Breaking News

ಕಲ್ಲೋಳಿಯಲ್ಲಿ ನಿನಾಸಂದಿಂದ ಜನ ಮನ ಸೆಳೆದ ಹುಲಿಯ ನೆರಳು ನಾಟಕ ಪ್ರದರ್ಶನ

Spread the love


ಮೂಡಲಗಿ: ಕಲ್ಲೋಳಿ ಪಟ್ಟಣವು ರಾಜಕೀಯ, ಸಾಂಸ್ಕøತಿಕ, ವೈಜ್ಞಾನಿಕ, ಶೈಕ್ಷಣಿಕ, ಕ್ರೀಡೆ ಹಾಗೂ ಇತರೆ ರಂಗದಲ್ಲಿ ಮೂಡಲಗಿ ವಲಯದಲ್ಲಿಯೇ ಮೂಂಚುಣಿಯಲ್ಲಿದೆ ಎಂದು ಗೋಕಾಕದ ನಿವೃತ್ತ ಉಪನ್ಯಾಸಕ ಸಾಹಿತಿ ಚಂದ್ರಶೇಖರ ಅಕ್ಕಿ ಹೇಳಿದರು

ಅವರು ಗುರುವಾರ ರಾತ್ರಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಪಟ್ಟಣದ ಗಾಂಧಿ ಮೈದಾನದ ರಂಗ ಮಂದಿರದಲ್ಲಿ ನಿನಾಸಂ ತಂಡದಿಂದ ಸುವರ್ಣ ಕರ್ನಾಟಕದ ಸಂಭ್ರಮ 2023 ಅಂಗವಾಗಿ ಗುರುವಾರ ರಾತ್ರಿ ಹುಲಿಯ ನೆರಳು ನಾಟಕದ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಶಿವಮೊಗ್ಗ್ ಜಿಲ್ಲೆಯ ಹೆಗೂಡುದಲ್ಲಿ ನೀನಾಸಂ 1940 ರಲ್ಲಿ ಕೆ.ವಿ.ಸುಬ್ಬಣ್ಣನವರಿಂದ ಪ್ರಾರಂಬಗೊಂಡ ಇದನ್ನು ರಾಷ್ಟ್ರೀಯ ಅಂತರಾಷ್ಟ್ರೀ ಮಟ್ಟದಲ್ಲಿ ಅವರ ಮಗ ಕೆ.ವಿ.ಅಷಕರವರು ಮುಂದು ವರಿಸಿಕೊಂಡು ಬಂದಿದ್ದಾರೆ, ಪ್ರಸ್ತುತ ಕೇವಲ ದಕ್ಷಿಣ ಭಾಗದಲ್ಲಿ ಇದರ ಪ್ರಯೋಗಗಳು ನಡೆಯುತ್ತಿದ್ದು, ಸದ್ಯ ಉತ್ತರ ಕರ್ನಾಟಕದಲ್ಲಿ ಇದರ ಪ್ರಯೋಗ ಯಶಸ್ವಿಗೋಳ್ಳಿತ್ತಿದೆ, ಹಲವಾರು ಸಾಹಿತ್ಯಗಳ ಕಾದಂಬರಿ ಆಧಾರಿತ ಸಮಾಜ ಜಾಗೃತಿಗೊಳಿಸುವ ನಾಟಕ ಪ್ರಯೋಗ ಮಾಡುತ್ತಿರುವುದು ಶ್ಲಾಘನೀಯವಾದ್ದು ಎಂದರು.
ಮುಖ್ಯ ಅತಿಥಿ ಗೋಕಾಕದ ಮುಖಂಡ ಅಶೋಕ ಪೂಜೇರಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಪೌರಾಣಿಕ ನಾಟಕಗಳು ಕಷ್ಟಕರವಾಗಿದ್ದು, ನಿನಾಸಂ ತಂಡದಿಂದ ಪ್ರದರ್ಶನವಾಗುತ್ತಿರುವ ನಾಟಕ ಪ್ರದರ್ಶನಕ್ಕೆ ಜನರು ಉತ್ತಮ ಪ್ರತಿಕ್ರೀಯೆ ತೋರುತ್ತಿರುವ ಸಂತೋಷದ ಸಂಗತಿ, ನಿನಾಸಂ ಮುಖ್ಯ ಉದ್ದೇಶ ಕಲಾವಿದರೆಗೆ ಪರಿಪೂರ್ಣವಾದ ತರಬೇತಿ ನೀಡಿ ಈ ನಾಡಿನ ಶ್ರೇಷ್ಠ ಕಲಾವಿದರನ್ನಾಗಿ ಹೊರ ಹೊಮ್ಮುಬೇಕು, ಕಲಾವಿದರು ಕಲಾಪ್ರತಿಬೇಯನ್ನು ಈ ನಾಡಿನಾದ್ಯಂತ ಪ್ರದರ್ಶ ಮಾಡಬೇಕೆಂಬÀ ಭಾವನೆಯಿಂದ ಕಟ್ಟಿದ ಸಂಸ್ಥೆಯಾಗಿದೆ, ನಿನಾಸಂದಲ್ಲಿ ಕಲಾ ಪ್ರದರ್ಶನ ನೀಡಿದವರು ಒಂದು ವರ್ಷದಲ್ಲಿ ಚಲನ ಚಿತ್ರ ಮತ್ತು ಟವಿ ಮಾಧ್ಯಮದಲ್ಲಿ ಗುರುತಿಸಿಕೊಳ್ಳತ್ತಿದ್ದಾರೆ ಎಂದ ಅವರು ಈ ನಾಡಿನಲ್ಲಿ ರಂಗಭೂಮಿ, ಜಾಣಪದ ಕಲೆ, ಹವ್ಯಾಸಿ ಕಲೆ ಸೇರಿದಂತೆ ಇತರೆ ಕಲೆಗಳು ಉಳಿಯಬೇಕಾದರೆ ಕಲಾಕಾರ, ಸಾಹಿತ್ಯ ಬರೆಯುವರಿಂದ ಮತ್ತು ಪ್ರೇಕ್ಷರಿಂದ ಮಾತ್ರ ಸಾಧ್ಯ ಇಲ್ಲ ಕಲಾ ಪ್ರದರ್ಶನ ಆಯೋಜನೆ ಮಾಡುವರಿಂದಲು ಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
ಸಮಾರಂಭ ವೇದಿಕೆಯಲ್ಲಿ ಸಂಘಟಕರಾದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಬೆಳಕೂಡ, ಬವರಾಜ ಕಡಾಡಿ, ವಸಂತ ತಹಶಿಲ್ದಾರ, ಕೃಷ್ಣಪ್ಪ ಮುಂಡಿಗಿನಾಳ, ಬಸವರಾಜ ಬೆಳಕೂಡ, ಗಿರಿಮಲ್ಲಪ್ಪ ಸಂಸುದ್ದಿ, ಮಲ್ಲಪ್ಪ ಕಡಾಡಿ, ಬಾಳು ಕಂಕಣವಾಡಿ, ಸುಭಾಸ ಕುರಬೇಟ, ಭೀಮಶಿ ಹೆಬ್ಬಾಳ, ಬಸವರಾಜ ದಾಸನಾಳ, ಹಣಮಂತ ಸಂಗಟಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಇದ್ದರು.
ಜಗದೀಶ ಗೊರಗುದಿ ಸ್ವಾಗತಿಸಿದರು, ಪ್ರಕಾಶ ಗರಗಟ್ಟಿ ನಿರೂಪಿಸಿದರು, ದುಂಡಯ್ಯಾ ಕರಗಾಂವಿಮಠ ವಂದಿಸಿದರು
ಫೋಟೋ ಕ್ಯಾಪ್ಸನ್> ಮೂಡಲಗಿ: ಕಲ್ಲೋಳಿಯಲ್ಲಿ ನಿನಾಸಂ ತಂಡದಿಂದ ಸುವರ್ಣ ಕರ್ನಾಟಕದ ಸಂಭ್ರಮ 2023 ಅಂಗವಾಗಿ ಏರ್ಪಡಿಸಿ ಹುಲಿಯ ನೆರಳು ನಾಟಕದ ಉದ್ಘಾಟನಾ ಸಮಾರಂಭವನ್ನು ಸಾಹಿತಿ ಚಂದ್ರಶೇಖರ ಅಕ್ಕಿ ಉದ್ಘಾಟಿಸಿದರು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *