Breaking News

ಬಿ.ಕಾಂ ಪದವಿ ವಿದ್ಯಾರ್ಥಿಗಳಲ್ಲಿ ಸಿ.ಎ. ಕೋರ್ಸ್ ಅರಿವು ಮೂಡಿಸುವುದು ಅವಶ್ಯಕವಿದೆ ಚಾರ್ಟರ್ಡ್ ಅಕೌಂಟಟ್ ಜಯಕುಮಾರ ಪಾಟೀಲ ಹೇಳಿದರು

Spread the love


ಮೂಡಲಗಿ : ಬಿ.ಕಾಂ ಪದವಿ ವಿದ್ಯಾರ್ಥಿಗಳಲ್ಲಿ ಸಿ.ಎ. ಕೋರ್ಸ್ ಅರಿವು ಮೂಡಿಸುವುದು ಅವಶ್ಯಕವಿದೆ ಇಂದು ತಾಂತ್ರಿಕತೆ ಮತ್ತು ವೈಜ್ಞಾನಿಕತೆ ಬೆಳದಂತೆ ಅನೇಕ ಕೋರ್ಸಗಳು ಪದವಿಗಳು ಬೆಳೆದರು ಚಾರ್ಟರ್ಡ್ ಅಕೌಂಟ್ ಕೋರ್ಸ ತನ್ನ ಮೌಲ್ಯವನ್ನು ಹೆಚ್ಚು ಅಭಿವೃಧ್ದಿ ಗೊಳಿಸಿಕೊಂಡಿದೆ ಅಲ್ಲದೆ ಬಿಕಾಂ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಭವಿಷ್ಯದ ದೂರದೃಷ್ಟಿ ಇಲ್ಲದೇ ಕೇವಲ ಬ್ಯಾಂಕ್ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಪ್ರಾದ್ಯಾನತೆ ನೀಡಿ ಸಿ.ಎ. ಕೋರ್ಸ್ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿದ್ದು ಈ ಭಾವನೆಯನ್ನು ಬದಲಾಯಿಸಿ ಆರ್ಥಿಕ, ವಾಣಿಜ್ಯ ವ್ಯವಹಾರಿಕ ದೃಷ್ಟಿಯಲ್ಲಿ ಸಿ.ಎ.ಕೋರ್ಸ್ ಮಹತ್ವದಾಗಿದೆ ಎಂದು ಬೆಳಗಾವಿಯ ಚಾರ್ಟರ್ಡ್ ಅಕೌಂಟಟ್ ಜಯಕುಮಾರ ಪಾಟೀಲ ಹೇಳಿದರು

ಅವರು ಮೂಡಲಗಿಯ ಆರ್.ಡಿ.ಎಸ್. ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯದ ಬಿಕಾಂ ವಿದ್ಯಾರ್ಥಿಗಳಿಗೆ ದ ಇನ್ಸೂಸ್ಟೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ ವತಿಯಿಂದ ಕರಿಯರ್ ಕೌನ್ಸಿಲಿಂಗ್ ಗ್ರುಪ್ ವತಿಯಿಂದ ಹಮ್ಮಿಕೊಂಡ ಚಾರ್ಟರ್ಡ್ ಅಕೌಂಟ್ಸ್ ಕೋರ್ಸ್ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಸಾಧನೆಗೆ ಸಾವಿರಾರು ದಾರಿಗಳು ಅದರಲ್ಲಿ ಚಾರ್ಟರ್ಡ್ ಅಕೌಂಟ್ಸ್ ಕೋರ್ಸ್‍ನಲ್ಲಿ ಹೆಚ್ಚಿನ ಅವಕಾಶಗಳು ಇರುವುದರಿಂದ ಇದರ ಉಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.

