ಮೂಡಲಗಿ: ಸಹಕಾರಿ ನಗರ ಎಂದೇ ಖ್ಯಾತಿಯ ಮೂಡಲಗಿ ಪಟ್ಟಣದ ಶ್ರೀ ಶಿವಬೋಧಂಗ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಟಿಯು 18ನೇ ಶಾಖೆಗಳನ್ನು ಹೊಂದಿ ಕಳೆದ ಮಾರ್ಚ ಅಂತ್ಯಕ್ಕೆ 5.10 ಕೋಟಿ ರೂ ಲಾಭ ಗಳಿಸಿ, ಶೇರುದಾರರಿಗೆ ಶೇ.16 ಲಾಭಾಂಶ ವಿತರಿಸಿ ಪ್ರಗತಿ ಪಥತದ್ತ ದಾಪುಗಾಲು ಹಾಕುತ್ತಿದೆ ಎಂದು ಸೊಸಾಯಟಿಯ ಉಪಾಧ್ಯಕ್ಷ ಪುಲಕೇಶ ಸೋನವಾಲಕರ ಹೇಳಿದರು.
ಅವರು ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಮೂಡಲಗಿ ಶ್ರೀ ಶಿವಬೋಧಂಗ ಅರ್ಬನ್ ಕೋಆಫ್ ಕ್ರೆಡಿಟ್ ಸೊಸಾಯಿಟಿಯ 28 ನೇ ವಾರ್ಷಿಕಸರ್ವ ಸಾಧಾರಣ ಸಭೆಂiÀಲ್ಲಿ ಮಾತನಾಡಿ, ಸೊಸಾಯಟಿಯು ಹೆಮ್ಮರವಾಗಿ ಬೆಳೆಯಲು ಆಡಳಿತ ಮಂಡಳಿಯ ನಿಶ್ವಾರ್ಥ ಸೇವೆ, ಸಿಬ್ಬಂದಿ ವರ್ಗದವರ ಪ್ರಾಮಾಣಿಕ ದುಡಿಮೆ ಹಾಗೂ ತ್ವರೀತ ಸೇವೆ ಮತ್ತು ಶೇರುದಾರರ ಮತ್ತು ಸಾಲಗಾರರ ಸಹಕಾರ ಮುಖ್ಯ ಎಂದರು. ಸನ್ 1995ರಲ್ಲಿ 300 ಸದಸ್ಯರೊಂದಿಗೆ ಪ್ರಾರಂಭಗೊಂಡ ಸೊಸಾಯಟಿಯು ಇಂದು 14704 ಸದಸ್ಯರನ್ನೊಳಗೊಂಡು 5.25 ಕೋಟಿ ರೂ. ಶೇರು ಬಂಡವಾಳ ಹೊಂದಿದೆ. ಸಾರ್ವಜನಿಕ ವಲಯದಿಂದ 266 ಕೋಟ ರೂ. ಠೇವು ಸಂಗ್ರಹಿಸಿ, 166 ಕೋಟಿ ರೂ ಶೇರುದಾರರಿಗೆ ವಿವಿಧ ರೀತಿಯ ಸಾಲದ ಸೌಲಭ್ಯಗಳನ್ನು ನೀಡಿದೆ. ಠೇವಣಿದಾರರ ಭದ್ರತೆಗಾಗಿ 85 ಕೋಟಿ ರೂ ಇತರೆ ಬ್ಯಾಂಕುಗಳಲ್ಲಿ ಠೇವುಣಿ ಮಾಡಲಾಗಿದೆ. 316 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿ, .1138 ಕೋಟ ರೂ. ವಾÀರ್ಷಿಕ ವಹಿವಾಟು ಮಾಡಿರುವದು ಹೆಮ್ಮೆಯ ಸಂಗತಿ ಎಂದ ಅವರು ಎಲ್ಲ ಶಾಖೆಗಳನ್ನು ಪ್ರಗತಿಪಥದತ್ತ ನಡೆದಿವೆ. ರಾಮದುರ್ಗ ಶಾಖೆಯು ಸ್ವಂತ ಕಟ್ಟಡ ಹೊಂದಿದೆ ಎಂದರು.
ಬೆಳಗಾವಿ ಶಾಖಾ ಸಲಹಾ ಸಮಿತಿಯ ಸದಸ್ಯ ಪಾಂಡುರಂಗ ವ್ಹಿ.ಮಾಸ್ತಿ, ರಬಕವಿ ಶಾಖೆಯ ಶಾಖಾ ಸಲಹಾ ಸಮಿತಿಯ ಸದಸ್ಯ ಶಿವನಂದ ಎಮ್ ದಾಶಾಳ ಸೊಸಾಯಟಿಯ ಪ್ರಗತಿ ಕುರಿತು ಮಾತನಾಡಿದರು.
ಪ್ರಧಾನ ವ್ಯವಸ್ಥಾಪಕರಾದ ಸುರೇಶ ನಾಶಿ ಅಢಾವೆ ಪತ್ರಿಕೆ, ಹಣಮಂತ ಕುಂಬಾರ ಲಾಭ-ಹಾನಿ ಪತ್ರಿಕೆ, ಕೆ.ಜಿ.ಕುದರಿ ಅಂದಾಜು ಲಾಭ ಹಾನಿ ಪತ್ರಿಕೆ, ಎಚ್.ವಾಯ್ ಬಾಡದ ಲಾಭ-ವಿಂಗಡೆ ಪತ್ರಿಕೆ ಓದಿ ಅನುಮೋದನೆ ಪಡೆದುಕೊಂಡರು.
ಸೊಸಾಯಟಿಯ ಅಧ್ಯಕ್ಷ ಆರ್.ಕೆ.ಕುರಬಗಟ್ಟಿ ಅಧ್ಯಕ್ಷತೆ ವಹಿಸಿದ್ದರು.
ನಿರ್ದೆಶಕರಾದ ರವೀಂದ್ರ ಸೋನವಾಲ್ಕರ, ಅಶೋಕ ಹೊಸೂರ, ಸುಭಾಸ ಸೋನವಾಲ್ಕರ, ಬಸವರಾಜ ಗುಲಗಾಜಂಬಗಿ, ಡಾ|| ಎಸ್.ಎಸ್.ದಂಡಪ್ಪನವರ, ವಿದ್ಯಾವತಿ ಸೋನವಾಲಕರ, ಶಾರದಾ ಗುಲಗಾಜಂಬಗಿ, ಗಂಗವ್ವಾ ಸಣ್ಣಪ್ಪನವರ, ಮಂಜುಳಾ ಬಳಿಗಾರ, ಶಿವಬಸು ಬೂದಿಹಾಳ, ಹಣಮಂತ ಸಣ್ಣಕ್ಕಿ, ಗಣ್ಯರಾದ ಶಂಕರ ಸೋನವಾಲಕರ, ರಾಮಚಂದ್ರಪ್ಪ. ಸೋನವಾಲಕರ ಹಾಗೂ ಎಲ್ಲ ಶಾಖೆಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಸೊಸಾಯಟಿಯ ನಿರ್ದೆಶಕ ಡಾ|| ಶಂಕರ ಎಸ್ ದಂಡಪ್ಪನವರ ಸ್ವಾಗತಿಸಿದರು. ವೆಂಕಟೇಶ ಬಾಲರಡ್ಡಿ ನಿರೂಪಿಸಿದರು. ಪುಲಕೇಶ ಆರ್ ಸೋನವಾಲ್ಕರ ವಂದಿಸಿದರು.
Check Also
ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …