Breaking News

ಮೂಡಲಗಿ ಎಸ್.ಎಸ್.ಆರ್ ಕಾಲೇಜಿನ ಎನ್‍ಎಸ್‍ಎಸ್ ವಿಶೇಷ ವಾರ್ಷಿಕ ಶಿಬಿರ ಉದ್ಘಾಟನೆ

Spread the love

ಮೂಡಲಗಿ: ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ವಿಕಾಸಗೊಳಿಸುವುದೇ ಎನ್.ಎಸ್.ಎಸ್ ಶಿಬಿರದ ಮೂಲ ಉದ್ದೇಶವಾಗಿದೆ ಎಂದು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಎನ್.ಎಸ್.ಎಸ್ ಶಿಬಿರಾರ್ಥಿಗಳಿಗೆ ಕರೆ ನೀಡಿದರು
ಅವರು ದತ್ತು ಗ್ರಾಮ ಕಮಲದಿನ್ನಿ ಗ್ರಾಮದಲ್ಲಿ ಸರಕಾರಿ ಶಾಲೆಯಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಹಮ್ಮಿಕೊಂಡ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಶಿಬಿರಾರ್ಥಿಗಳು ಶಿಬಿರದಲ್ಲಿ ತಮ್ಮನು ತಾವು ತೊಂಡಗಿಕೊಂಡು ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಸಮಾಜ ಗುರುತಿಸುತ್ತದೆ, ಭಾರತ ದೇಶ ಶರಣರ, ದಾರ್ಶನಿಕರ, ಮೇಧಾವಿಗಳ, ಸಾಂಪ್ರದಾಯಹಿಕ ದೇಶ ತಾವು ಕೂಡಾ ಉನ್ನತ ಸ್ಥಾನ ಅಲಂಕರಿಸುವತ ಗುರಿಇಟ್ಟುಕೊಂಡರೆ ಸಾಧ್ಯವಾಗುತ್ತದೆ ಎಂದ ಅವರು ಕಳೆದ ಮೂವತ್ತು ಮೂರು ವರ್ಷಗಳ ಹಿಂದೆ ಇದೇ ಕಾಲೇಜಿನ ಎನ್.ಎಸ್.ಎಸ್.ಶಿಬಿರಾರ್ಥಿಯಾಗಿ ಕಮಲದಿನ್ನಿ ಗ್ರಾಮದ ಇದೇ ಸ್ಥಳದಲ್ಲಿ ಭಾಗಿಯಾಗಿರುವ ಅನುಭವವನ್ನು ಹಂಚಿಕೊಂಡು,
ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ನಿವೃತ್ತ ಉಪನ್ಯಾಸಕ ಸುರೇಶ ನಾಯಕ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುಟುವಟಿಗಳಲ್ಲಿ ಪಾಲ್ಗೋಳಬೇಕು, ಸ್ವಚತಗೆಗಾಗಿ ಯುವಕರ ಪಾತ್ರ ಬಹಳ ಮುಖ್ಯ, ಗಾಂಧಿಜಿಯವರು ಅಹಿಂಸೆಹಿಂದ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಯುವಕರಿಂದಲೇ ದೇಶದ ಅಭಿವೃದ್ಧಿ, ಅಗತ್ಯವಾದ ಉತ್ತಮ ಸಂಸ್ಕಾರ ಹಾಗೂ ಒಳ್ಳೆಯ ಮಾರ್ಗದರ್ಶನ ಇಂಥ ಶಿಬಿರದಿಂದ ದೊರೆಯಲು ಸಾಧ್ಯ ಎಂದರು.
ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರೊ. ಜಿ.ವಿನಾಗರಾಜ ಮಾತನಾಡಿ, ಎನ್.ಎಸ್.ಎಸ್ ಶಿಬಿರದಲ್ಲಿ ಭಾಗಿಯಾಗುವದರಿಂದ ವ್ಯಕ್ತಿತ್ವ ವಿಕಾಸನಗೋಳ್ಳುವದರೊಂದಿಗೆ ನಾಯಕತ್ವದ ಗುಣಗಳು ಬೆಳೆಯುತವೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಗಳು ಮಾತನಾಡಿ, ಜಾತಿ, ಮತ, ವರ್ಣ ಬೇದಭಾವಗಳನ್ನು ಮರೆತು ಎಲ್ಲರೂ ಹೊಂದಾಗಿ ಕೆಲಸ ಕಾರ್ಯಗಳನ್ನು ಮಾಡುವ ಅವಕಾಶ ಬಹಳ ಒಳ್ಳೆಯದು, ಶಿಬಿರಾರ್ಥಿಗಳು ಮನಸ್ಸು ಮಾಡಿದರೆ ಏನ್ನನಾದರೂ ಸಾಧಿಸಬಹುದು, ಶಿಬಿರದಲ್ಲಿ ಪಾಲ್ಗೊಳ್ಳುವದರಿಂದ ಸಮಾಜದಲ್ಲಿ ಸ್ವತಂತ್ರವಾಗಿ ಬದುಕಲಿಕ್ಕೆ ಕಲಿಸುತ್ತದೆ ಆದರಿಂದ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ ಉದ್ಘಾಟಿಸಿದರು, ಕಮಲದಿನ್ನಿ ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಸಂಕನ್ನವರ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಶ್ರೀಮಂತ ಹುಚರಡ್ಡಿ, ವಾಯ್.ಜಿ.ಮಂಟನವರ, ಈರಪ್ಪ ಜಿನಗನ್ನವರ, ಆರ್.ಆರ್.ಪಾಟೀಲ, ಲಕ್ಕಪ್ಪ ಹುಚರಡ್ಡಿ, ರಾಮಣ್ಣಾ ಪಾಟೀಲ, ವೆಂಕಪ್ಪ ಮಂಟನವರ, ಕೃಷ್ಣಪ್ಪ ಹುಚರಡ್ಡಿ, ಉದಯ ಸನದಿ, ಜಗದೀಶ ಕಂಬಾರ, ಜಗದೀಶ ಸಂಕನ್ನವರ, ಭೀಮಶಿ ಪಾಟೀಲ, ರಾಘವೇಂದ್ರ ಸಂಕನ್ನವರ ಮತ್ತಿತರರು ಇದ್ದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಎಮ್.ಎಸ್.ಪಾಟೀಲ ಸ್ವಾಗತಿಸಿದರು. ಶಿಬಿರಾರ್ಥಿಗಳಾದ ಐಶ್ವರ್ಯಾ ಗಡಾದ, ಪ್ರತಿಭಾ ಮಲವ್ವಗೋಳ ಪ್ರಾರ್ಥಿಸಿದರು, ಅಶ್ವಿನಿ ಬಾಳವ್ವಗೋಳ ಎನ್.ಎಸ್.ಎಸ್.ಗೀತೆ ಪ್ರಸ್ತುತ ಪಡಿಸಿದರು, ಉಪನ್ಯಾಸಕರಾದ ಎಚ್.ಎಮ್.ಹತ್ತರಕಿ ಮತ್ತು ಎಸ್.ಕೆ.ಹಿರೇಮಠ ನಿರೂಪಿಸಿದರು, ಬಿ.ಜಿ.ಗಡಾದ ವಂದಿಸಿದರು.

 


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *