ಮೂಡಲಗಿ : ಶುಕ್ರವಾರದಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ, ತಾಲೂಕು ಆಡಳಿತ, ತಾಲೂಕ ಪಂಚಾಯತ ಮೂಡಲಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಗೋಕಾಕ್ ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ವೇಳೆ ತಾಲೂಕು ಮಟ್ಟದ ಹಲವಾರು ಅಧಿಕಾರಿಗಳು ಗೈರಾಗಿದ್ದಾರೆ.
ದಲಿತರ ಕುಂದುಕೊರತೆ ಸಭೆಯಲ್ಲಿ ಕೂಡ ಅನೇಕ ತಾಲ್ಲೂಕು ಮಟ್ಟದ ಅಧಿಕಾರಿಗಳು ಬರದೆ ಕೇವಲ ಹೆಸರಿಗಷ್ಟೇ, ತಮ್ಮ ಕೆಳ ಸಿಬ್ಬಂದಿಯನ್ನು ಕಳುಹಿಸಿ ಕುಂದು ಕೊರತೆಗಳ ಸಭೆಗೆ ಹಾಜರಾಗಲು ಹೇಳಿರುತ್ತಾರೆ.
ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಪವಿತ್ರ ಗ್ರಂಥ ವಿದ್ದಂತೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿರುವ ಮೂಡಲಗಿ ತಹಶೀಲ್ದಾರ್ ಶಿವಾನಂದ್ ಬಬಲಿಯವರು, *ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ನಿಷ್ಕಾಳಜಿ ತೋರಿಸಿ, ಗೈರಾದ ಅಧಿಕಾರಿಗಳ ಮೇಲೆ* ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅಂತ ಕಾಯ್ದು ನೋಡಬೇಕಾಗಿದೆ.