ಮೂಡಲಗಿ: ಆರ್‌ಡಿಪಿಆರ್ ಇಲಾಖೆಯಿಂದ ಅರಭಾಂವಿ ಮತಕ್ಷೇತ್ರದ ಜೆಜೆಎಮ್ ಕಾಮಗಾರಿಗೆ ೮೮.೦೫ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಕೆಎಮ್‌ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇತ್ತಿಚೇಗೆ ಮುನ್ಯಾಳ ತೋಟದಲ್ಲಿ ಜೆಜೆಎಮ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಮನೆ ಮನೆಗೆ ನಲ್ಲಿ ನೀರಿನ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಹೇಳಿದರು.
ಕ್ಷೇತ್ರದ ಎಲ್ಲ ಭಾಗಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಮಾಡಿಕೊಡಲಾಗುತ್ತಿದೆ. ಜನರ ಮೂಲಭೂತ ಸಮಸ್ಯೆಗಳನ್ನು ನೀಗಿಸಲು ಪ್ರಯತ್ನಿಸಲಾಗುತ್ತಿದೆ. ಸಾರ್ವಜನಿಕ ಸಂಚಾರಕ್ಕಾಗಿ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೂಡಲಗಿ-ಮುನ್ಯಾಳ ರಸ್ತೆಯಿಂದ ಲಂಗೋಟಿ ತೋಟದ ವರೆಗಿನ ೨ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ೧ಕೋಟಿ ರೂಪಾಯಿ ಅನುದಾನ ಮಂಜುರಾಗಿದೆ ಎಂದು ಅವರು ಹೇಳಿದರು.
ಈ ಭಾಗದಲ್ಲಿ ಮದಲಮಟ್ಟಿ, ಶಿವಾಪೂರ, ರಂಗಾಪೂರ, ಖಾನಟ್ಟಿ, ಮುನ್ಯಾಳ, ಕಮಲದಿನ್ನಿ ತೋಟ, ಶಿವಾಪೂರ ತೋಟ, ಡೋಣಿ ತೋಟ, ಸ್ವಾಮಿ ತೋಟ ಮುನ್ಯಾಳ ಗ್ರಾಮದ ಸಾರ್ವಜನಿಕರಿಗೆ ಜೆಜೆಎಮ್ ಅಡಿಯಲ್ಲಿ ಮನೆ ಮನೆಗೆ ನೀರು ಸರಬರಾಜು ಆಗಲಿದೆ ಎಂದು ಹೇಳಿದರು.
ಫುಲಗಡ್ಡಿ ೯೮.೧೫ಲಕ್ಷ, ಕುಲಗೋಡ ಕಳ್ಳಿಮಡ್ಡಿ ತೋಟ ೧ಕೋಟಿ, ಶಿವಾಪೂರ-ಎಚ್ ೩ಕೋಟಿ ೨೯ಲಕ್ಷ, ನಿಂಗಾಪೂರ ೯೪ಲಕ್ಷ, ಸಜ್ಜಿಹಾಳ ೭೬.೬೦ಲಕ್ಷ, ತಿಗಡಿ ೨ಕೋಟಿ ೬೫ಲಕ್ಷ, ತಪಸಿ ೧ಕೋಟಿ ೮೮ಲಕ್ಷ, ಬೆಟಗೇರಿ ೩ಕೋಟಿ ೮೪ಲಕ್ಷ, ತಳಕಟ್ನಾಳ ೩ಕೋಟಿ ೧೯ಲಕ್ಷ, ಉದಗಟ್ಟಿ ೨ಕೋಟಿ ೨ಲಕ್ಷ, ಮುಸಗುಪ್ಪಿ ೩ಕೋಟಿ ೪೪ಲಕ್ಷ, ಮುನ್ಯಾಳ ೩ಕೋಟಿ ೮೨ಲಕ್ಷ, ಮನ್ನಾಪೂರ ೨೮.೩೫ಲಕ್ಷ, ಕಳ್ಳಿಗುದ್ದಿ ೧ಕೋಟಿ ೪೬ಲಕ್ಷ, ಹೊನ್ನಕುಪ್ಪಿ ೨ಕೋಟಿ ೨ಲಕ್ಷ, ರಂಗಾಪೂರ ೧ಕೋಟಿ ೨ಲಕ್ಷ, ಕೊಪದಟ್ಟಿ ೧ಕೋಟಿ೭೦ಲಕ್ಷ, ಕಾಮನಕಟ್ಟಿ ೧ಕೋಟಿ ೨೬ಲಕ್ಷ, ಚಿಗದೊಳ್ಳಿ ೧ಕೋಟಿ ೧೬ಲಕ್ಷ, ಗೋಸಬಾಳ ೧ಕೋಟಿ ೪೩ಲಕ್ಷ, ಬಿಲಕುಂದಿ ೨ಕೋಟಿ ೨೬ಲಕ್ಷ, ಲಕ್ಷ್ಮೇಶ್ವರ ೧ಕೋಟಿ ೪೧ಲಕ್ಷ, ಢವಳೇಶ್ವರ ೧ಕೋಟಿ ೮ಲಕ್ಷ, ಬಿಸನಕೊಪ್ಪ ೧ಕೋಟಿ ೫೨ಲಕ್ಷ, ಅರಳಿಮಟ್ಟಿ ೧ಕೋಟಿ ೮೪ಲಕ್ಷ, ಗುಲಗಂಜಿಕೊಪ್ಪ ೧ಕೋಟಿ ೧೦ಲಕ್ಷ, ಅಡಿಬಟ್ಟಿ ೨ಕೋಟಿ ೨ಲಕ್ಷ, ಖಾನಟ್ಟಿ ೨ಕೋಟಿ ೯ಲಕ್ಷ, ಖಂಡ್ರಟ್ಟಿ ೧ಕೋಟಿ ೬೬ಲಕ್ಷ, ಕಲಾರಕೊಪ್ಪ ೧ಕೋಟಿ ೪೩ಲಕ್ಷ, ರಡೆರಟ್ಟಿ ೧ಕೋಟಿ ೪೬ಲಕ್ಷ, ಮನ್ನಿಕೇರಿ ೧ಕೋಟಿ ೪೬ಲಕ್ಷ, ಬಗರನಾಳ ೨ಕೋಟಿ, ಹುಣಶ್ಯಾಳ ಪಿವೈ ೧ಕೋಟಿ ೭೯ಲಕ್ಷ, ಮೆಳವಂಕಿ ೫ಕೋಟಿ ೩೧ಲಕ್ಷ, ಭೈರನಟ್ಟಿ ೧ಕೋಟಿ ೪೫ಲಕ್ಷ, ಕಪರಟ್ಟಿ ೯೭ಲಕ್ಷ, ಹೊಸಟ್ಟಿ ೯೬ಲಕ್ಷ, ಹಡಗಿನಾಳ ೧ಕೋಟಿ ೩೮ಲಕ್ಷ, ಕೌಜಲಗಿ ೪ಕೋಟಿ ೭೫ಲಕ್ಷ, ಲೊಳಸೂರ ೧ಕೋಟಿ ೭೪ಲಕ್ಷ, ಹಳ್ಳೂರ ೩ಕೋಟಿ ೬೦ಲಕ್ಷ, ಕೆಮ್ಮನಕೂಲ ೩ಕೋಟಿ ೧೭ಲಕ್ಷ, ಸುಣಧೋಳಿ ೩ಕೋಟಿ ೯ಲಕ್ಷ, ಕಮಲದಿನ್ನಿ ೧ಕೋಟಿ ೩೬ಲಕ್ಷ ಸೇರಿ ಒಟ್ಟು ೮೮.೦೫ ರೂಪಾಯಿ ಅನುದಾನ ಜೆಜೆಎಮ್ ಕಾಮಗಾರಿಗೆ ಬಿಡುಗಡೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂಗಪ್ಪ ಸೂರನ್ನವರ, ಗೋವಿಂದ ವಂಟಗುಡಿ, ಆನಂದ ನಾಯ್ಕ, ಸಚೀನ ಕುಲಕರ್ಣಿ, ಮಹಾದೇವ ಗೋಡಿಗೌಡರ, ಮಲ್ಲಯ್ಯ ಹಿರೇಮಠ, ರಮೇಶ ಗೋಡಿಗೌಡರ, ಲಕ್ಕಪ್ಪ ಲಂಗೋಟಿ, ಅಂಬರೀಶ ನಾಯ್ಕ, ಶಿವಬಸು ಡೊಂಬರ, ಧರೆಪ್ಪ ಕುಡಚಿ, ಶಿವಪ್ಪ ಖಾನಟ್ಟಿ, ಮಹಾದೇವ ಮಾಸನ್ನವರ, ಸಂಗಯ್ಯ ಹಿರೇಮಠ, ಮಹಾದೇವ ಬಾಗೋಜಿ, ಮುತ್ತೆಪ್ಪ ಬಿದರಿ, ಅಶೋಕ ಹುಕ್ಕೇರಿ, ಬಸಯ್ಯ ಹಿರೇಮಠ, ಮಹಾದೇವ ಬೆಳಗಲಿ, ಆರ್‌ಡಿಪಿಆರ್ ಎಸ್‌ಒ ಆಯ್ ಎಮ್ ದಪೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Home / ಮೂಡಲಗಿ / ಜೆಜೆಎಂ ಕಾಮಗಾರಿಗೆ ೮೮.೦೫ ಕೋಟಿ ರೂ ಅನುದಾನ ಬಿಡುಗಡೆ- ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
Check Also
ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …