ಮೂಡಲಗಿ: ಮೂಡಲಗಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಮೀರಅಹ್ಮದ ದಬಾಡಿಯವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಇವರು ರಾಜ್ಯ ಮಟ್ಟದ ಉತ್ತಮ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ “ ಶಿಕ್ಷಣ ಸಾರಥಿ ಪ್ರಶಸ್ತಿ” ಯನ್ನು ತುಮಕೂರಿನ ಉದ್ಧಾನೇಶ್ವರ ಕಲ್ಯಾಣ ಮಂಟಪ ಸಿದ್ಧಗಂಗಾ ಮಠದಲ್ಲಿ ಜರುಗಿದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಕುಣಿಗಲ್ ಹಿತ್ತಲಹಳ್ಳಿ ಮಠಾಧ್ಯಕ್ಷರಾದ ಶ್ರೀ ಡಾ. ಸದಾಶಿವ ಶಿವಾಚಾರ್ಯ ಸ್ವಾಮಿಗಳು, ಶಾಸಕ ಡಿ.ಸಿ ಗೌರಿಶಂಕರ, ಶಂಭುಲಿoಗನಗೌಡ, ರಾಜ್ಯಾಧ್ಯಕ್ಷರಾದ ಪಿ. ಮಹೇಶ, ಚಂದ್ರಶೇಖರ ನಾಯಕ, ನಾಗಭೂಷನ ಕೆ.ಟಿ, ಉಮಾದೇವಿ ಗುಡ್ಡದ, ಪ್ರವೀಣಕುಮಾರ ಓತಿಹಾಳ, ಯಶೋದ ಎಮ್.ಎಸ್, ಲಕ್ಷ್ಮಿ ಕಂಬಾರ ಹಾಗೂ ಪರೀಷತ್‌ನ ಪದಾಧಿಕಾರಿಗಳು ಶಿಕ್ಷಕ ಸಮೂಹದವರು ಹಾಜರಿದ್ದರು.
Ad9 News Latest News In Kannada
