Breaking News
Home / ಮೂಡಲಗಿ / ತಾಲೂಕಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ: ಮನವಿ

ತಾಲೂಕಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ: ಮನವಿ

Spread the love

 

ಮೂಡಲಗಿ: ಬಿಎಲ್‍ಒ, ಬಿಆರ್‍ಪಿ, ಸಿಆರ್‍ಪಿಗಳಿಗೆ ರಜೆ ಅವಧಿಯಲ್ಲಿ ಕಾರ್ಯ ನಿರ್ವಹಿಸಿದವರಿಗೆ ಗಳಿಕೆ ರಜೆ ಮಂಜೂರಿ, 50 ವರ್ಷ ಮೇಲ್ಪಟ್ಟ, ಅಂಗವಿಕಲ, ಅನಾರೋಗ್ಯ ಪೀಡಿತ ಶಿಕ್ಷಕರಿಗೆ ಬಿ.ಎಲ್.ಒ ಕಾರ್ಯದಿಂದ ಕೈಬೀಡುವದು, ಪಿಎಸ್‍ಟಿ ಶಿಕ್ಷಕರಿಗೆ ಪದವಿಧರರಿಗೆ ಜಿಪಿಟಿ ಶಿಕ್ಷಕರಾಗಿ ಬಡ್ತಿಯೊಂದಿಗೆ ವಿಲೀನಗೋಳಿಸುವದು, ವರ್ಗಾವಣೆಗೊಂಡ ಶಿಕ್ಷಕರಿಗೆ ತ್ವರಿತಗತಿಯಲ್ಲಿ ಚಾಲನಾ ಆದೇಶಗಳನ್ನು ನೀಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕದಿಂದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ ಹಾಗೂ ಬಿಇಒ ಅಜಿತ ಮನ್ನಿಕೇರಿಯವರಿಗೆ ಮನವಿ ಸಲ್ಲಿಸಿದರು.
ಸೋಮವಾರ ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಸಭೆ ನಡೆಯಿಸಿ ಶೈಕ್ಷಣಿಕವಾಗಿ ಶಿಕ್ಷಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಸಲ್ಲಿಸಿದರು. ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಮಾರ್ಗದರ್ಶನ ಪಡೆದು ಸಮಸ್ಯೆಗಳನ್ನು ಕೂಡಲೆ ಇತ್ಯರ್ಥಗೊಳಿಸಲಾಗುವದು ಎಂದು ತಹಶೀಲ್ದಾರ ಶಿವಾನಂದ ಬಬಲಿ ಹಾಗೂ ಬಿಇಒ ಅಜಿತ ಮನ್ನಿಕೇರಿ ತಿಳಿದರು.
ಈ ಸಂದರ್ಭದಲ್ಲಿ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಎಮ್ ಬಡಕಲ್, ಕಾರ್ಯದರ್ಶಿ ಎ.ಪಿ ಪರಸನ್ನವರ, ಮಾಜಿ ತಾಲೂಕಾಧ್ಯಕ್ಷ ಎಮ್.ವಾಯ್ ಸಣ್ಣಕ್ಕಿ, ವಾಯ್.ಡಿ ಝಲ್ಲಿ, ಎಮ್.ಜಿ ಮಾವಿನಗಿಡದ, ಎಸ್.ಎ ಕುರಣಗಿ, ಕೆ.ಎಲ್ ಮೀಶಿ, ಎನ್.ಜಿ ಹೆಬ್ಬಳ್ಳಿ, ಎಸ್.ಎಮ್ ದಬಾಡಿ, ಎಲ್.ಕೆ ಹೆಬ್ಬಾಳ ಹಾಗೂ ಕಛೇರಿ ಸಿಬ್ಬಂದಿಗಳು ಹಾಜರಿದ್ದರು.

 


Spread the love

About Ad9 Haberleri

Check Also

ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …

Leave a Reply

Your email address will not be published. Required fields are marked *