ಜಮಖಂಡಿ:ಸಾಮಾನ್ಯ ಕಾರ್ಯಕರ್ತ ರಾಜ್ಯ ಮಟ್ಟದಲ್ಲಿ ಬೆಳೆಯುವುದನ್ನು ಕಂಡು ಸ್ವಪಕ್ಷದವರೇ ಅವನ ಮೇಲೆ ಕೊಲೆಗೆ ಯತ್ನಿಸಿದ್ದಾರೆ….
ದಲಿತ ಸಮುದಾಯದ ವ್ಯಕ್ತಿ ರವಿನಂದನ ಒಬ್ಬ ಬಡ ಕುಟುಂಬದ ಹುಡುಗ ನಿಷ್ಠಾವಂತ ಕಾಂಗ್ರೆಸ್ಸಿನ ಕಾರ್ಯಕರ್ತ,ತನ್ನದೇ ಪಕ್ಷದವರೇ ಆಗಲಿ ವಿರೋಧ ಪಕ್ಷದವರೇ ಆಗಲಿ ಯಾರೇ ತಪ್ಪು ಮಾಡಿದ್ರೆ ನೇರವಾಗಿ ಅವರ ವಿರುದ್ದ ಹೋರಾಡುವಂತಹ ವ್ಯಕ್ತಿ….
ಕ್ರೀಯಾಶೀಲ ಹಾಗೂ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯ ಮಾಡುವುದರ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬರವಣಿಗೆ ಮುಖಾಂತರ ತನ್ನ ಪಕ್ಷದ ವಿಷಯವನ್ನು ಮುಟ್ಟಿಸುತ್ತಾ ರಾಜ್ಯದ ಅನೇಕ ಕಡೆ ಗೆಳೆಯರ ಬಳಗವನ್ನು ಹೊಂದಿದ್ದಾನೆ….
ಯಾವುದೇ ಸ್ವಾರ್ಥ,ಅಪೇಕ್ಷೆ ಇಲ್ಲದೇ, ತನ್ನ ಪಕ್ಷ ನಿಷ್ಠೆಯಿಂದ ಹಂತ ಹಂತವಾಗಿ ಬೆಳೆದಿರುವ ವ್ಯಕ್ತಿ,ಸಾಮಾಜಿಕ ಜಾಲತಾಣದ ಬಾಗಲಕೋಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ,ತದನಂತರ ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿ,ಹಾಗೂ ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಜಾತಿ-ಧರ್ಮವನ್ನು ಮೀರಿ ಎಲ್ಲ ವರ್ಗದ ಜನರ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡು ಪಕ್ಷದ ಕೆಲಸ ಮಾಡಿ ರಾಜ್ಯ ಮಟ್ಟದ ನಾಯಕರ ಜೊತೆ ಆತ್ಮೀಯತೆ ಹೊಂದಿ ರಾಜ್ಯದ ತುಂಬಾ ಗುರುತಿಸಿಕೊಂಡಿರುವ ಸಾಮಾನ್ಯ ವ್ಯಕ್ತಿ.ಯಾರಿಗೂ ದ್ರೋಹ ಬಯಸದೇ ಎಲ್ಲರಿಗೂ ಒಳ್ಳೆಯದನ್ನೇ ಬಯಸೋ ವ್ಯಕ್ತಿತ್ವ.
ಇಂತಹ ವ್ಯಕ್ತಿಗೆ ಬೆದರಿಕೆ ಕರೆಗಳು.ಅವರ ಮೇಲೆ ಆದಂತಹ ಹಲ್ಲೆ ನೋಡಿ ಅವರ ಅಭಿಮಾನಿಗಳಿಗೆ ತುಂಬಾ ನೋವಾಗಿದೆ.
ರವಿನಂದನ ಮುಂಬರುವ ದಿನಗಳಲ್ಲಿ ಜಮಖಂಡಿ ಕ್ಷೇತ್ರದ ಪ್ರಬಲ ಕಾಂಗ್ರೆಸ್ಸಿನ ಅಭ್ಯರ್ಥಿ ಆಗುತ್ತಾರೆ ಎಂದು ತಿಳಿದು ಸ್ವಪಕ್ಷದವರೇ ಮನಬಂದಂತೆ ಹಲ್ಲೆ ಮಾಡಿದ್ದಾರೆ.ಈಗ ರವಿನಂದನ ಜಮಖಂಡಿಗೆ ಸೀಮಿತವಾದ ವ್ಯಕ್ತಿಯಲ್ಲಾ….ಅವನು ಈಗ ರಾಜ್ಯ ಮಟ್ಟದ ಕಾಂಗ್ರೆಸ್ಸಿನ ಕಾರ್ಯಕರ್ತ ಅವನ ಅಭಿಮಾನಿಗಳ ಹಾಗೂ ಗೆಳೆಯರ ಬಳಗ ತುಂಬಾ ದೊಡ್ಡದಾಗಿದೆ ಅವನು ಎಲ್ಲರಿಗೂ ಕರೆ ಕೊಟ್ಟರೆ ಸಾಕು ರಾಜ್ಯದ ತುಂಬಾ ಅಭಿಮಾನಿಗಳು,ಯುವ ಸಮುದಾಯ,ದಲಿತ ಸಮುದಾಯದ ನಾಯಕರು ಹೋರಾಟ ಮಾಡುವುದು ಖಚಿತ. ಅವನು ಹೊಳೆಯಲ್ಲಿರುವ ಮೀನಲ್ಲಾ,ಅವನು ಈಗ ಸಮುದ್ರದ ತಿಮಿಂಗಲು.
ಅದೇನೆಯಾಗಿರಲಿ ಅಣ್ಣಾ ನಿಮ್ಮ ಜೊತೆನಾವಿದ್ದೇವೆ,ನಿಮ್ಮ ಜೊತೆ ಯುವ ಸಮುದಾಯವಿದೆ.ದಲಿತ ಸಮುದಾಯವಿದೆ,ಈ ನಿಮ್ಮ ಸಮಾಜ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯಲಿ….ನಿಮ್ಮ ಹೋರಾಟ ನಿಲ್ಲದಿರಲಿ..ನಿಮ್ಮ ಹೋರಾಟ ನಿರಂತರವಾಗಿರಲಿ ಎನ್ನುವುದೇ ನಮ್ಮ ಆಶಯ…..ಹಲ್ಲೆಗೊಳಗಾದ ಹುಲಿಯ ಘರ್ಜನೆ ಮುಂದೊಂದು ದಿನ ಬಹಳ ಭಯಂಕರವಾಗಿರುತ್ತದೆ…..ಹಲ್ಲೆ ಮಾಡಿದ ವ್ಯಕ್ತಿಗಳು ಇದನ್ನು ಅನುಭವಿಸುತ್ತಾರೆ.