
ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ್ಲ ಶುಕ್ರವಾರ ಡಿ.15ರಂದು ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಜರುಗಲಿ ಎಂದು ನಿಂಗಪ್ಪ ಸ್ವಾಮಿಗಳು ತಿಳಸಿದ್ದಾರೆ. 
ಮಧ್ಯಾಹ್ನ 3 ಗಂಟೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಲಕಿಯ ಕುಂಭ ಮತ್ತು ಆರತಿ ಮೇಳ ವಿವಿಧ ವಾದ್ಯಮೇಳದೊಂದಿಗೆ ಆಯ್ಯಪ್ಪ ಸ್ವಾಮಿ ಭಾವಚಿತ್ರದೊಂದಿಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆ ಜರುಗುವುದು. ವಿವಿಧ ಗ್ರಾಮಗಳ ಅಯ್ಯಪ್ಪ ಸ್ವಾಮಿ ನನಧಾನದ ಗುರುಸ್ವಾಮಿಗಳಿಂದ ಸಾಯಂಕಾಲ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯುವುದು. ಕಾರ್ಯಕ್ರಮ ಸಾನ್ನಿಧ್ಯವನ್ನು ಬಬಲಾದಿಯ ಶ್ರೀ ಸಿದ್ದರಾಮಯ್ಯ ಹೊಳಿಮಠ ಮಹಾಸ್ವಾಮಿಗಳು, ಖಾನಟ್ಟಿಯ ಶ್ರೀ ಬಸವಾನಂದ ಮಹಾಸ್ವಾಮಿಗಳು, ಶಿವಾಪೂರದ ಶ್ರೀ ಅಡಸಿದ್ದರಾಮ ಮಹಾಸ್ವಾಮಿಗಳಿಂದ ವಹಿಸುವರು. 
ಸುತ್ತ ಮುತ್ತಲಿನ ಗುರು ಸ್ವಾಮಿಗಳು ಆಯ್ಯಪ್ಪ ಸ್ವಾಮಿ ಮಾಲಾದಾರಿಗಳು ಸಾರ್ವಜನಿಕರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಣಿತರಾಗಬೇಕೆಂದು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 Ad9 News Latest News In Kannada
Ad9 News Latest News In Kannada
				 
		 
						
					 
						
					 
						
					