Breaking News
Home / ಮೂಡಲಗಿ / ಉಪ್ಪಾರ ಅಂತರಾಷ್ಟ್ರೀಯ ವಧು ವರರ ಸಮಾವೇಶ ಅರ್ಜಿ ಆಹ್ವಾನ

ಉಪ್ಪಾರ ಅಂತರಾಷ್ಟ್ರೀಯ ವಧು ವರರ ಸಮಾವೇಶ ಅರ್ಜಿ ಆಹ್ವಾನ

Spread the love

ಮೂಡಲಗಿ : ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ವತಿಯಿಂದ ಜ 8 ರಂದು ಭಾನುವಾರ ಬೆಳಗಾವಿಯ ಪ್ರತಿಷ್ಠಿತ ಹೋಟೆಲ್ ಸಂಕಮ್ ರೆಸಿಡೆನ್ಸಿನಲ್ಲಿ ಅಂತರ ರಾಷ್ಟ್ರಮಟ್ಟದ ಉಪ್ಪಾರರ ವಧು-ವರ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಉಪ್ಪಾರ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕೆಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ಮತ್ತು ಜಿಲ್ಲಾಧ್ಯಕ್ಷ ಮಂಜುನಾಥ ರಾಜಪ್ಪನವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಂತರ್ ರಾಜ್ಯ ಮತ್ತು ಅಂತರ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಅನೇಕ ಕುಟುಂಬಗಳು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಈಗಾಗಲೇ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿರುತ್ತದೆ. ಅರ್ಜಿಯ ನಮೂನೆಯನ್ನು ಸಮಾಜದ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದ್ದು ಸಮಾಜದ ಭಾಂದವರು ಬರುವಾಗ ಅರ್ಜಿಯನ್ನು ಪ್ರಿಂಟ್ ಹಾಕಿಸಿಕೊಂಡು ಫೆÇೀಟೋದೊಂದಿಗೆ ವಿವರಗಳನ್ನು ಭರ್ತಿ ಮಾಡಿಕೊಂಡು ತರತಕ್ಕದ್ದು.
ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಆಯೋಜಿಸಿರುವ ವಧು ವರ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಎಂದು ರಾಜ್ಯ ಉಪಾಧ್ಯಕ್ಷ ಅರಣು ಸಂವತಿಕಾಯಿ ತಿಳಿಸಿದ್ದಾರೆ. ಮಾಹಿತಿಗಾಗಿ ಸಂರ್ಕಿಸಿ 9448225046,9742716264


Spread the love

About Ad9 Haberleri

Check Also

ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …

Leave a Reply

Your email address will not be published. Required fields are marked *