Breaking News

ಗೋಪಲಪುರ ಚರ್ಚ್ ನಲ್ಲಿ ಜೋಸೆಫರ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಣೆ

Spread the love


_________________________
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ಗೋಪಾಲಪುರ ಚರ್ಚ್ ನಲ್ಲಿ ಸಂತ ಜೋಸೆಫರ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು ಭಾನುವಾರದ ಬೆಳಗಿನ ಬಲಿಪೂಜೆಯನ್ನು 10.30ಗಂಟೆಗೆ ಪ್ರಾರಂಭಿಸಿ ಮೊದಲಿಗೆ ಜೋಸೆಫರ ಪ್ರತಿಮೆಯನ್ನು ಚರ್ಚಿನ ಸುತ್ತಲೂ ಮೆರವಣಿಗೆ ಮುಖಾಂತರ ಕೊಂಡೊಯ್ಯಲಾಯಿತು. ಸರಿಯಾಗಿ ಹನ್ನೊಂದು ಗಂಟೆಗೆ ಬಲಿಪೂಜೆ ನೆರವೇರಿತು ..ಬಲಿಪೂಜೆಯಲ್ಲಿ ಚರ್ಚ್ ನ ಫಾದರ್ ಜಾಕಬ್ ಕೊಳನೂರು ಪ್ರಬೋಧನೆ ನೀಡುತ್ತಾ ಸಂತ ಜೋಸೆಫರು ದೇವರಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಇಟ್ಟುಕೊಂಡ ವ್ಯಕ್ತಿಯಾಗಿದ್ದರು ಹಾಗಾಗಿ ಜೋಸೆಫ್ ಮತ್ತು ಮಾತೆ ಮರಿಯಮ್ಮ ಮಗನಾಗಿ ಯೇಸು ಕ್ರಿಸ್ತರು ಈ ಲೋಕಕ್ಕೆ ಬಂದರು ಹಾಗಾಗಿ ಇವತ್ತು ಯೇಸುವಿನ ತಂದೆಯ ಹಬ್ಬವನ್ನು ಸಂತ ಜೋಸೆಫರ ಹಬ್ಬವೆಂದು ನಾವೆಲ್ಲರೂ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದೇವೆ .ನಾವೆಲ್ಲರೂ ಸಂತ ಜೋಸೆಫ್ ರಂತೆ ದೇವರಲ್ಲಿ ನಂಬಿಕೆ ಇಟ್ಟು ಪ್ರಾಮಾಣಿಕರಾಗಿ ಇರಬೇಕೆಂದು ಪ್ರಬೋಧನೆಯಲ್ಲಿ ತಿಳಿಸಿದರು ಮತ್ತು ಸಂತ ಸಂತ ಜೋಸೆಫ್ ರಲ್ಲಿ ಸರ್ವರಿಗೂ ಕೊರೋನಾ ಕಾಯಿಲೆ ಬಾಧಿಸದಂತೆ ಪ್ರಾರ್ಥಿಸಿದರು ಮತ್ತು ಕೊರೊನಾ ಕಾಯಿಲೆ ಬೇಗನೆ ನಿವಾರಣೆ ಆಗಲಿ ಎಂದು ಪ್ರಾರ್ಥಿಸಿದರು ಈ ಸಂದರ್ಭದಲ್ಲಿ ಫಾದರ್ ಜೇಕಬ್ ಕೊಳನೂರು ಮತ್ತು ಗೋಪಾಲಪುರ ಚರ್ಚನ ಎಲ್ಲ ಕ್ರೈಸ್ತ ಬಾಂಧವರು ನೆರೆದಿದ್ದರು..ಈ ಸಂದರ್ಭದಲ್ಲಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿತ್ತು


Spread the love

About Ad9 News