ಮೂಡಲಗಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವದ ವೀರ ಜ್ಯೋತಿಯು ಇಂದು ಮಧ್ಯಾಹ್ನ 2:30ಕ್ಕೆ ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ಆಗಮಿಸುತ್ತದೆ ಎಂದು ತಹಶೀಲ್ದಾರ್ ಡಿ ಜೆ ಮಹಾತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೀರ ಜ್ಯೋತಿಯು ಕಂಕಣವಾಡಿ ಗುರ್ಲಾಪೂರ ಮಾರ್ಗವಾಗಿ ಗುರ್ಲಾಪೂರ ಕ್ರಾಸ್ ಬಳಿ ಆಗಮಿಸುತ್ತಿರುವುದರಿಂದ ವೀರ ಜ್ಯೋತಿಗೆ ಗೌರವಪೂರಕವಾಗಿ ಬರಮಾಡಿಕೊಂಡು ಪೂಜೆ ಸಲ್ಲಿಸಿ, ಪಟ್ಟಣದೊಳಗೆ ಬರಮಾಡಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.
ತಾಲೂಕಿನ ಸಮುದಾಯ ಬಂದುಗಳು, ತಾಲೂಕ ಮಟ್ಟದ ಅಧಿಕಾರಿಗಳು, ತಾಲೂಕಿನ ಕನ್ನಡಪರ ಹಾಗೂ ವಿವಿಧ ಸಂಘಟನೆಯವರು ಮತ್ತು ಮಾಧ್ಯಮ ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.