Breaking News

ಈ ಮರದ ಸಲುವಾಗಿ ವರ್ಷಕ್ಕೆ ಖರ್ಚು ಮಾಡಲಾಗುತ್ತದೆ 15 ಲಕ್ಷ ರೂಪಾಯಿ; ದಿನದ 24 ಗಂಟೆಯೂ ಇರುತ್ತೆ ಟೈಟ್ ಸೆಕ್ಯುರಿಟಿ!

Spread the love

ನಮ್ಮ ದೇಶದಲ್ಲಿ ಎಲ್ಲಕ್ಕೂ ಹೆಚ್ಚು ಸಂರಕ್ಷಣೆ ರಾಜಕಾರಣಿಗಳಿರುತ್ತೆ ಅಲ್ವಾ? ಈ ವಿಷಯ ಎಲ್ಲರಿಗೂ ಗೊತ್ತು. ಇದನ್ನು ಬಿಟ್ಟು ನಮ್ಮ ರಕ್ಷಣೆ ಮಾಡುವ ಸೈನಿಕರು ದೇಶಕ್ಕಾಗಿ ಹಗಲು ರಾತ್ರಿ ಎನ್ನದೆ ಒಂದೇ ಸಮನೆ ಗಡಿಯಲ್ಲಿ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಗಸ್ತು ಹೊಡೆಯುತ್ತಿರುತ್ತಾರೆ. ಇನ್ನು ಕೆಲವು ಮಹತ್ವದ ವ್ಯಕ್ತಿಗಳಿಗಂತೂ ಅಭೂತಪೂರ್ವ ಭದ್ರತೆಯನ್ನು ಒದಗಿಸಲಾಗುತ್ತದೆ, ಹಾಗೂ ಇದಕ್ಕೆ ಸಾಕಷ್ಟು ಹಣವನ್ನು ಸಹಿತ ಖರ್ಚು ಮಾಡಲಾಗುತ್ತದೆ.
ಇವೆಲ್ಲದರ ಹೊರತಾಗಿ ನಮ್ಮ ದೇಶದಲ್ಲಿ ಒಂದು ಮರವಿದೆ. ಅದಕ್ಕೂ ಸಹಿತ VVIP ಟ್ರೀಟ್ ಮೆಂಟ್ ಕೊಡುತ್ತಾರೆ, ಅದಕ್ಕೂ ಸಹ ದಿನದ 24 ಗಂಟೆಗಳು ಭದ್ರತೆಯನ್ನು ಒದಗಿಸಲಾಗುತ್ತದೆ ಎಂದರೆ ನಂಬುತ್ತೀರಾ? ಹೌದು ನೀವು ನಂಬಲೇಬೇಕು, ಯಾಕೆಂದರೆ, ಇಂಥದ್ದೊಂದು ಮರ ನಮ್ಮ ದೇಶದ ಮಧ್ಯಪ್ರದೇಶ ರಾಜ್ಯದ ಭೋಪಾಲ್ ಮತ್ತು ವಿದಿಶಾ ರಸ್ತೆಯ ಮಧ್ಯದಲ್ಲಿ ಬರುವ ಸಲಾಮತ್ ಪುರ ಹೆಸರಿನ ಊರಿನಲ್ಲಿದೆ. ಈ ಮರಕ್ಕೆ ವರ್ಷ ಒಂದಕ್ಕೆ 12 ರಿಂದ 15 ಲಕ್ಷಗಳವರೆಗೆ ಸರಕಾರ ಖರ್ಚು ಮಾಡುತ್ತದೆ. ಇದರ ಸುತ್ತಲೂ ಸಂಪೂರ್ಣ ಜಾಳಿಗೆಯನ್ನು ಕೂಡಿಸಿಯೂ ದಿನದ 24 ಗಂಟೆಗಳ ಕಾಲ ಪೊಲೀಸರ ಖಡಕ್ ಬಂದೋಬಸ್ತ್ ಸಹಿತ ಇರುತ್ತದೆ.
ಇನ್ನು ಈ ಮರಕ್ಕೆ ಯಾಕಪ್ಪಾ ಇಷ್ಟೊಂದು ಖರ್ಚು ಮತ್ತು ಭದ್ರತೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿತಾ ಹಾಗಾದರೆ ತಿಳಿದುಕೊಳ್ಳಿ….

ಈ ಮರವನ್ನು ಶ್ರೀಲಂಕಾದ ರಾಷ್ಟಪತಿ ಮಹಿಂದ್ರಾ ರಾಜಪಕ್ಷೆಯವರು ನೆಟ್ಟಿದ್ದಾರೆ. ಈ ಮರ ಸಾಮಾನ್ಯ ಮರವಲ್ಲದೆ ಗೌತಮ್ ಬುದ್ಧರು ಯಾವ ಮರದ ಕೆಳಗೆ ಕುಳಿತು ಜ್ಞಾನವನ್ನು ಪ್ರಾಪ್ತ ಮಾಡಿಕೊಂಡರೋ ಆ ಮರದ ಟೊಂಗೆಯನ್ನೇ ಇಲ್ಲಿ ನೆಟ್ಟಿದ್ದಾರೆ. ಈಗ ಇದು ವೃಕ್ಷದಲ್ಲಿ ರೂಪಾಂತರವಾಗಿದೆ. ಈ ಮರವೆಂದರೆ ಗೌತಮ್ ಬುದ್ಧರ ಪ್ರತೀಕವೆಂದು ತಿಳಿಯಲಾಗಿದೆ. ಇದೇ ಕಾರಣದಿಂದ ಈ ಮರದ ಇಷ್ಟೊಂದು ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತಿದೆ.

ಈ ಮರವನ್ನು ರಾಜಪಕ್ಷೆಯವರು 8 ವರ್ಷಗಳ ಹಿಂದೆ ಅಂದರೆ 21 ಸೆಪ್ಟೆಂಬರ್ 2012 ರಲ್ಲಿ ನೆಟ್ಟಿದ್ದರು. ಮುಂದೆ ಕೆಲವು ದಿವಸಗಳ ನಂತರ ಮರಕ್ಕೆ ಗೆದ್ದಲು ಹತ್ತಿ ಎಲೆಗಳು ಕಪ್ಪಾಗಿ ಉದುರ ತೊಡಗಿದವು. ವಾತಾವರದಲ್ಲಿಯ ಬದಲಾವಣೆಯಿಂದ ಮರದ ಮೇಲೆ ಪ್ರತಿಕೂಲ ಪರಿಣಾಮವಾಗಿ ಮರ ಕ್ಷಯಿಸತೊಡಗಿದಾಗ ಸರಕಾರ ಬೇಗನೆ ಎಚ್ಚೆತ್ತು ಅದಕ್ಕೆ ಸರಿಯಾಗಿ ಮನುಷ್ಯರಿಗೆ ಉಪಚಾರ ಮಾಡುವ ಹಾಗೆ ಇದಕ್ಕೂ ಮಾಡಲಾಯಿತು. ಈ ಮರಕ್ಕೆ ಇಂಜೆಕ್ಷನ್ ಮತ್ತು ಸಲಾಯಿನ್ ವ್ಯವಸ್ಥೆಯನ್ನು ಮಾಡಲಾಯಿತು. ಇಷ್ಟೆಲ್ಲ ಮಾಡಿದ ನಂತರ ಮರ ಮತ್ತೆ ಮೊದಲಿನ ಹಾಗೆ ಹಸಿರಾಗಿ ಬೆಳೆಯಲಾರಂಭಿಸಿತು. ಸದ್ಯಕ್ಕೆ ಈ ಮರ 20 ಫೀಟ್ ಎತ್ತರವಾಗಿದೆ.

ಈ ಮರಕ್ಕೆ ನೀರಿನ ವ್ಯವಸ್ಥೆ ನಗರಪಾಲಿಕೆ ಮಾಡುತ್ತದೆ. ಈ ವೃಕ್ಷಕ್ಕೆ ಯಾವುದೇ ರೋಗ ತಗುಲಬಾರದೆಂದು ಪ್ರತಿ ವಾರ ಕೃಷಿ ಅಧಿಕಾರಿಯ ಭೆಟ್ಟಿ ಇದ್ದೇ ಇರುತ್ತದೆ. ಈ ಮರದ ಸಂಪೂರ್ಣ ವ್ಯವಸ್ಥೆ DC ಕಡೆಯಿಂದ ಮಾಡಲಾಗುತ್ತೆ. ಈ ವೃಕ್ಷದ ದರ್ಶನಕ್ಕಾಗಿ ಪ್ರವಾಸಿಗರಿಗೆ ಒಂದು ಸರಿಯಾದ ರಸ್ತೆಯ ನಿರ್ಮಾಣವನ್ನು ಸರಕಾರ ವತಿಯಿಂದ ಮಾಡಲಾಗಿದೆ.

 

 


Spread the love

About Ad9 News

Check Also

ನಾನೇ ಅಭ್ಯರ್ಥಿ ಎಂದು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ: ಸಿಎಂ ಸಿದ್ದರಾಮಯ್ಯ

Spread the love ಯರಗಟ್ಟಿ : ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನೇ ಸ್ಪರ್ಧಿಸಿದ್ದೇನೆ ಎಂದು ತಿಳಿದುಕೊಳ್ಳಿ. ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದರೆ …