ಮೂಡಲಗಿ: ದಾಸ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಶ್ರೀ ಭಕ್ತ ಕನಕದಾಸರ 536ನೇ ಜಯಂತಿ ಉತ್ಸವವನ್ನು ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಜಡಿಸಿದ್ಧೇಶ್ವರ ಮಠದ ಆವರಣದಲ್ಲಿ ಡಿ.10 ರಂದು ಮಧ್ಯಾಹ್ನ 3=00ಗಂಟೆಗೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ತಾಲೂಕಾ ಮಟ್ಟದ ಉತ್ಸವ ಹಮ್ಮಿಕೊಳಲ್ಲಾಗಿದೆ ಎಂದು ತಾಲೂಕಾ ಕರ್ನಾಟಕ ಪ್ರದೇಶ ತಾಲೂಕಾ ಕುರಬರ ಸಂಘದ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಹೇಳಿದರು.
ಶುಕ್ರವಾರದಂದು ಪಟ್ಟಣದ ಪ್ರತಿಕಾ ಕಛೇರಿಯಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಡಿ.10ರಂದು ಹಮ್ಮಿಕೊಂಡ ಕನಕದಾಸರ ಜಯಂತಿ ಉತ್ಸವದ ಮಾಹಿತಿ ನೀಡಿದ ಅವರು, ಸುಣಧೋಳಿ ಗ್ರಾಮದ ಸೊಗಲ ಅಜ್ಜನವರ ಮಠದಿಂದ ಮಹಿಳೆಯರ ಕುಂಭ ಮೇಳ ಮತ್ತು ಡೊಳ್ಳಿನ ವಾಧ್ಯಮೇಳಗಳೊಂದಿಗೆ ಶ್ರೀ ಭಕ್ತ ಕನಕದಾಸರ ಭಾವ ಚಿತ್ರದ ಭ್ಯವ್ಯ ಮೆರವಣಿಗೆಯು ಉತ್ಸವದ ಸಭಾ ಮಂಟಪದವರಿಗೆ ಜರುಗಲಿದೆ ಎಂದರು.
ಹಳ್ಳೂರ ಜಿ.ಪಂ ಮಾಜಿ ಸದಸ್ಯ ಭೀಮಶಿ ಮಗದುಮ ಮಾತನಾಡಿ, ಉತ್ಸವದ ಸಾನ್ನಿಧ್ಯವನ್ನು ಸುಣಧೋಳಿಯ ಶ್ರೀ ಶಿವಾನಂದ ಸ್ವಾಮಿಜಿಗಳು, ಕವಲಗುಡ್ಡದ ಅಮರೇಶ್ವರ ಮಹಾರಾಜರು, ಕಪರಟ್ಟಿಯ ಬಸವರಾಜ ಹಿರೇಮಠ ಶ್ರೀಗಳು, ಜೋಕಾನಟ್ಟಿಯ ಬಿಳಿಯಾನ್‍ಸಿದ್ದ ಶ್ರೀಗಳು ವಹಿಸುವರು ಎಂದರು
ಪ್ರಭಾ ಶುಗರ್ಸ್ ನಿರ್ದೇಶಕ ಗಿರೀಶ ಹಳ್ಳೂರ ಮಾತನಾಡಿ, ಕನಕದಾಸರ ಉತ್ಸವದ ಸಮಾರಂಭವನ್ನು ಲೋಕೊಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸುವರು, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ರಮೇಶ ಜಾರಕಿಹೊಳಿ, ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ್ ಪಾಟೀಲ, ವಿಧಾನ ಪರಿಷತ್ ಸದಸ್ಯ ಲಕ್ಕನ್ ಜಾರಕಿಹೊಳಿ ಮತ್ತಿತರರು ಭಾಗವಹಿಸುವರು ಎಂದರು.
ಮೂಡಲಗಿ ಪುರಸಭೆ ಸದಸ್ಯ ಹನಮಂತ ಗುಡ್ಲಮನ್ನಿ ಮಾತನಾಡಿ, ಉತ್ಸವದಲ್ಲಿ ಮೂಡಲಗಿ ತಹಶೀಲ್ದಾರ ಮಹಾದೇವ ಸನಮೂರಿ, ಹೆಸ್ಕಾಂ ಎಇಇ ಎಮ್.ಎಸ್.ನಾಗನ್ನವರ, ಘಟಪ್ರಭಾ ಸಿಪಿಐ ಬಸವರಾಜ ಕಾಮಬೈಲ್, ನಿವೃತ್ತ ತಾಲೂಕಾ ವೈಧ್ಯಾದಿಕಾರಿ ಡಾ.ಆರ್.ಎಸ್.ಬೆಣಚನಮರಡಿ, ಪಿಎಸ್‍ಐ ಎಚ್.ವಾಯ್.ಬಾಲದಂಡಿ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ, ಗೋಕಾಕ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಮಂಗಲಾ ಸನದಿ, ಡಾ.ಗೋಪಾಲ ಹೊಂಗಲ ಹಾಗೂ ಮೂಡಲಗಿ ತಾಲೂಕಿನ ಮತ್ತು ಅರಭಾವಿ ಮತ ಕ್ಷೇತ್ರ ವ್ಯಾಪ್ತಿಯ ಸಮಾಜದ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರಿಗೆ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿ ಕನಕದಾಸ ಭಾಷ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಸತ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು.
ವೀರಣ್ಣ ಮೋಡಿ ಮತ್ತು ಭೀಮಶಿ ಮಂಗಿ ಮಾತನಾಡಿ, ಸುಣಧೋಳಿ ಗ್ರಾಮದಲ್ಲಿ ಡಿ.10 ರಂದು ನಡೆಯುವ ಕನಕದಾಸರ ಜಯಂತಿ ಉತ್ಸವದಲ್ಲಿ ಮೂಡಲಗಿ ತಾಲೂಕಿನ ಹಾಗೂ ಅರಭಾವಿ ಮತ ಕ್ಷೇತ್ರದ ಸರ್ವ ಸಮಾಜ ಭಾಂಧವರು ಭಾಗವಹಿಸಿ ಉತ್ಸವವನ್ನು ಯಶಸ್ವಿಗೋಳಿಸಬೇಕೆಂದರು.
ಪ್ರತಿಕಾಗೋಷ್ಠಿಯಲ್ಲಿ ಪರಮಾನಂದ ತುಭಾಕಿ, ಸಂತೋಷ ಕಮತಿ, ಸಿದ್ಧಾರೂಢ ಮಬನೂರ ಮತ್ತಿತರರು ಉಪಸ್ಥಿತರಿದ್ದರು.
Check Also
ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …