Breaking News
Home / ರಾಜ್ಯ>ಕೊಪ್ಪಳ / ವಿಕಲಚೇತನ ನೌಕರರು ಮನೆಯಿಂದಲೇ ಕೆಲಸ ಮಾಡುವ ಆದೇಶವು ಜೂನ್ 30ರ ವರೆಗೆ

ವಿಕಲಚೇತನ ನೌಕರರು ಮನೆಯಿಂದಲೇ ಕೆಲಸ ಮಾಡುವ ಆದೇಶವು ಜೂನ್ 30ರ ವರೆಗೆ

Spread the love

 

ಕೊಪ್ಪಳ: ವಿಕಲಚೇತನ ನೌಕರರು ಮನೆಯಿಂದಲೇ ಕೆಲಸ ಮಾಡುವ ಆದೇಶವು ಜೂನ್ 30 ರ ತನಕ ಮುಂದು ವರೆಯಲಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
ಈ ವಿಷಯದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಕಲಚೇತನ ನೌಕರರಿಗೆ ಈಗಾಗಲೇ ಕರೋನಾ ಎಂಬ ಮಹಾಮಾರಿಯಿಂದ ಮನೆಯಿಂದಲೇ ಕೆಲಸ ಮಾಡುವ ಆದೇಶದವು ಜಾರಿಯಲ್ಲಿ ಇತ್ತು. ಆದರೆ ಅನ್ ಲಾಕ್ ಪ್ರಕ್ರಿಯೆ ಇರುವುದರಿಂದ ಹಾಗೂ ಇನ್ನೂ ಒಂದು ವಾರ ವಿಕಲಚೇತನ ನೌಕರರು ಕಚೇರಿಗೆ ಹೋಗಲು ತೊಂದರೆಯಾಗಬಾರ ದೆಂದು ಸರಕಾರ ಮುಖ್ಯ ಕಾರ್ಯದರ್ಶಿ ರವಿ ಕುಮಾರ ಅವರು ಆದೇಶ ಮಾಡಿದ್ದಾರೆ.ಈ ಆದೇಶ ವು ಶಿಕ್ಷಕರು ಸೇರಿದಂತೆ ಎಲ್ಲಾ ಇಲಾಖೆಯ ವಿಕಲ ಚೇತನ ನೌಕರರಿಗೆ ಅನ್ವಯ ಆಗಲಿದೆ ಎಂದರು
ಪ್ರಸ್ತುತವಾಗಿ ಜೂನ್ 30 ರವರೆಗೆ ಮಾತ್ರ ಮನೆ ಯಿಂದಲೇ ಕೆಲಸ ಮಾಡಲು ಆದೇಶವಾಗಿದ್ದು ಮುಂದಿನ ವಾರದಲ್ಲಿ ಆದೇಶ ಮುಂದುವರೆಯುವ ಸಾಧ್ಯತೆ ಇದೇ ಎಂದು ತಿಳಿಸಿದ್ದಾರೆ. ಆದ್ದರಿಂದ ವಿಕಲ ಚೇತನ ನೌಕರರು ಯಾವುದೇ ಗೊಂದಲಕ್ಕೆ ಒಳಗಾಗದೆ ಇರುವ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಬೀರಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.


Spread the love

About Ad9 Haberleri