Breaking News

ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: 1 ವಾರದಲ್ಲಿ ಪ್ರಯಾಣಿಸಿದ ಮಹಿಳೆಯರೆಷ್ಟು? ಖರ್ಚಾಗಿದ್ದೆಷ್ಟು?

Spread the love

ಬೆಂಗಳೂರು: ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಜಾರಿಗೆ ತಂದಿರುವ ಚುನಾವಣಾ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಯಶಸ್ವಿಯಾಗಿ ಒಂದು ವಾರ ಪೂರೈಸಿದೆ. ಉಚಿತ ಪ್ರಯಾಣ ಘೋಷಣೆಯಾದ ಬೆನ್ನಲ್ಲೇ ಮಹಿಳೆಯರ ಓಡಾಟ ದ್ವಿಗುಣಗೊಂಡಿದೆ, ಯಾವುದೇ ಸರ್ಕಾರಿ ಬಸ್​ ನೋಡಿದರೂ ತುಂಬಿ ತುಳುಕುತ್ತಿದೆ.

ರಾಜ್ಯದ ಪುಣ್ಯ ಕ್ಷೇತ್ರಗಳಲ್ಲಂತೂ ಮಹಿಳೆಯರೇ ಸಂಖ್ಯೆಯೇ ಹೆಚ್ಚಿದ್ದು, ಶಕ್ತಿ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಶಕ್ತಿ ಯೋಜನೆ ಒಂದು ವಾರ ಪೂರ್ಣಗೊಳಿಸಿದ್ದು, ಒಂದು ವಾರದಲ್ಲಿ ಬರೊಬ್ಬರಿ 3 ಕೋಟಿ 12 ಲಕ್ಷದ 9 ಸಾವಿರದ 696 ಮಂದಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ನಾಲ್ಕೂ ನಿಗಮಗಳಲ್ಲಿಯೂ ಮಹಿಳಾ ಪ್ರಯಾಣಿಕರದ್ದೇ ದರ್ಬಾರ್​ ಎಂಬುದು ಗಮನಾರ್ಹ ಸಂಗತಿಯಾಗಿದೆ.

3 ಕೋಟಿ ಪ್ಯಾಕೇಜ್ ಗಿಟ್ಟಿಸಿದ ಎಲ್‌ಪಿಯು ಪದವೀಧರ!

ಯಾವ್ಯಾವ ದಿನ ಎಷ್ಟು ಪ್ರಯಾಣಿಕರು ಸಂಚರಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
* ಭಾನುವಾರ (ಯೋಜನೆ ಜಾರಿಯಾದ ದಿನ ಜೂ. 11): 5,71,023 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 1,40,22,878 ರೂಪಾಯಿ.
* ಸೋಮವಾರ (ಜೂ.12): 41,34,726 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 8,83,53,434 ರೂಪಾಯಿ.
* ಮಂಗಳವಾರ (ಜೂ.13): 51,52,769 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 10,82,02,191 ರೂಪಾಯಿ.
* ಬುಧವಾರ (ಜೂನ್​ 14): 50,17,174 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 11,51,08,324 ರೂಪಾಯಿ.
* ಗುರುವಾರ (ಜೂ.15): 54,05,629 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,37,89,585 ರೂಪಾಯಿ.
* ಶುಕ್ರವಾರ (ಜೂ. 16): 55,09,770 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣ ವೆಚ್ಚ 12,45,19,265 ರೂಪಾಯಿ.
* ಶನಿವಾರ (ಜೂ. 17): 54,30,150 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,88,81,618 ರೂಪಾಯಿ.

ಯೋಜನೆ ಜಾರಿಯಾದ ದಿನದಿಂದ ಶನಿವಾರದವರೆಗೆ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚ 69 ಕೋಟಿ 77 ಲಕ್ಷದ 68 ಸಾವಿರದ 971 ರೂಪಾಯಿ ಆಗಿದೆ. ಒಟ್ಟು 3 ಕೋಟಿ 12 ಲಕ್ಷದ 9 ಸಾವಿರದ 696 ಮಂದಿ ಪ್ರಯಾಣ ಮಾಡಿದ್ದು, ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ.

ಅಂದಹಾಗೆ ಶಕ್ತಿ ಯೋಜನೆಗೆ ಜೂನ್​ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹಾಗೂ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ವಿಧಾನಸೌಧದ ಮುಂಭಾಗ ಚಾಲನೆ ನೀಡಿದರು.


Spread the love

About Ad9 News

Check Also

ಗ್ರಾಮ ಒನ್ ಐಡಿ ರದ್ದುಗೊಳಿಸಿ ಕ್ರಮ : ಲಕ್ಷ್ಮೀ ಹೆಬ್ಬಾಳಕರ್

Spread the love ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಗ್ರಾಮ ಒನ್ ಸಿಬ್ಬಂದಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ …

Leave a Reply

Your email address will not be published. Required fields are marked *