ಮೂಡಲಗಿ : ಮೂಡಲಗಿ ಪಟ್ಟಣದ ಸಾರ್ವಜನಿಕರ ಕೋರಿಕೆಯ ಮೇರೆಗೆ ಪಟ್ಟಣದ ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತ ಹಾಗೂ ಕಲ್ಮೇಶ್ವರ ವೃತ್ತದಿಂದ ಶಿವಬೋಧರಂಗ ಮಠದವರೆಗೆ ಸ್ವಂತ ವೆಚ್ಚದಲ್ಲಿ ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದವರೆಗೆ 9 ಮೀಟರ್ ಅಗಲದ 1 ಕಿ.ಮೀ ವರೆಗಿನ ರಸ್ತೆಯನ್ನು ಇಷ್ಟರಲ್ಲಿಯೇ ಅಭಿವೃದ್ಧಿಪಡಿಸಲಾಗುವುದು. ಕಲ್ಮೇಶ್ವರ ವೃತ್ತದಿಂದ ಮಠದವರೆಗಿನ 500 ಮೀಟರ್ ರಸ್ತೆಯನ್ನು ಸಹ ಸುಧಾರಿಸಲಾಗುವುದು. ಇವೆರಡೂ ರಸ್ತೆ ಕಾಮಗಾರಿಗಳಿಗೆ ಇಷ್ಟರಲ್ಲಿಯೇ ಪುರಸಭೆ ಅಧ್ಯಕ್ಷರಿಂದ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಅವರು ಹೇಳಿದರು.
ಪಟ್ಟಣದಲ್ಲಿರುವ ಇವೆರಡೂ ರಸ್ತೆಗಳು ಪುರಸಭೆಗೆ ಒಳಪಟ್ಟಿವೆ. ಒಟ್ಟಾರೆ 1.50 ಕಿ.ಮೀ ರಸ್ತೆಯನ್ನು ಪುರಸಭೆಯವರೇ ಸುಧಾರಣಾ ಕಾಮಗಾರಿಯನ್ನು ಕೈಗೊಳ್ಳಬೇಕಿತ್ತು. ಆದರೆ ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಕೈಗೊಳ್ಳುವುದು ವಿಳಂಬವಾಗುತ್ತಿದೆ. ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಸ್ವತಃ ನಾನೇ ನನ್ನ ಸ್ವಂತ ವೆಚ್ಚದಲ್ಲಿ ಅಂಬೇಡ್ಕರ ವೃತ್ತದಿಂದ ಟಿಪ್ಪುಸುಲ್ತಾನ ವೃತ್ತದವರೆಗೆ ಮತ್ತು ಕಲ್ಮೇಶ್ವರ ವೃತ್ತದಿಂದ ಶಿವಬೋಧರಂಗ ಮಠದವರೆಗೆ ರಸ್ತೆಗಳನ್ನು ಸುಧಾರಣೆ ಮಾಡುತ್ತೇನೆ ಎಂದು ಅವರು ತಿಳಿಸಿದರು.
ನೀರಾವರಿ ಇಲಾಖೆಯ 4.94 ಕೋಟಿ ರೂ. ವೆಚ್ಚದ ಗುರ್ಲಾಪೂರ ಕ್ರಾಸದಿಂದ ಮೂಡಲಗಿವರೆಗಿನ 2.80 ಕಿ.ಮೀ ರಸ್ತೆ ಕಾಮಗಾರಿಯು ಈಗಾಗಲೇ ಪ್ರಗತಿಯಲ್ಲಿದೆ. 8.70 ಕೋಟಿ ರೂ. ಪಿಎಂಜಿಎಸ್‍ವಾಯ್ ಯೋಜನೆಯ ಮಸಗುಪ್ಪಿ ಕ್ರಾಸದಿಂದ ಮೂಡಲಗಿವರೆಗಿನ 10 ಕಿ.ಮೀ ರಸ್ತೆ ಕಾಮಗಾರಿಯು ಈಗಾಗಲೇ ಮುಕ್ತಾಯವಾಗಿದೆ ಎಂದು ಹೇಳಿದರು.
ಈಗಾಗಲೇ ತೀವ್ರ ಹದಗೆಟ್ಟಿದ್ದ ಪಟ್ಟಣದ ಶಿವಬೋಧರಂಗ ಕಾಲೇಜನಿಂದ ಮೂಡಲಗಿ ಕ್ರಾಸವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕಾಗಿ 60 ಲಕ್ಷ ರೂ.ಗಳನ್ನು ಸ್ವತಃ ನಾನೇ ನೀಡಿದ್ದೇನೆ. ಇವೆರಡು ಕಾಮಗಾರಿಗಳನ್ನು ಸಾರ್ವಜನಿಕರ ಮನವಿ ಮೇರೆಗೆ ಇಷ್ಟರಲ್ಲಿಯೇ ಗುದ್ದಲಿ ಪೂಜೆ ನೆರವೇರಿಸಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಮಳೆಗಾಲದ ಹಿನ್ನೆಲೆಯಲ್ಲಿ ಕೆಲ ರಸ್ತೆಗಳು ಹಾಳಾಗಿರಬಹುದು. ಅವುಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಮೂಡಲಗಿ ಪಟ್ಟಣದ ನಾಗರೀಕರ ಅನುಕೂಲಕ್ಕಾಗಿ ಅನೇಕ ಪ್ರಗತಿಪರ ಕಾರ್ಯಗಳನ್ನು ಮಾಡುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗೆ ಸಹಕಾರವನ್ನೂ ಸಹ ಬಯಸುತ್ತಿದ್ದೇವೆ. ಪುರಸಭೆಯಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನವ್ಹೆಂಬರ್ ತಿಂಗಳವರೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಂತ ನಾನೇ ಈ ರಸ್ತೆ ಕಾಮಗಾರಿಗಳಿಗೆ ಹಣ ವೆಚ್ಚ ಮಾಡುತ್ತಿದ್ದೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
Home / ಮೂಡಲಗಿ / ಶೀಘ್ರ ಮೂಡಲಗಿಯ ಅಂಬೇಡ್ಕರ ವೃತ್ತ-ಟಿಪ್ಪು ಸುಲ್ತಾನ ವೃತ್ತದವರೆಗೆ, ಕಲ್ಮೇಶ್ವರ ವೃತ್ತದಿಂದ ಶಿವಬೋಧರಂಗ ಮಠದವರೆಗೆ ಸ್ವಂತ ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ : ಶಾಸಕ ಬಾಲಚಂದ್ರ ಜಾರಕಿಹೊಳಿ
Check Also
ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …