Breaking News

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಮಾತ್ರ ಬಹುಮುಖ ಪ್ರತಿಭೆಗಳನ್ನು ಕಾಣಲು ಸಾಧ್ಯ : ಬಿಇಒ ಅಜಿತ ಮನ್ನಿಕೇರಿ

Spread the love

 

ಮೂಡಲಗಿ: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗೆ ಅಗತ್ಯ ಅವಕಾಶ ದೊರಕಿಸಿಕೊಟ್ಟಾಗ ಮಾತ್ರ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಮಾತ್ರ ಬಹುಮುಖ ಪ್ರತಿಭೆಗಳನ್ನು ಕಾಣಲು ಸಾಧ್ಯ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.
ಅವರು ಮೂಡಲಗಿ ಶೈಕ್ಷಣಿಕ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-೨೦೨೨ ಕಾರ್ಯಕ್ರಮದ ಪ್ರಯುಕ್ತ ಚೈತನ್ಯ ಪ್ರಾಥಮಿಕ ಪ್ರೌಢ ಶಾಲೆ, ಮೇಘಾ ಪ್ರಾಥಮಿಕ ಪ್ರೌಢ ಶಾಲೆ, ಶ್ರೀ ಎಲ್.ವಾಯ್ ಅಡಿಹುಡಿ ಪ್ರಾಥಮಿಕ ಶಾಲೆಗಳಲ್ಲಿ ಭಾಗವಹಿಸಿ ಮಾತನಾಡಿದರು. ಮಗುವಿಗೆ ನಾವಿನ್ಯತೆಯ ಕಲಿಕಾಭಿರುಚಿಯನ್ನುಂಟು ಮಾಡಲು ಸರ್ವಾಂಗೀಣ ಅಭಿವೃದ್ಧಿಯ ದೃಷ್ಠಿಯನ್ನಿಟ್ಟುಕೊಂಡು ವಿವಿಧ ಪಠ್ಯೇತರ ಚಟುವಟಿಕೆಗಳೊಂದಿಗೆ ಶಿಕ್ಷಣ ದೊರೆತಾಗ ಕಲಿಕೆಯು ಫಲಪ್ರದವಾಗುವದು. ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಹೆಚ್ಚು ಅಂಕಗಳಿಸುವದಷ್ಟೇ ಅಲ್ಲದೆ ವ್ಯಕ್ತಿತ್ವ ವಿಕಸನವಾಗಲು ಎಲ್ಲ ಆಯಾಮಗಳಿಂದ ಭವಿಷ್ಯತ್ತಿನ ಭವ್ಯ ಪ್ರಜೆಗಳ ನಿರ್ಮಾಣ ಕಾರ್ಯ ಮಾಡಬೇಕು. ಇಂದಿನ ಮಕ್ಕಳು ಯಾಂತ್ರಿಕ ಯುಗದಲ್ಲಿ ಹೊಸ ಹೊಸ ಅವಿಷ್ಕಾರಗಳನ್ನು ಮಾಡುವಂತೆ ಪ್ರೇರೆಪಿಸಬೇಕು. ದೇಶಿಯವಾಗಿರುವ ಕಲೆಗಳ ಅನಾವರಣಗೊಂಡಾಗ ಮಾತ್ರ ಬಹುಮುಖ ಪ್ರತಿಭೆಗಳ ಅನಾವರಣವಾಗುತ್ತದೆ ಎಂದು ಹೇಳಿದರು.


ಮಕ್ಕಳಿಗೆ ಉಪಯುಕ್ತವಿರುವ ಸಾಹಿತ್ಯ, ನಾಟ್ಯ, ಭಾಷಣ, ವಿಜ್ಞಾನ ತಂತ್ರಜ್ಞಾನ, ಮನೊರಂಜನೆ ಇತ್ಯಾದಿ ಚಟುವಟಿಕೆಗಳನ್ನು ರೂಡಿಸುವ ಮೂಲಕ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಉತ್ತಮ ವ್ಯಕ್ತಿತ್ವ ರೂಪಗೊಳ್ಳುವಲ್ಲಿ ಸಹಾಯಕವಾಗುವದು. ಈಗಿನ ಸಾಮಾಜಿಕ ಜಾಲತಾಣಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ತಮ್ಮ ಹಾಗೂ ಇತರರ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು. ಪಠ್ಯದ ಜೊತೆಯಲ್ಲಿ ದೈಹಿಕ, ಮಾನಸಿಕ ಹಾಗೂ ಆರೋಗ್ಯದ ಕಡೆ ಗಮನ ನೀಡುವ ಮೂಲಕ ಸಾರ್ಥಕ ಬದುಕು ಸಾಗಿಸಬೇಕು. ಸ್ಪರ್ಧೆಯಲ್ಲಿ ಸೊಲು ಗೆಲುವಿನ ಲೆಕ್ಕಾಚಾರ ಹಾಕದೆ ಸಮನಾಗಿ ತೆಗೆದುಕೊಂಡು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಗೆಲ್ಲುವ ಮೂಲಕ ಮೂಡಲಗಿ ಶೈಕ್ಷಣಿಕ ವಲಯದ ಕೀರ್ತಿ ಹೆಚ್ಚಸ ಬೇಕು ಎಂದು ಕಿವಿಮಾತನ್ನು ಹೇಳಿದರು.
ವೇದಿಕೆಗಳಲ್ಲಿ ಪುರಸಭೆ ಸದಸ್ಯರಾದ ಈರಣ್ಣ ಕೊಣ್ಣೂರ, ಪಾಂಡುರAಗ ಮಹೇದ್ರಕರ ಮಾತನಾಡಿ, ಮಕ್ಕಳಲ್ಲಿರುವ ಸೃಜನಾತ್ಮಕ ಕಲೆಗಳಿಗೆ ಬೆಳಕು ಚೆಲ್ಲಿದಾಗ ಮಾತ್ರ ಅವರಲ್ಲಿರುವ ಸೂಪ್ತ ಪ್ರತಿಭೆಗೆ ಅವಕಾಶ ನೀಡಿದಂತಾಗುತ್ತದೆ. ಸೃಜನಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕ ಸಮೂಹ, ಪಾಲಕ ಪೋಷಕರ ಹಾಗೂ ಸಾರ್ವಜನಿಕರ ಪ್ರೋತ್ಸಾಹ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕರ ಸಂಘಟನೆಯ ಎಸ್.ಎಮ್ ಲೋಕನ್ನವರ, ಎ.ಪಿ ಪರಸನ್ನವರ, ಕೆ.ಆರ್ ಅಜ್ಜಪ್ಪನವರ, ಬಿ.ಬಿ ಕಿವಟಿ, ಜಿ.ಎಲ್ ಕೋಳಿ, ಎಮ್.ಜಿ ಮಾವಿನಗಿಡದ ಮಾತನಾಡಿದರು.
ಉದ್ಘಾಟಕರಾಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಪುರಸಭೆ ಸದಸ್ಯ ಸಂತೋಷ ಸೋನವಾಲಕರ ನೇರವೆರಿಸಿದರು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಎಸ್.ಎಮ್ ಕಮದಾಳ, ಮಲ್ಲಪ್ಪ ಗಾಣಿಗೇರ, ಎಲ್.ವಾಯ್ ಅಡಿಹುಡಿ ವಹಿಸಿದ್ದರು. ಅತಿಥಿಗಳಾಗಿ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಪಿ.ಎಸ್.ಐ ಹಾಲಪ್ಪ ಬಾಲದಂಡಿ, ಪರಸಭೆ ಸದಸ್ಯರಾದ ರವೀಂದ್ರ ಸಣ್ಣಕ್ಕಿ, ಅಬ್ದುಲಗಫಾರ ಡಾಂಗೆ, ಶಿವಾನಂದ ಸಣ್ಣಕ್ಕಿ, ಹನಮಂತ ಪೂಜೇರಿ, ಶಿವಪ್ಪ ಚಂಡಕಿ, ಆದಮ್ ತಾಂಬೋಳಿ, ಸಿದ್ದಪ್ಪ ಮಗದುಮ, ಜಯಾನಂದ ಪಾಟೀಲ, ಆನಂದ ಟಪಾಲ್ದಾರ, ಮುಖಂಡರಾದ ಅನ್ವರ ನದಾಫ್, ಚನ್ನಪ್ಪ ಅಥಣಿ, ಬಸು ಝಂಡೆಕುರುಬರ, ಶಿಕ್ಷಕರ ಸಂಘದ ಎಲ್.ಎಮ್ ಬಡಕಲ್, ಉಪಾಧ್ಯಕ್ಷ ಬಿ.ಎ ಡಾಂಗೆ, ಅಶೋಕ ಮಾಧುರಿ, ಆರ್.ಎಸ್ ಸುಗತೆ, ಶಿಕ್ಷಣ ಸಂಯೋಜಕರಾದ ಟಿ. ಕರಿಬಸವರಾಜ, ಸತೀಶ ಬಿ.ಎಸ್, ಆರ್.ವಿ ಯರಗಟ್ಟಿ ಹಾಗೂ ಬಿಆರ್‌ಪಿಗಳು, ಸಿಆರ್‌ಪಿಗಳು, ನಿರ್ಣಾಯಕರು, ಸಂಪನ್ಮೂಲ ಶಿಕ್ಷಕರು ಹಾಗೂ ವಲಯ ವ್ಯಾಪ್ತಿಯ ಶಾಲಾ ಮಕ್ಕಳು ಉಪಸ್ಥಿತರಿದ್ದರು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *