ಅದಕ್ಕೂ ಮೊದಲು ತಣ್ಣೀರಿನ ಸ್ನಾನದಿಂದ ಆಗುವ ಉಪಯೋಗಗಳೇನು ಎಂಬುದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿಕೊಳ್ಳೋಣ. ಸ್ನೇಹಿತರೇ ತಣ್ಣೀರು ಅಂದರೆ ಯಾರಿಗೂ ಇಷ್ಟವಾಗುವುದಿಲ್ಲ. ಅದರಲ್ಲೂ ಕೊರೆಯುವ ಚಳಿಯಲ್ಲಿ ತಣ್ಣೀರಿನ ಸ್ನಾನ ಮಾಡಲು ಯಾರೂ ಒಪ್ಪುವುದಿಲ್ಲ. ಆ ಕಾರಣದಿಂದಾಗಿ ಎಲ್ಲರೂ ಬಿಸಿ ನೀರು ಸ್ನಾನ ಮಾಡಲು ಬಯಸುತ್ತಾರೆ. ಆದರೆ ತಣ್ಣೀರಿನ ಸ್ನಾನ ದೇಹಕ್ಕೆ ಉತ್ತಮ. ಅದರಲ್ಲೂ ಪುರುಷರ ದೇಹಕ್ಕೆ ತಣ್ಣೀರಿನ ಸ್ನಾನ ಅತಿ ಹೆಚ್ಚು ಉಪಯುಕ್ತವಾಗಿದೆ. ತಣ್ಣೀರಿನ ಸ್ನಾನವನ್ನು ಮಾಡುವುದರಿಂದ ನಮ್ಮ ದೇಹದಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ. ಮತ್ತು ದೇಹವು ಯಾವಾಗಲೂ ತಂಪಾಗಿರುವಂತೆ ತಣ್ಣೀರು ನೋಡಿಕೊಳ್ಳುತ್ತದೆ. ಈ ತಣ್ಣೀರಿನ ಸ್ನಾನವನ್ನು ಮಾಡುವುದರಿಂದ ಆಗುವಂತಹ ಉಪಯೋಗಗಳ ಬಗ್ಗೆ ನಾನು ನಿಮಗೀಗ ತಿಳಿಸಿಕೊಡುತ್ತೇನೆ.
ಮೊದಲನೆಯದಾಗಿ ಪುರುಷರಿಗೆ ತಣ್ಣೀರಿನ ಸ್ನಾನ ಅತಿ ಹೆಚ್ಚು ಉಪಯುಕ್ತವಾದದ್ದು. ಬಿಸಿ ನೀರಿನ ಸ್ನಾನವನ್ನು ಹೆಚ್ಚಾಗಿ ಮಾಡುವುದರಿಂದ ಪುರುಷತ್ವದ ಕೊರತೆ ಪುರುಷರಲ್ಲಿ ಕಾಣುತ್ತದೆ. ಬಿಸಿನೀರನ್ನು ಬಳಸುವುದರಿಂದ ವೀರ್ಯಗಳು ಕ್ಷೀಣಿಸುವ ಸಂದರ್ಭಗಳು ಕೂಡ ಹೆಚ್ಚಾಗಿರುತ್ತದೆ. ಆದ್ದರಿಂದ ತಣ್ಣೀರಿನ ಸ್ನಾನವನ್ನು ಪುರುಷರು ಹೆಚ್ಚಾಗಿ ಮಾಡುವುದು ಉತ್ತಮ. ಮತ್ತೊಂದು ಪ್ರಮುಖವಾದ ಕಾರಣವೆಂದರೆ ಹೃದಯ ಸಂಬಂಧಿ ಕಾಯಿಲೆಗಳು ತಣ್ಣೀರಿನ ಸ್ನಾನ ಮಾಡುವುದರಿಂದ ಹೆಚ್ಚಾಗಿ ಬರುವುದಿಲ್ಲ. ಬಿಸಿ ನೀರಿನ ಸ್ನಾನವನ್ನು ಮಾಡುವುದರಿಂದ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಅದಕ್ಕೆ ಪ್ರಮುಖವಾದ ಕಾರಣವೆಂದರೆ ಬಿಸಿನೀರಿನ ಸ್ನಾನ ಮಾಡುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ.
ರಕ್ತ ಒತ್ತಡ ಹೆಚ್ಚಾಗಿರುವುದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಆ ಕಾರಣದಿಂದಾಗಿ ತಣ್ಣೀರನ್ನು ಸ್ನಾನಕ್ಕೆ ಬಳಸುವುದು ಉತ್ತಮ. ಚರ್ಮ ಮೃದುವಾಗಲು ತಣ್ಣೀರಿನ ಸ್ನಾನ ಹೆಚ್ಚು ಉಪಯುಕ್ತ. ಬಿಸಿನೀರಿನ ಸ್ನಾನ ಮಾಡುವುದರಿಂದ ಚರ್ಮ ಸೀಳುವಿಕೆ ಉಂಟಾಗುವುದನ್ನು ಗಮನಿಸಬಹುದು. ಆದ್ದರಿಂದ ತಣ್ಣೀರಿನ ಸ್ನಾನ ದೇಹಕ್ಕೆ ತುಂಬಾ ಒಳ್ಳೆಯದು. ಈ ರೀತಿ ಪುರುಷರು ಬಿಸಿ ನೀರಿಗಿಂತ ತಣ್ಣೀರಿನ ಸ್ನಾನ ಮಾಡುವುದು ಅವರ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾದದ್ದು. ಮತ್ತು ಇನ್ನೊಂದು ಪ್ರಮುಖವಾದ ಕಾರಣವೆಂದರೆ ಬಿಸಿನೀರಿನ ಸ್ನಾನ ಮಾಡುವುದರಿಂದ ತಲೆ ಸುತ್ತು ಕಾಣಿಸಿಕೊಳ್ಳುತ್ತದೆ. ಈ ತಲೆ ಸುತ್ತು ಕಾಣಿಸಿಕೊಳ್ಳುವುದರಿಂದ ಮನುಷ್ಯನ ಆರೋಗ್ಯದಲ್ಲಿ ಮತ್ತು ರಕ್ತ ಸಂಚಲನದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಬಿಸಿ ನೀರನ್ನು ಬಳಸುವುದನ್ನು ಕಡಿಮೆ ಮಾಡಿ ತಣ್ಣೀರನ್ನು ಹೆಚ್ಚಿಗೆ ಬಳಸಬೇಕು ಧನ್ಯವಾದಗಳು!!