Breaking News

ಹಳಗನ್ನಡ ಸಾಹಿತ್ಯ ರಸಗ್ರಹಣ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಪಿ. ನಾಗರಾಜು ಅಭಿಮತ

Spread the love

ಸಾಹಿತ್ಯ ಬದುಕಿನ ಮೌಲ್ಯಗಳನ್ನು ಒಳಗೊಂಡಿದೆ.

ಮೂಡಲಗಿ: ಹಳಗನ್ನಡ ಸಾಹಿತ್ಯ ಪರಂಪರೆಯಲ್ಲಿ ಅದ್ಭುತವಾದ ಮಾಹಾಕಾವ್ಯಗಳು ಸೃಷ್ಠಿಯಾಗಿದೆ. ಅವುಗಳನ್ನು ಪ್ರಸ್ತುತ ವಿಧ್ಯಮಾನದಲ್ಲಿ ಗ್ರಹಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ. ನಾಗರಾಜು ಹೇಳಿದರು.

ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಹಳಗನ್ನಡ ಸಾಹಿತ್ಯ ರಸಗ್ರಹಣ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಹಳಗನ್ನಡ ಎಂದು ಮೂಗು ಮುರಿಯದೆ ಶ್ರಮವಹಿಸಿ ಶೃದ್ಧೆಯಿಂದ ಅಧ್ಯಯನ ಮಾಡಿದಾಗ ಕಾವ್ಯಗಳ ಅಂತಃಸತ್ವವನ್ನು ಅರಿಯಲು ಸಾಧ್ಯವಾಗುತ್ತದೆ. ಪಂಪ, ರನ್ನ, ಪೊನ್ನ, ಜನ್ನ ಮೊದಲಾದ ಕವಿಗಳು ತಮ್ಮ ಕಾವ್ಯಗಳಲ್ಲಿ ಸಾಮಾಜಿಕ, ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಇಂತಹ ಎಲ್ಲ ದಾರ್ಶನಿಕ ಕವಿಗಳ ಕಾವ್ಯಗಳು ಸುಲಭವಾಗಿ ಅಂತರ್‌ಜಾಲದಲ್ಲಿ ದೊರೆಯುತ್ತಿದ್ದು ಅವುಗಳ ಪ್ರಯೋಜನವನ್ನು ಪಡೆಯುವ ಮೂಲಕ ನಮ್ಮ ಜ್ಞಾನವನ್ನು ಇಮ್ಮಡಿಗೊಳಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್‌ರಾದ ಶ್ರೀ ಬಸಗೌಡ ಶಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಶೃದ್ಧೆ ಪ್ರಾಮಾಣಿಕತೆಯಿಂದ ಅಧ್ಯಯನ ಅಧ್ಯಾಪನದಲ್ಲಿ ತೊಡಬೇಕು. ಬುದ್ಧಿ ಜೀವಿಗಳ ಮಾರ್ಗದರ್ಶನ ಪಡೆದು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ನುಡಿದರು.

ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಹಳಗನ್ನಡ ಸಾಹಿತ್ಯದ ಓದು-ಬರಹ ನಿರಂತರವಾಗಿ ಸಾಗಬೇಕು. ಆಧುನಿಕ ಸಾಹಿತ್ಯದ ಬರಾಟೆಯಲ್ಲಿ ಹಳನ್ನಡ ಸಾಹಿತ್ಯ ಅಧ್ಯಯನ ಮರೆಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಎಂ.ಬಿ.ಕುಲಮೂರ, ಆರ್.ಎಸ್.ಪಂಡಿತ, ವಿ.ವಾಯ್.ಕಾಳೆ, ಬಿ.ಸಿ.ಮಾಳಿ, ಸಾಗರ ಐದಮನಿ, ವಿಲಾಸ ಕೆಳಗಡೆ, ಸಂತೋಷ ಜೊಡಕುರಳಿ, ಸಂತೋಷ ಬಂದಿ, ಬಿ.ಬಿ.ವಾಲಿ, ಬಿ.ಕೆ.ಸೊಂಟನವರ ಮುಂತಾದವರು ಉಪಸ್ಥಿತರಿದ್ದರು.

ಡಾ. ಕೆ. ಎಸ್. ಪರವ್ವಗೊಳ ನಿರೂಪಸಿದರು. ಪ್ರೊ. ರಾಜಶ್ರೀ ತೋಟಗಿ ಸ್ವಾಗತಿಸಿದರು. ಪ್ರೊ. ಶಂಕರ ನಿಂಗನೂರ ಪರಿಚಯಿಸಿದರು. ಕು. ಸಿಂಧು ನಾಯಿಕವಾಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಮುಸ್ತಪ್ಪಾ ಜಾಲಗಾರ ವಂದಿಸಿದರು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *