ ಶರಣರು ಮಾತನಡಿ, ಮಾನವ ಕುಲವೆಲ್ಲ ಒಂದೇ. ಎಲ್ಲ ಧರ್ಮಗಳ ಸಂದೇಶಗಳು ಶಾಂತಿಯ ಮಂತ್ರಗಳು ಒಂದೆ ರೂಪದಾಗಿವೆ. ಭಾವೈಕ್ಯತೆ ಸಾಮರಸ್ಯ ಪರಸ್ಪರ ಸಹಕಾರದ ಜೀವನವೇ ಮನುಷ್ಯನ ಮೂಲ ತತ್ವವಾಗಿದೆ. ಇನ್ನೂಬ್ಬರಿಗೆ ಭಾವನೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಸಹಬಾಳ್ವೆಯಿಂದ ಬದುಕಿದಾಗ ಬದುಕಿಗೊಂದು ಅರ್ಥ ಬರುವದರ ಜೊತೆಗೆ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯವಾಗುದು ಎಂದು ನುಡಿದರು.
ಮದ್ಯಾಹ್ನ ಎಲ್ಲ ಭಕ್ತಾಧಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ಸವಸುದ್ದಿ, ಖನದಾಳ, ಮುಗಳಖೋಡ, ಗುರ್ಲಾಪೂರ, ಕಂಕಣವಾಡಿ, ಮೂಡಲಗಿ, ಹಿಡಕಲ್ ಹಾಗೂ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡು ಪುಣಿತರಾದರು.

ವರದಿ:ಕೆ.ವಾಯ್ ಮೀಶಿ


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …