ಮೂಡಲಗಿ: ಕತ್ತಿ ಹೇಳಿಕೆ ಖಂಡಿಸಿ ದಲಿತ ಒಕ್ಕೂಟ ಹಾಗೂ ಜಾರಕಿಹೊಳಿ ಅಭಿಮಾನಿಗಳಿಂದ ಪ್ರತಿಭಟನೆ
ಮೂಡಲಗಿ: ರಮೇಶ ಕತ್ತಿ ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನಕರವಾಗಿ ಮಾತನಾಡಿ ನಿಂದಿಸಿದ್ದಾರೆ ಎಂದು ಆರೋಪಿಸಿ ರಮೇಶ ಕತ್ತಿ ಅವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಮೂಡಲಗಿ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಜಾರಕಿಹೊಳಿ ಅಭಿಮಾನಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಮೇಶ ಕತ್ತಿ ಅಣುಕು ಶವ ಹೊತ್ತು ಮೆರವಣಿಗೆ ಮೂಲಕ ಕಲ್ಮೇಶ್ವರ ವೃತ್ತಕ್ಕೆ ಆಗಮಿಸಿ ಪಟಾಕಿ ಸಿಡಿಸಿ ಕೆಲ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟಿಸಿ ಗ್ರೆಡ್ 2 ತಹಶೀಲ್ದಾರ ಶಿವಾನಂದ ಬಬಲಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ದಲಿತ ಮುಖಂಡರಾದ ರಮೇಶ ಸಣ್ಣಕ್ಕಿ ಮಾತನಾಡಿ, ನಾಯಕ ಸಮಾಜವನ್ನು ಅವಹೇಳನ ಮಾಡಿರುವ ರಮೇಶ ಕತ್ತಿಯವರನ್ನು ಕೂಡಲೇ ಬಂಧಿಸಿ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ನಿರ್ಲಕ್ಷ್ಯ ತೋರಿದಲ್ಲಿ ದಲಿತ ಒಕ್ಕೂಟ ಮತ್ತು ಜಾರಕಿಹೊಳಿ ಅಭಿಮಾನಿಗಳಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ದಲಿತ ಮುಖಂಡರಾದ ಸತ್ಯಪ್ಪ ಕರವಾಡೆ,ಬಾಳೇಶ ಬನ್ನಟ್ಟಿ ಮಾತನಾಡಿದರು .
ಪ್ರತಿಭಟನೆಯಲ್ಲಿ ಮರೆಪ್ಪ ಮರೆಪ್ಪಗೋಳ, ರವಿ ಸಣ್ಣಕ್ಕಿ, ಶಾಬಪ್ಪ ಸಣ್ಣಕ್ಕಿ, ಎಮ್ ಡಿ.ರಮೇಶ ಸಣ್ಣಕ್ಕಿ, ಅನ್ವರ್ ನದಾಫ್, ಮಲೀಕ ಹುಣಶ್ಯಾಳ, ಯಲ್ಲಾಲಿಂಗ ವಾಳದ ಅನೇಕರು ಇದ್ದರು