ಮೂಡಲಗಿ: ಶಾಂತಿ ಸುವ್ಯವಸ್ಥೆ ಹಾಳಾಗುವ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ ಶಾಂತಿಯುತವಾಗಿ ಬಕ್ರೀದ ಹಬ್ಬ ಆಚರಿಸಬೇಕೆಂದು ಕುಲಗೋಡ ಪೊಲೀಸ್ ಠಾಣೆ ಪಿ.ಎಸ್. ಐ ಗೋವಿಂದಗೌಡ ಪಾಟೀಲ ಪಾಟೀಲ ಹೇಳಿದರು.
ಅವರು ಮೂಡಲಗಿ ತಾಲೂಕಿನ ಯಾದವಾಡ-ಕಾಮನಕಟ್ಟಿ ಗ್ರಾಮದಲ್ಲಿ ನಡೆದ ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ನಿಯಮ ಬದ್ದವಾಗಿ ಅನುಮತಿಸಿದ ಜಾನುವಾರು ಮತ್ತು ವಯಸ್ಸಿನ ದೃಢಿಕರಣ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದು ಬಕ್ರೀದ ಹಬವನ್ನು ಆಚರಿಸಬೇಕು, ಪ್ರಾಣಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಕಾನೂನು ಪಾಲನೆ ಮಾಡದೇ ಇದ್ದರೇ ಮುಲ್ಲಾಜಿಲ್ಲದೆ ಕ್ರಮ ಕೈಗೊಳಲಾಗುವದು.ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ಜಾತಿ ಭೇದಬಾವ ಇಲ್ಲದೆ ಹಬ್ಬಗಳನ್ನು ಆಚರಿಸಬೇಕು ಎಂದರು.
ಸಂದರ್ಭದಲ್ಲಿ ಆರಕ್ಷ ಸಿಬ್ಬಂದಿಗಳಾದ ಎಲ್. ಎಂ.ನಾಯಿಕ. ಎಸ್. ಎಸ್.ವಜ್ರಮಟ್ಟಿ ಹಾಗೂ ಮುಖಂಡರಾದ ಅಮೀನಸಾಬ ಯಳ್ಲೂರ. ಶಿಖಂದರ ಮೋಮಿನ. ಹಸನ ಮುಧೋಳ. ಹಣಮಂತ ಮೋಡಿ ಹಾಗೂ ಗ್ರಾಮಸ್ತರು ಇದ್ದರು.
Check Also
ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …