ಹಳ್ಳೂರ : ಶ್ರೀಶೈಲ ಪಾದಯಾತ್ರೆ ಇಂದ ಬರುತ್ತಿರುವ ಭಕ್ತರ ಆರೋಗ್ಯದ ಬಗ್ಗೆ ಪರಿಶೀಲನೆಯನ್ನು ರಾತ್ರಿ ಸಮಯದಲ್ಲಿ ಕೂಡಾ ಹಳ್ಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಮಹೇಶ್ ಕಂಕನವಾಡಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಾತ್ರಿಕರಿಗೆ ಸಣ್ಣಪುಟ್ಟ ಆರೋಗ್ಯದಲ್ಲಿ ವ್ಯತ್ಯಾಸವಾದ ವರಿಗೆ ಮಾತ್ರೆಗಳನ್ನು ನೀಡಿ ಕೊರೊನಾ ವೈರಸ್ ಹರಡದಂತೆ ಬಗ್ಗೆ ಸತತವಾಗಿ ಮಾಹಿತಿಯನ್ನು ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೊರೊನಾ ಭೀತಿಗೆ ಹೆದರಬೇಡಿ ಎಂದು ಯಾತ್ರಿಕರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಶ್ರೀಶೈಲದಿಂದ ಬಂದ ಯಾತ್ರಿಕರಿಗೆ ಯಾವುದು ತೊಂದರೆಯಾಗಬಾರದೆಂದು ಹಗಲಿರುಳು ದುಡಿಯುತ್ತಿರುವ ವೈದ್ಯ ಮಹೇಶ್ ಕಂಕನವಾಡಿ.
ವೈದ್ಯ ರಾತ್ರಿ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಗ್ರಾಮದ ಜನತೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
Ad9 News Latest News In Kannada



