Breaking News

ಮೂಡಲಗಿ-ಧರ್ಮಸ್ಥಳ ನೂತನ ಬಸ್ಸ್ ಸೇವೆ ಆರಂಭ

Spread the love


ಮೂಡಲಗಿ: ಮೂಡಲಗಿ ಹಾಗೂ ಸುತ್ತಮುತ್ತಲಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮೂಡಲಗಿ-ಧರ್ಮಸ್ಥಳ ಬಸ್ಸ್ ಸೇವಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಸಕ್ತಿಯಿಂದ ಆರಂಭವಾದ ಬಸ್ಸ್ ಸೇವೆಗೆ ಮೂಡಲಗಿ ತಾಲೂಕಾ ಕಾನಿಪ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಪೂಜೆಸಲ್ಲಿಸಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಸಾರಿಗೆ ಇಲಾಖೆಯ ಗೋಕಾಕ ಘಟಕದ ವ್ಯವಸ್ಥಾಪಕ ಅಪ್ಪಣ್ಣ ಛಬ್ಬಿ ಮಾತನಾಡಿ, ಪ್ರತಿ ದಿನ ಮೂಡಲಗಿಯಿಂದ ಮಧ್ಯಾಹ್ನ 3-15 ಗಂಟೆಗೆ ಮೂಡಲಗಿ ಹೊರಟು ಮುಂಜಾನೆ 6-30ಕ್ಕೆ ಧರ್ಮಸ್ಥಳ ತಲುಪಿ ಮರಳಿ ಮಧ್ಯಾಹ್ನ 3-15ಕ್ಕೆ ಧರ್ಮಸ್ಥಳ ದಿಂದ ಹೊರಟ್ಟು ಮುಂಜಾನೆ 6 ಗಂಟೆಗೆ ಮೂಡಲಗಿ ತಲುಪಿ ಮರಳಿ ಗೋಕಾಕಕ್ಕೆ ಬಸ್ಸು ಹೋಗುವುದು. ಮೂಡಲಗಿ-ಧರ್ಮಸ್ಥಳ ಬಸ್ಸಿನ ಸೌಕರ್ಯ ಕಲ್ಪಿಸುವುದರಿಂದ ಮೂಡಲಗಿ ಪಟ್ಟಣದಿಂದ ಮುಂಜಾನೆಯ ಬಸ್ಸಿನ ಕೊರತೆಯನ್ನು ಹೊಗಲಾಡಿಸಲಾಗಿದು, ಈ ಬಸ್ಸಿನ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ಸಂಧರ್ಭದಲ್ಲಿ ಸಾರ್ವಜನಿಕರು ಮೂಡಲಗಿಯಿಂದ ಮೈಸೂರ, ಬಾಗಲಕೋಟ, ಕೋಲ್ಹಾಪೂರ ಹಾಗೂ ವಿವಿಧ ನಗರಗಳಿಗೆ ಬಸ್ಸಿನ ಸೌಕರ್ಯಗಳನ್ನು ಒದಗಿಸಬೇಕೆಂದು ಸಾರಿಗೆ ಇಲಾಖೆಯ ಅಧಿಕಾರಿಗಳಲ್ಲಿ ಒತ್ತಾಯಿಸಿದರು.
ಈ ವೇಳೆಯಲ್ಲಿ ತಹಶೀಲ್ದಾರ ಶಿವಾನಂದ ಬಬಲಿ, ತಾ.ಪಂ ಇಒ ಎಫ್.ಜಿ.ಚಿನ್ನವರ, ಬಿ.ಇ.ಒ ಅಜೀತ ಮನ್ನಿಕೇರಿ, ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ನಿರ್ದೇಶಕರ ರವೀಂದ್ರ ಸೋನವಾಲಕರ, ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಅಬ್ದುಲ್ ಮೀರಜಾನಾಯ್ಕ, ಮೂಡಲಗಿ ಬಸ್ಸ್ ನಿಲ್ದಾಣಾಧಿಕಾರಿಗಳ ಬಿ.ಬಿ.ದಂಡಾಪೂರ, ಶ್ರೀಶೈಲ್ ದೇಸಾರಟ್ಟಿ, ಇಲಾಖೆಯ ಸಿಬ್ಬಂದಿಗಳಾದ ಪ್ರಕಾಶ ಕಳಿಮನ್ನಿ, ಹನೀಪ ಡಾಂಗೆ ಮತ್ತು ಮೂಡಲಗಿ ಕಾನಿಪ ಘಟಕದ ಅಧ್ಯಕ್ಷ ಕೆ.ಬಿ.ಗಿರೆಣ್ಣವರ, ಸದಸ್ಯ ರಾಜು ಮಗದುಮ್, ಮತ್ತಿತರರು ಇದ್ದರು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *