ರಸ್ತೆ ಅಪಘಾತ: ಮಹಿಳೆ ಸಾವು, 23 ಜನರಿಗೆ ಗಾಯ
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎರಡು ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದು, 23 ಜನ ಗಾಯಗೊಂಡರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸಮೀಪದ ಹೊನ್ನಿಹಳ್ಳಿ ಕ್ರಾಸ್ ಬಳಿ ನಡೆದಿದೆ.
ಹುಕ್ಕೇರಿ ತಾಲೂಕಿನ ಹೊನುರ ಗ್ರಾಮದ ಮಾಯವ್ವಾ ಬಸವಣ್ಣಿ ರಕ್ಷಿ (60) ಮೃತ ಮಹಿಳೆ. ಜೋತ್ತೆಪ್ಪಾ ಸತ್ತೆಪ್ಪಾ ಗೊನಿ (46) ವಿಠ್ಠಲ ಕಲ್ಲಪ್ಪಾ ಗೊನಿ(42)ಗೌರವ್ವಾ ವೀರಗೊಂಡಾ ಬಡಾಯಿ(45)ಮಾರುತಿ ಬಾಬು ಗೊನಿ (45) ನಿಗಂಪ್ಪಾ ಬಾಬು ಮಗದುಮ್ಮ (33)ನಿಗಂಪ್ಪಾ ಯಲ್ಲಪ್ಪಾ ಹಲಕರ್ಣಿ (60)ಶಿವ್ವಕ್ಕಾ ಸತ್ತಪ್ಪಾ ಬಡಾಯಿ(55)ನಿಂಗವ್ವಾ ವಿಠ್ಠಲ ಮುತ್ತಪ್ಪಗೋಳ(55)ಸುಶಿಲಾ ರವಿಂದ್ರ ಘಸ್ತಿ(46)ದುಂಡವ್ವಾ ವಿಠ್ಠಲ ಕಮಕೇರಿ(45)ಕೆಂಪವ್ವಾ ಬಸವಣ್ಣಿ ಗಡಕರಿ (40) ಗೊದವ್ವಾ ಗೊಪಾಲ ಘಸ್ತಿ (40) ಶಾರವ್ವಾ ಲಕ್ಷ್ಮಣ ಮಗದುಮ್ಮ (40)ಸಿದ್ದವ್ವಾ ಮಲ್ಲಪ್ಪಾ ಮಲ್ಲಾಡಿ (40)ಮಹಾದೇವಿ ಪುಂಡಲೀಕ ಗಡಕರಿ(50)ಸುರೇಖಾ ಲಕ್ಷ್ಮಣ ಗಡಕರಿ(45) ಸತ್ಯವ್ವಾ ಶಿವರಪ್ಪಾ ಕಮತೆ (60)ಯಲ್ಲವ್ವಾ ಬಾಳಪ್ಪಾ ಬನ್ನೆಪ್ಪಗೋಳ (45)ಗೌರವ್ವಾ ಕಾಶಪ್ಪಾ ಬಡಾಯಿ(44)ಉದ್ದವ್ವಾ ವಿಠ್ಠಲ ಮಗದುಮ್ಮ(46) ಶಾಂತವ್ವಾ ಬಾಬು ದಾಸನಟ್ಟಿ (44)ಲಕ್ಕವ್ವಾ ಲಕ್ಕಪ್ಪಾ ಕಮತೆ (35) ಅಶೋಕ ನಿಂಗಪ್ಪಾ ಚೌಗಲಾ (35) ಗಾಯಾಳುಗಳು
ಸಂಕೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದಾರೆ.
ನಿಪ್ಪಾಣಿ ಕಡೆಯಿಂದ ಬೆಳಗಾವಿ ಕಡೆ ಅತೀ ವೇಗದಿಂದ ಕಾರು ಚಲಾಯಿಸುತ್ತ ಬರುತ್ತಿದ್ದ ವೇಳೆ ಹೊನ್ನಿಹಳ್ಳಿ ಕ್ರಾಸ್ ಬಳಿ ಕ್ರೊಶರ್ ವಾಹನಕ್ಕೆ ಹಿಂಬದಿಯಿಂದ ಇಂಡಿಕಾ ಕಾರು ಡಿಕ್ಕಿ ಹೊಡೆದ ಪರಿಣಾಮ ಕ್ರೊಶರದಲ್ಲಿದ ಮಹಿಳೆ ಮೃತಪಟ್ಟಿದಾಳೆ ಎನ್ನಲಾಗಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ad9 News Latest News In Kannada
