Breaking News

ಪ್ರೊಬೇಷನರಿ ಅವಧಿಯಲ್ಲಿ ಆರೋಪ ಬಂದರೆ ಏಕಾಏಕಿ ವಜಾನಾ?

Spread the love

ಬೆಂಗಳೂರು: ‘ಪ್ರೊಬೇಷನರಿ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ವಿರುದ್ಧ ದುರ್ನಡತೆ ಆರೋಪ ಬಂದರೆ ತನಿಖೆ ನಡೆಸದೆ ಅವರನ್ನು ಏಕಾಏಕಿ ವಜಾ ಮಾಡುವಂತಿಲ್ಲ’ ಎಂದು ಹೈಕೋರ್ಟ್ ಆದೇಶ ನೀಡಿದೆ.

ಈ ಕುರಿತಂತೆ ರಮೇಶ್ ಮಲ್ಲಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶವನ್ನೂ ನ್ಯಾಯಾಲಯ ಇದೇ ವೇಳೆ ರದ್ದುಗೊಳಿಸಿದೆ.

‘ನಿಯಮದ ಪ್ರಕಾರ ಪೊಬೇಷನರಿ ಅವಧಿಯಲ್ಲಿ ಅರ್ಜಿದಾರರನ್ನು ವಜಾಗೊಳಿಸುವ ಅಧಿಕಾರ ಇದೆ. ಆದರೆ, ಈ ರೀತಿ ಸಿಬ್ಬಂದಿ ವಿರುದ್ಧ ದೂರುಗಳು ಬಂದಾಗ ಕರ್ನಾಟಕ ನಾಗರಿಕ ಸೇವೆಗಳು (ಪ್ರೊಬೇಷನ್ ) ನಿಯಮ 1977 ಕಾಯ್ದೆಯ ಸೆಕ್ಷನ್‌ 5ರ ಪ್ರಕಾರ ತನಿಖೆ ನಡೆಸುವುದು ಅಗತ್ಯ. ತನಿಖೆ ನಡೆಸದೆಯೇ ಏಕಾಏಕಿ ಸೇವೆಯಿಂದ ವಜಾ ಮಾಡಬಾರದು’ ಎಂದು ನ್ಯಾಯಪೀಠವು ಆದೇಶದಲ್ಲಿ ವಿವರಿಸಿದೆ


Spread the love

About Ad9 News

Check Also

ಗೃಹಲಕ್ಷ್ಮಿ’ಯರಿಗೆ ಗುಡ್ ನ್ಯೂಸ್: ಖಾತೆಗೆ 2 ಸಾವಿರ ರೂ. ಯೋಜನೆಗೆ ಅರ್ಜಿ ಸಲ್ಲಿಕೆಗೆ ಇಂದು ದಿನಾಂಕ ನಿಗದಿ ಸಾಧ್ಯತೆ

Spread the love ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ …