ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ತೋಯಳ್ಳಿ
ಗ್ರಾಮದಿಂದ ಕಣಾರಳ್ಳಿ ಗ್ರಾಮದವರೆಗೆ 5ಕಿಲೋ ಮೀಟರ್ ವರೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ ಆದರೆ ಈ ರಸ್ತೆ ಸಂಪೂರ್ಣ ಕಳಪೆಯಿಂದ ಕೂಡಿರುತ್ತದೆ . ಇದನ್ನು ಈಗಾಗಲೇ ಗ್ರಾಮಸ್ಥರುಗಳು ಕಳಪೆ ಕಾಮಗಾರಿಯನ್ನು ಗ್ರಾಮಸ್ಥರೆಲ್ಲರೂ ಸೇರಿ ಕಾಮಗಾರಿಯನ್ನು ನಿಲ್ಲಿಸುತ್ತಾರೆ. ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತರಿಗೆ ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ಈ ಕಳಪೆ ಕಾಮಗಾರಿ ಬಗ್ಗೆ ದೂರು ನೀಡಲು ತೋಯಳ್ಳಿ ಮತ್ತು ಶಿರಾಹ ಗ್ರಾಮಸ್ಥರು ಇಂದು ಮಡಿಕೇರಿಗೆ ತೆರಳುತ್ತಿದ್ದಾರೆ.