ಇನ್ನೋರ್ವ ಬೆಳಗಾವಿಯ ಚಾರ್ಟರ್ಡ್ ಅಕೌಂಟಟ್‍ವಿನಾಯಕ ಅಸುಂಡಿ ಮಾತನಾಡಿ ಚಾರ್ಟರ್ಡ್ ಅಕೌಂಟ್ಸ್ ಕೋರ್ಸ್ ವಿಶೇಷತೆಯನ್ನು ಹೊಂದಿದ್ದು ಇಂದಿನ ಅನೇಕ ಇಲಾಖೆಗಳಲ್ಲಿ & ಸರಕಾರಿ ಹಣಕಾಸಿನ ವಿಭಾಗದಲ್ಲಿ ವ್ಯವಹಾರಿಕ ಕ್ಷೇತ್ರದಲ್ಲಿ ತೆರಿಗೆ ವಿಭಾಗದಲ್ಲಿ ಹಾಗೂ ಇಂದಿನ ಪ್ರತಿಯೊಂದು ವ್ಯವಹಾರದಲ್ಲಿ ಲೋಕಪರಿಶೋಧನೆಗಳು ನಡೆಯುತ್ತೇವೆ ಅವುಗಳನ್ನು ನಿರ್ವಹಿಸುವ ಮತ್ತು ಪರಿಶೀಲಿಸುವ ಜವಾಬ್ದಾರಿಯನ್ನು ಚಾರ್ಟರ್ಡ್ ಅಕೌಂಟ್ಸ್ ಕೋರ್ಸ್ ಅರ್ಹತೆ ಹೊಂದಿದವರಿಗೆ ಅಧಿಕಾರ ಇರುತ್ತದೆ ಅದನ್ನು ಪಡೆದು ಕೊಳ್ಳಲು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಶ್ರಮವರಿತು ಅಧ್ಯಯನ ಮತ್ತು ಕ್ರಿಯಾಶೀಲ ಚಟುವಟಿಕೆಯಿಂದ ಚಾರ್ಟರ್ಡ್ ಅಕೌಂಟ್ಸ್ ಕೋರ್ಸ ಮುಗಿಸಿ ಅರ್ಹತೆ ಗಿಟ್ಟಿಸಿಕೊಳ್ಳಬಹುದು ಅದರ ಬಗ್ಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸವನ್ನು ದ ಇನ್ಸೂಸ್ಟೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ ಶಾಖೆ ಬೆಳಗಾವಿ ಮಾಡುತ್ತಿದೆ ಇಂತಹ ಕೋರ್ಸ್ ಬಗ್ಗೆ ತಿಳಿವಳಿಕೆ ಪಡೆಯಲು ನೇರವಾಗಿ ನಮ್ಮ ಸದಸ್ಯರನ್ನು ಸಂಪರ್ಕಿಸಲು ಈ ಮೂಲಕ ವಿನಂತಿಸುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಸತ್ಯೆಪ್ಪಾ ಗೋಟೂರೆ ವಹಿಸಿಕೊಂಡು ಮಾತನಾಡಿ ಬಿ.ಕಾಂ. ವಿದ್ಯಾರ್ಥಿಗಳಿಗೆ ಅವಕಾಶದ ಕ್ಷೇತ್ರಗಳು ಹೆಮ್ಮರವಾಗಿದ್ದು ಅವುಗಳ ಪ್ರಯೋಜವನ್ನು ಪಡೆದುಕೊಳ್ಳಲು ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಟಾಕ್ಸ್ ಕನ್ಸಲ್ಟೆಂಟ್ ಬಿ. ಎ. ದೊಡ್ಡಮನಿ ಚೈತನ್ಯ ಸಂಸ್ಥೆಯ ಸಂಸ್ಥಾಪಕರಾದ ಎಸ್.ಎಸ್. ಹೊರಟ್ಟಿ
ಮತ್ತಿತರರು ಹಾಜರಿದ್ದರು
ಸುನಂದಾ ಅಂಗಡಿ ನಿರೂಪಿಸಿದರು ಸಂಗಮೇಶ ಕುಂಬಾರ ಸ್ವಾಗತಿಸಿದರು. ಪಿ.ಬಿ.ಚೌಡಕಿ ವಂದಿಸಿದರು.


Spread the love

About Ad9 News

Check Also

ಅಯ್ಯಪ್ಪಸ್ವಾಮಿ ಭಕ್ತರಿಗೆ ರೆಲ್ವೆಯಲ್ಲಿ ಆಸನ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಮನವಿ

Spread the love ಬೆಳಗಾವಿ: ಶಬರಿಮಲೆ ಯಾತ್ರೆ ಮಾಡುವ ಶ್ರೀ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಹಾಗೂ ಭಕ್ತರಿಗೆ ಪುನಾ-ಏರ್ನಾಕುಲಂ ಸಂಚರಿಸುವ ರೈಲ್ವೆಯಲ್ಲಿ …