
ಮೂಡಲಗಿ: ಪಟ್ಟಣದ ತಾ.ಪಂ ಕಾರ್ಯಲಯದಲ್ಲಿ ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮೀತಿಯಿಂದ ಮತದಾನ ಜಾಗೃತಿಗೆ ಚಾಲನೆ ನೀಡಿದರು.
ಸ್ವೀಪ್ ಸಮೀತಿಯ ಅಧ್ಯಕ್ಷ ಹಾಗೂ ತಾ.ಪಂ ಇಒ ನವೀನಪ್ರಸಾದ ಕಟ್ಟಿಮನಿ ಮತದಾನ ಜಾಗೃತಿಗೆ ಚಾಲನೆ ನೀಡಿ ಮಾತನಾಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೋಬ್ಬರು ತಮ್ಮ ಮತ ನೀಡುವ ಮೂಲಕ ಹಕ್ಕು ಚಲಾಯಿಸಿ ತಮ್ಮ ಅಕ್ಕ ಪಕ್ಕದಲ್ಲಿರು ಅರ್ಹ ಮತದಾರಿಗೆ ಮತದಾನ ಮಾಡಲು ಜಾಗೃತಿ ಮೂಡಿಸಬೇಕೆಂದರು.
ಈ ಸಮಯದಲ್ಲಿ ತಾ.ಪಂ ಸಹಾಯಕ ನಿರ್ದೇಶಕರಾದ ಸಂಗಮೇಶ ರೊಡ್ಡನವರ, ಚಂದ್ರಶೇಖರ ಬಾರ್ಕಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಅಂಜನಾ ಗಚ್ಚಿ ಹಾಗೂ ಕಚೇರಿಯ ಸಿಬ್ಬಂದಿವರ್ಗದವರು ಇದ್ದರು
Ad9 News Latest News In Kannada