Breaking News
Home / ಬೆಳಗಾವಿ / ಸತತ ಮೂರನೇ ಬಾರಿ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಸರಕಾರಿ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ಬಾಗೋಜಿ

ಸತತ ಮೂರನೇ ಬಾರಿ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಸರಕಾರಿ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ಬಾಗೋಜಿ

Spread the love


ಮೂಡಲಗಿ: ಶಿಕ್ಷಕ ಸಮುದಾಯದ ಸಹಕಾರ ಹಾಗೂ ಸಹಕಾರದಿಂದಾಗಿ ಆರ್ಥಿಕವಾಗಿ ನಾವು ಬೆಳೆಯುವದರ ಜೊತೆಗೆ ಸಂಘದ ಬೆಳೆವಣಿಗೆಯಲ್ಲಿ ಎಲ್ಲರೂ ಪರಸ್ಪರ ಕೈ ಜೋಡಿಸಿದರ ಫಲವಾಗಿ ಸತತ ಮೂರನೇ ಬಾರಿ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಸರಕಾರಿ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ಬಾಗೋಜಿ ಹೇಳಿದರು.

ಅವರು ಇಂದು ಜರುಗಿದ 2020-2025 ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಮಾತನಾಡಿದರು. ಮೂಡಲಗಿ ವಲಯದ ಸರಕಾರಿ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರ ಸಂಘವು ಕೆ.ಎಮ್.ಎಫ್ ರಾಜ್ಯಾಧ್ಯಕ್ಷರು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಬಿಇಒ ಅಜಿತ ಮನ್ನಿಕೇರಿಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಹಕಾರಿ ಸಂಘಗಳು ಬೆಳೆಯಲು ಸಂಘದ ಪದಾಧಿಕಾರಿಗಳ ಸದಸ್ಯರ ಪ್ರಾಮಾಣಿಕ ವ್ಯವಹರಿಸುವ ಮೂಲಕ ಸಹಕಾರಿ ಕ್ಷೇತ್ರ ಆರ್ಥಿಕವಾಗಿ ಬೆಳೆಯಲು ಸಹಕರಿಸಲು ಕೋರಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುಭಾಸ ಭಾಗೋಜಿ, ಉಪಾಧ್ಯಕ್ಷ ಎಮ್ ಎಮ್ ದಬಾಡಿ, ನಿರ್ದೇಶಕರಾಗಿ ಟಿ.ಕರಿಬಸವರಾಜು, ಸಿ.ಬಿ ಪೂಜೇರಿ, ಪಿ.ಜಿ.ಪಾಟೀಲ, ಎಸ್.ಬಿ ಕಮತೆ, ಲತೀಪಸಾಬ ಕೊಕಟನೂರ, ಬಿ.ಸಿ ಕೂಟ್ಯಾಳ, ಪಿ.ಬಿ ಮದಬಾವಿ, ಆರ್.ಎಸ್ ಮಗದುಮ್, ಡಾ. ಮಹೇಶ ಬಾಯನಾಯಿಕ, ಮಹದೇವಿ ಹುಕ್ಕೇರಿ, ಸುಜಾತಾ ರಾಮಗಿರಿ ಕಾರ್ಯದರ್ಶಿಯಾಗಿ ಮೈಬೂಬ ದಬಾಡಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಎಸ್.ಬಿ ಬಿರಾದಾರ ಪಾಟೀಲ ಕಾರ್ಯನಿರ್ವಹಿಸಿದರು. ಬಿ.ಆರ್.ಪಿ ಜಿ.ಆರ್ ಪತ್ತಾರ, ಎ.ಎಲ್.ತಹವಿಲ್ದಾರ, ಎಲ್.ಎಲ್ ಖಾನಪ್ಪನವರ, ಕೆ.ಯು ಯಲಿಗಾರ, ಎಸ್.ಬಿ ನ್ಯಾಮಗೌಡರ, ಆರ್.ಬಿ ಕಳ್ಳಿಗುದ್ದಿ, ಎ.ಆರ್ ಕುರುಬರ ಉಪಸ್ಥಿತರಿದ್ದರು.

ವರದಿ: ಕೆ.ವಾಯ್‌.ಮೀಶಿ


Spread the love

About Ad9 Haberleri

Check Also

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ

Spread the loveಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ …