Breaking News
Home / ಮೂಡಲಗಿ / ಹಡಪದ ಅಪ್ಪಣ್ಣ ಸಮಾಜಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡುವ ಕುರಿತಂತೆ ಮುಖ್ಯಮಂತ್ರಿ ಬಸವರಾಜಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆಂದು ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಹಡಪದ ಅಪ್ಪಣ್ಣ ಸಮಾಜಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡುವ ಕುರಿತಂತೆ ಮುಖ್ಯಮಂತ್ರಿ ಬಸವರಾಜಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆಂದು ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ: ಹಡಪದ ಅಪ್ಪಣ್ಣ ಸಮಾಜಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆಂದು ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸೋಮವಾರದಂದು ಪಟ್ಟಣದ ಹಡಪದ ಅಪ್ಪಣ್ಣನವರ ದೇವಸ್ಥಾನದ ಆವರಣದಲ್ಲಿ ಮೂಡಲಗಿ ತಾಲೂಕು ಮಟ್ಟದ ಹಡಪದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಫೇಬ್ರುವರಿ 17ರಿಂದ ಬಜೆಟ್ ಅಧಿವೇಶನ ಮಂಡನೆಯಾಗುವುದರಿಂದ ಅದರ ಪೂರ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.
ಹಡಪದ ಸಮಾಜವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕಾಗಿದೆ. ಸಮಾಜದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ನಾನು ಸಿದ್ದನಿದ್ದೇನೆ. ಸಮಾಜದವರ ಬೇಡಿಕೆಯಂತೆ ಸಮುದಾಯ ಭವನ ನಿರ್ಮಿಸಲು 30 ಲಕ್ಷರೂಗಳನ್ನು ನೀಡುತ್ತೇನೆ. ಇದರಿಂದ ಸಮಾಜದವರಿಗೆ ತಮ್ಮ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ. ಇದರ ಜೊತೆಯಲ್ಲಿ ಯಾದವಾಡದಲ್ಲಿ ಹಡಪದ ಅಪ್ಪಣ್ಣ ದೇವಸ್ಥಾನ ನಿರ್ಮಾಣಕ್ಕೆ ನೆರವು ಕಲ್ಪಿಸಲಾಗಿದೆ. ಸಮಾಜದ ಪ್ರಗತಿಗಾಗಿ ಶೈಕ್ಷಣಿಕವಾಗಿ ಮುಂದೆ ಬರುವಂತೆ ಸಮಾಜ ಬಾಂಧವರಿಗೆ ಕರೆ ನೀಡಿದರು.


ಹಡಪದ ಸಮಾಜವು ತೀರ ಹಿಂದುಳಿದ ಸಮಾಜವಾಗಿದೆ. ಕೆಲವರು ಸಣ್ಣ-ಸಣ್ಣ ಸಮಾಜಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಣ್ಣ-ಪುಟ್ಟ ಸಮುದಾಯಗಳು ಕೂಡಾ ಸಮಾಜದಲ್ಲಿ ಜಾಗೃತಿಯಾಗಬೇಕಾಗಿದೆ. ಸಮಾಜಗಳ ಸಮಗ್ರ ಅಭಿವೃದ್ದಿಗೆ ನಾವು ಕಂಕಣ ಬದ್ಧರಾಗಿದ್ದೇವೆ. ಸಂಘಟನೆಯಿಂದ ಮಾತ್ರ ನಾವು ಮುಂದೆ ಬರಲು ಸಾಧ್ಯವಾಗುತ್ತದೆ. ಕ್ಷೌರಿಕ ವೃತ್ತಿಯಲ್ಲಿರುವ ಹಡಪದ ಸಮಾಜದವರಿಗೆ ಅನ್ಯರಾಜ್ಯದವರು ಪೈಪೋಟಿ ನೀಡುತ್ತಿದ್ದು ಇದರಿಂದ ಮೂಲ ಸಮಾಜದ ವೃತ್ತಿಗೆ ಮಾರಕವಾಗಿ ಪರಿಣಮಿಸಿದೆ. ಇದರ ಬಗ್ಗೆ ಸಮಾಜದ ಬಾಂಧವರು ನನ್ನನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಾಗ ಪರಿಸ್ಥಿತಿಯನ್ನು ಬಗೆ ಹರಿಸಲಾಗಿದೆ. ಕಾಲಕ್ಕೆ ತಕ್ಕಂತೆ ತಮ್ಮ ವೃತ್ತಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಹಡಪದ ಸಮಾಜಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಬಸವ ಬೆಳವಿಯ ಶರಣ ಬಸವ ದೇವರು, ಕ್ಯಾರಗುಡ್ಡದ ಮಂಜುನಾಥ ಮಹಾಸ್ವಾಮಿಗಳು, ಖಾನಟ್ಟಿ ಬಸವಾನಂದ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಹಡಪದ ಸಮಾಜದ ಗೌರವಾಧ್ಯಕ್ಷ ಶಿವಬಸು ಸುಣಧೋಳಿ ವಹಿಸಿದ್ದರು.
ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಸಂತೋಷ ಸೋನವಾಲ್ಕರ, ಶಿವನಗೌಡ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ನಗರ ಘಟಕದ ಅಧ್ಯಕ್ಷ ಶಿವಬಸು ಉದಗಟ್ಟಿ, ಪ್ರಶಾಂತ ನಿಡಗುಂದಿ, ರಾಮಣ್ಣ ಹಂದಿಗುಂದ, ಮನೋಹರ ಸಣ್ಣಕ್ಕಿ, ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಣ್ಣ ಹಡಪದ, ಉಪಾಧ್ಯಕ್ಷ ಸಂತೋಷ ಹಡಪದ, ಬಸವರಾಜ ಹಡಪದ, ಜಿಲ್ಲಾಧ್ಯಕ್ಷ ಸುರೇಶ ಹಡಪದ, ನಾಗಪ್ಪ ಹಡಪದ, ಶಿವಾನಂದ ಹೂನುರ, ಅನ್ವರ ನದಾಫ, ಈರಪ್ಪ ಬನ್ನೂರ, ರುದ್ರಪ್ಪ ವಾಲಿ, ಶಶಿಧರ ಎಚ್, ಶಂಕರ ಉದಗಟ್ಟಿ, ಉಮೇಶ ಹಡಪದ ಸೇರಿದಂತೆ ಅನೇಕ ಸಮಾಜ ಬಾಂಧವರು ಉಪಸ್ಥಿತರಿದ್ದರು. ಸಾತಗೌಡ ನಾವಿ ಪ್ರಾಸ್ಥಾವಿಕವಾಗಿ ಮಾತನಾಡಿದರು, ಶೈಲಾ ಕೊಕ್ಕರಿ ನಿರೂಪಿಸಿದರು.


Spread the love

About Ad9 Haberleri

Check Also

ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …

Leave a Reply

Your email address will not be published. Required fields are marked *