ಮೂಡಲಗಿ: ಸಮಾಜದಲ್ಲಿ ನಿರ್ಗತಿಕರು ಹಾಗೂ ಕಡುಬಡವರ ಕಲ್ಯಾಣಕ್ಕೋಸ್ಕರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಯಿತು.
ಯೋಜನೆಯ ಬೆಳಗಾವಿ-02 ಜಿಲ್ಲಾ ನಿರ್ದೇಶಕರಾದ ಶ್ರೀ ಕೇಶವ ದೇವಾಂಗರವರು ವಾತ್ಸಲ್ಯ ಕಿಟ್‍ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯು ಸಮಾಜದ ಕಲ್ಯಾಣ ಸಾಧಿಸುವುದಕ್ಕೋಸ್ಕರವೇ ಇರುವಂತಹ ಯೋಜನೆಯಾಗಿದ್ದು, ಪ್ರತಿಯೊಂದು ಗ್ರಾಮಗಳಲ್ಲಿಯೂ ಇರುವಂತಹ ನಿರ್ಗತಿಕರ ಕಲ್ಯಾಣ ಸಾಧಿಸಲು ಬದ್ಧವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವಾತ್ಸಲ್ಯ ಕಿಟ್ ವಿತರಣಾ ಸಂದರ್ಭದಲ್ಲಿ ಮೂಡಲಗಿ ಯೋಜನಾ ಕಛೇರಿ ವ್ಯಾಪ್ತಿಯ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ದೇವರಾಜ್, ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಶ್ರೀಮತಿ ಶೃತಿ ಬಸವರಾಜ ಕೊಳ್ಳಿ, ಮೇಲ್ವಿಚಾರಕರಾದ ಬಾಹುಬಲಿ ಬಾಗೇವಾಡಿ, ಗುರುರಾಜ ಹಾದಿಮನಿ, ಪರ್ವೀನ್ ಮುಜಾವರ್, ವಿಜಯಾ ಛಲವಾದಿ, ತರಬೇತು ಮೇಲ್ವಿಚಾರಕರಾದ ಸಾಗರ ಹಾಗೂ ಇನ್ನುಳಿದಂತೆ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.